ನ್ಯೂಯಾರ್ಕ್: ಅಮೆರಿಕದಲ್ಲಿ ಕೊರೊನ ಸೋಂಕಿಗೆ ಇಲ್ಲಿಯವರೆಗೆ ಬರೋಬ್ಬರಿ 20 ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಚೀನಾದಲ್ಲಿ ಹುಟ್ಟಿಕೊಂಡ ಈ ಮಹಾಮಾರಿ 195ಕ್ಕೂ ಹೆಚ್ಚು ದೇಶಗಳಲ್ಲಿ ಲಗ್ಗೆ ಹಾಕಿದ್ದು, ಅಮೆರಿಕದಲ್ಲಿ ಮಾತ್ರ ಅತಿ ವೇಗವಾಗಿ ವೈರಸ್ ಹರಡುತ್ತಿದೆ. ಇಲ್ಲಿಯವರೆಗಿನ ಮಾಹಿತಿ ಪ್ರಕಾರ 20 ಸಾವಿರ ಮಂದಿ ಮರಣ ಹೊಂದಿದ್ದು, 1600 ಮಂದಿ ಗುಣಮುಖರಾಗಿದ್ದಾರೆ. ಉಳಿದಂತೆ 5,04,780ಕ್ಕೂ ಹೆಚ್ಚು ಜನರು ಸೋಂಕಿನಿಂದ ಬಳಲುತ್ತಿದ್ದು, ಹೆಚ್ಚಿನ ಸಾವು ಸಂಭವಿಸುವ ಸಾಧ್ಯತೆ ದಟ್ಟವಾಗಿದೆ.
-
Supporting our partners in the fight against #Covid19. Consignment of hydroxichloroquine from India arrived at Newark airport today. pic.twitter.com/XZ6utQ6JHr
— Taranjit Singh Sandhu (@SandhuTaranjitS) April 11, 2020 " class="align-text-top noRightClick twitterSection" data="
">Supporting our partners in the fight against #Covid19. Consignment of hydroxichloroquine from India arrived at Newark airport today. pic.twitter.com/XZ6utQ6JHr
— Taranjit Singh Sandhu (@SandhuTaranjitS) April 11, 2020Supporting our partners in the fight against #Covid19. Consignment of hydroxichloroquine from India arrived at Newark airport today. pic.twitter.com/XZ6utQ6JHr
— Taranjit Singh Sandhu (@SandhuTaranjitS) April 11, 2020
ಈ ಮಹಾಮಾರಿಗೆ ನ್ಯೂಯಾರ್ಕ್ ನಗರದಲ್ಲೇ ಹೆಚ್ಚು ಸೋಂಕಿತರು ಬಲಿಯಾಗಿದ್ದು, ಇದೀಗ 1,59,937 ಜನರು ಸೋಂಕಿನಿಂದ ಬಳಲುತ್ತಿದ್ದಾರೆ. ಉಳಿದಂತೆ ಕ್ಯಾಲಿಫೋರ್ನಿಯಾ, ಮಿಚಿಗನ್ ಸಿಟಿಯಲ್ಲೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ.
ನ್ಯೂಯಾರ್ಕ್ ತಲುಪಿದ ಹೈಡ್ರೋಕ್ಸಿಕ್ಲೋರೋಕ್ವಿನ್!
ಕಳೆದ ಕೆಲ ದಿನಗಳ ಹಿಂದೆ ಅಮೆರಿಕಕ್ಕೆ ಕೊರೊನಾ ರಾಮಬಾಣ ಹೈಡ್ರೋಕ್ಸಿಕ್ಲೋರೋಕ್ವಿನ್ ಕಳುಹಿಸಿಕೊಂಡಲು ಮುಂದಾಗಿದ್ದ ಭಾರತ ಅದನ್ನ ರವಾನೆ ಮಾಡಿದ್ದು, ನ್ಯೂಯಾರ್ಕ್ ಏರ್ಪೋರ್ಟ್ ತಲುಪಿದೆ. ಔಷಧಿ ತಲುಪಿರುವ ಬಗ್ಗೆ ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಟ್ವೀಟ್ ಮಾಡಿ ಮಾಹಿತಿ ನೀಡಿದೆ.
ಉಳಿದಂತೆ ಇಟಲಿಯಲ್ಲಿ ಒಟ್ಟು ಕೊರೊನಾ ರೋಗಿಗಳ ಸಂಖ್ಯೆ 135,586, ಸಾವಿನ ಸಂಖ್ಯೆ 17,127. ಸ್ಪೇನ್‌ನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 141,942, ಸಾವಿನ ಸಂಖ್ಯೆ 14,045. ಈ ಮೂರು ದೇಶಗಳಲ್ಲಿ ಸಾವಿನ ಸಂಖ್ಯೆ ಈಗಾಗಲೇ 15 ಸಾವಿರ ಗಡಿ ದಾಟಿ ಮುನ್ನುಗುತ್ತಿದೆ.