ETV Bharat / international

ಟೋಕಿಯೋ ಒಲಿಂಪಿಕ್​​ ಕ್ರೀಡಾ ಜ್ಯೋತಿ ಟೊಯೊಹಾಶಿಯಲ್ಲಿ... ವಿಡಿಯೋ - ಟೋಕಿಯೋ ಒಲಂಪಿಕ್​​ನ ಕ್ರೀಡಾ ಜ್ಯೋತಿ

ಜುಲೈ 23ರಿಂದ ಆರಂಭಗೊಳ್ಳಲಿರುವ ಟೋಕಿಯೋ ಒಲಿಂಪಿಕ್​​ ಕ್ರೀಡಾ ಜ್ಯೋತಿ ಈಗಾಗಲೇ ತನ್ನ ಸಂಚಾರ ಆರಂಭಿಸಿದ್ದು, ಸದ್ಯ ಟೊಯೊಹಾಶಿಯಲ್ಲಿದೆ.

Tokyo Olympic torch relay
Tokyo Olympic torch relay
author img

By

Published : Apr 6, 2021, 10:41 PM IST

ಟೋಕಿಯೋ: ಜಪಾನ್​​ನಲ್ಲಿ ಈ ಬಾರಿ ನಡೆಯಲಿರುವ ಒಲಿಂಪಿಕ್​ಗೆ ಎಲ್ಲಾ ರೀತಿಯ ಸಿದ್ಧತೆಗಳು ಪೂರ್ಣಗೊಂಡಿದ್ದು, ಜಪಾನ್​​ನಾದ್ಯಂತ ಕ್ರೀಡಾ ಜ್ಯೋತಿ ಸಂಚರಿಸುತ್ತಿದೆ. ಕಳೆದ 13 ದಿನಗಳಿಂದ ಕ್ರೀಡಾ ಜ್ಯೋತಿ ಸಂಚಾರ ನಡೆಸುತ್ತಿದ್ದು, ಇದೀಗ ಐಚಿ ಪ್ರಾಂತ್ಯದಲ್ಲಿ ತನ್ನ ಓಟ ಮುಂದುವರೆಸಿದೆ.

ಟೋಕಿಯೋ ಒಲಿಂಪಿಕ್​​ನ ಕ್ರೀಡಾ ಜ್ಯೋತಿ

ಜಪಾನಿನ ಸ್ಕೇಟರ್ ಮತ್ತು ಒಲಿಂಪಿಯನ್ ಅಕಿಕೊ ಸುಜುಕಿ ಕ್ರೀಡಾ ಜ್ಯೋತಿ ಹಿಡಿಯುವ ಮೂಲಕ ಒಲಿಂಪಿಕ್​ಗೆ ತಮ್ಮ ಕೊಡುಗೆ ನೀಡಿದ್ದಾರೆ. ಅವರು ತಮ್ಮ ನೆಲೆಯಾದ ಟೊಯೊಹಾಶಿ ನಗರದಲ್ಲಿ ಕ್ರೀಡಾ ಜ್ಯೋತಿ ಹಿಡಿದು ಓಡಿದರು. ಕಪ್ಪು ಫಲಕಗಳಿಂದ ತಯಾರಿಸಿದ ಮದ್ಯ-ದಂಗಡಿಗಳನ್ನು ಹೊಂದಿರುವ ಹಂಡಾ ಕಾಲುವೆಯಲ್ಲಿ ಒಲಿಂಪಿಕ್ ಜ್ವಾಲೆಯನ್ನು ಹೊತ್ತೊಯ್ಯಲಾಯಿತು. ಅಂಜೊ ನಗರದಲ್ಲಿ ಟಾರ್ಚ್‌ಬಿಯರ್ ಅಕಿಹಿಟೊ ಗೊಟೊ ಒಲಿಂಪಿಕ್ ಟಾರ್ಚ್ ಒಟ್ಟಿಗೆ ಹಿಡಿದಿಟ್ಟುಕೊಂಡರು ಹಾಗೂ ರೋಬೋಟ್‌ನೊಂದಿಗೆ ಬ್ಯಾಟನ್​ ಹಿಡಿದು ಗಮನ ಸೆಳೆದರು.

ಬಳಿಕ ಒಲಿಂಪಿಕ್​ ಜ್ಯೋತಿ ಸಂಜೆ ಒಕಾಜಾಕಿ ಕ್ಯಾಸಲ್‌ಗೆ ತಲುಪಿತು. ಟೋಕಿಯೋ ಒಲಿಂಪಿಕ್ ಕ್ರೀಡಾ ಜ್ಯೋತಿ ಜಪಾನ್‌ನ ಎಲ್ಲಾ 47 ಪ್ರಾಂತ್ಯಗಳಲ್ಲಿ 121 ದಿನಗಳ ಕಾಲ ಸಂಚರಿಸಲಿದೆ. ಇದೇ ಜುಲೈ 23ರಂದು ಟೋಕಿಯೋದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.