ಮಾಸ್ಕೋ(ರಷ್ಯಾ): ಚೀನಾ ದೇಶಕ್ಕೆ ವಿತರಿಸಲಾಗುತ್ತಿದ್ದ ಎಸ್ -400 ಕ್ಷಿಪಣಿಗಳನ್ನು ಇನ್ಮುಂದೆ ಸ್ಥಗಿತಗೊಳಿಸಲಾಗುವುದು ಎಂದು ರಷ್ಯಾ ಹೇಳಿದೆ.
ಈ ಬಗ್ಗೆ ಚೀನಾದ ಪತ್ರಿಕೆ ಸೋಹು ಯುಎ ವೈರ್ ವರದಿ ಮಾಡಿದ್ದು, ಈ ಬಾರಿ ರಷ್ಯಾವು ಚೀನಾಕ್ಕೆ ನಿಡುತ್ತಿದ್ದ ಎಸ್ -400 ಕ್ಷಿಪಣಿಗಳ ವಿತರಣೆಯನ್ನು ಮುಂದೂಡುವುದಾಗಿ ಘೋಷಿಸಿದೆ. ಸ್ವಲ್ಪ ಮಟ್ಟಿಗೆ, ಇದು ಚೀನಾದ ಹಿತದೃಷ್ಟಿಯಿಂದ ಒಳ್ಳೆಯದು ಎಂದು ಹೇಳಬಹುದು. ಆದರೆ ಶಸ್ತ್ರಾಸ್ತ್ರಗಳನ್ನು ಪಡೆಯುವುದು ಸರಕುಪಟ್ಟಿಗೆ ಸಹಿ ಮಾಡಿದಷ್ಟು ಸುಲಭವಲ್ಲ ಎಂದು ಹೇಳಿದೆ.
ಎಸ್ -400 ಕ್ಷಿಪಣಿಗಳನ್ನು ರಷ್ಯಾ ಚೀನಾಗೆ ವಿತರಿಸುವುದನ್ನು ಸ್ಥಗಿತಗೊಳಿಸಿರುವುದಕ್ಕೆ ಕಾರಣ ಬೇರೊಬ್ಬರ ಒತ್ತಾಯ ಎಂದು ಚೀನಾ ಆರೋಪಿಸಿದೆ. ಕ್ಷಿಪಣಿಗಳ ವಿತರಣೆ ಸ್ಥಗಿತದಿಂದಾಗಿ ಪೀಪಲ್ಸ್ ಲಿಬರೇಶನ್ ಸೈನ್ಯದ ವಿರೋಧಿ ಕ್ರಮಗಳ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗ್ತಿದೆ. ಇದರಿಂದಾಗಿ ಚೀನಾಕ್ಕೆ ದೊಡ್ಡ ಪೆಟ್ಟು ಬಿದ್ದಂತಾಗಿದೆ.
2018 ರಲ್ಲಿ ಚೀನಾವು ರಷ್ಯಾದಿಂದ ಎಸ್ -400 ಕ್ಷಿಪಣಿಯ ಮೊದಲ ಬ್ಯಾಚ್ ಅನ್ನು ಪಡೆದುಕೊಂಡಿದೆ ಎಂದು ರಷ್ಯಾದ ಟಾಸ್ ಸುದ್ದಿ ಸಂಸ್ಥೆ ತಿಳಿಸಿದೆ.
ಎಸ್ -400 ಕ್ಷಿಪಣಿ ವ್ಯವಸ್ಥೆಯು ಎಸ್ -300 ನ ಮುಂದುವರೆದ ಆವೃತ್ತಿಯಾಗಿದೆ. ಇದು 400 ಕಿ.ಮೀ ವ್ಯಾಪ್ತಿಯಲ್ಲಿ ಬರುವ ಕ್ಷಿಪಣಿಗಳು ಮತ್ತು ಐದನೇ ತಲೆಮಾರಿನ ಯುದ್ಧ ವಿಮಾನಗಳನ್ನು ಸಹ ಹೊಡೆದುರುಳಿಸುತ್ತದೆ.
ವಿಶೇಷವೆಂದರೆ ಚೀನಾಗೆ ವಿತರಣೆಯನ್ನು ನಿಲ್ಲಿಸಿರುವ ರಷ್ಯಾ, ಭಾರತಕ್ಕೆ ಕ್ಷಿಪಣಿಗಳನ್ನು ತಲುಪಿಸುವ ಭರವಸೆಯನ್ನು ಪುನರುಚ್ಚರಿಸಿದೆ.