ಇಸ್ಲಮಾಬಾದ್(ಪಾಕಿಸ್ತಾನ): ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ತನ್ನೊಂದಿಗೆ ಸಂಭೋಗ ನಡೆಸಲು ಬಯಸಿದ್ದಾಗಿ ಪಾಕ್ ಮೂಲದ ಅಮೆರಿಕಾ ಬ್ಲಾಗರ್ ಸಿಂಥಿಯಾ ಡಾನ್ ರಿಚ್ಚಿ ಒಮ್ಮೆ ಹೇಳಿದ್ದಳು ಎಂದು ಪಾಕಿಸ್ತಾನದ ಟಿವಿ ನಿರೂಪಕಿ ಅಲಿ ಸಲೀಮ್ ಅಲಿಯಾನ್ ಬೇಗಂ ನವಾಜಿಶ್ ಅಲಿ ಗುಪ್ತ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ.
ರಿಚ್ಚಿ ಒಂದು ಕಾಲದಲ್ಲಿ ಇಮ್ರಾನ್ ಖಾನ್ ಅವರಿಗೆ ತುಂಬಾ ಆಪ್ತಳಾಗಿದ್ದಳು. ಈ ಹಿಂದೆ ಅವರೊಂದಿಗೆ ಕೋಣೆಯನ್ನೂ ಹಂಚಿಕೊಂಡಿದ್ದಳು ಎಂದು ಅಲಿ ಸಲೀಮ್ ಹೇಳಿದ್ದಾರೆ. ಈ ಸಮಯದಲ್ಲಿ ಆಕೆ ಅವರೊಂದಿಗೆ ವಿಶ್ವಾಸ ಹೊಂದಿದ್ದಳು ಮತ್ತು ಇಮ್ರಾನ್ ಖಾನ್ ಅವಳೊಂದಿಗೆ ಸಂಭೋಗ ನಡೆಸಲು ಪ್ರಸ್ತಾಪಿಸಿದ್ದಾಗಿ ಹೇಳಿದ್ದಳು ಎಂದು ಅಲಿ ಸಲೀಮ್ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ.
2011ರಲ್ಲಿ ಆಗಿನ ಸಚಿವ ರೆಹಮಾನ್ ಮಲಿಕ್ ನನ್ನ ಮೇಲೆ ಅತ್ಯಾಚಾರ ನಡೆಸಿದ್ದರು. ಅಷ್ಟೇ ಅಲ್ಲದೆ, ಮಾಜಿ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ನನ್ನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಸಿಂಥಿಯಾ ಡಿ.ರಿಚ್ಚಿ ಫೇಸ್ಬುಕ್ ಲೈವ್ನಲ್ಲಿ ಆರೋಪಿಸಿದ್ದಳು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಲಿ ಸಲೀಮ್ ಅವರು, ಇಮ್ರಾನ್ ಖಾನ್ ವಿಷಯ ಹೇಳುವಷ್ಟು ನನ್ನೊಂದಿಗೆ ಹತ್ತಿರದಲ್ಲಿದ್ದರೆ, ಮಾಜಿ ಸಚಿವರು ಅತ್ಯಾಚಾರ ನಡೆಸಿದ್ದ ವಿಷಯವನ್ನೂ ಹೇಳಬಹುದಿತ್ತು. ಆದರೆ ನನ್ನ ಬಳಿ ಆ ವಿಷಯದ ಬಗ್ಗೆ ರಿಚ್ಚಿ ಮಾತನಾಡಿಲ್ಲ ಎಂದಿದ್ದಾರೆ.