ETV Bharat / international

ಆಫ್ಘನ್​ ಸರ್ಕಾರದ e-mail ಬಳಕೆಗೆ ತಾಲಿಬಾನಿಗಳ ಯತ್ನ: ಖಾತೆಗಳನ್ನೇ ಲಾಕ್​ ಮಾಡಿದ Google

ಆಫ್ಘನ್​ ಸರ್ಕಾರದ ಮಾಜಿ ಅಧಿಕಾರಿಗಳ ಇಮೇಲ್(e-mail) ಖಾತೆಗಳನ್ನು ಗೂಗಲ್(Google) ತಾತ್ಕಾಲಿಕವಾಗಿ ಲಾಕ್ ಮಾಡಿದೆ. ಆಫ್ಘನ್​ ಸರ್ಕಾರದಲ್ಲಿದ್ದ ಅಧಿಕಾರಿಗಳ ಇಮೇಲ್‌ಗಳನ್ನು ಬಳಸಲು ತಾಲಿಬಾನಿಗಳು ಯತ್ನಿಸಿದ ಕಾರಣ ಗೂಗಲ್​ ಈ ಕ್ರಮ ಕೈಗೊಂಡಿದೆ.

author img

By

Published : Sep 4, 2021, 10:51 AM IST

ಅಫ್ಘನ್​ ಸರ್ಕಾರದ e-mail ಬಳಕೆಗೆ ತಾಲಿಬಾನಿಗಳ ಯತ್ನ: ಖಾತೆಗಳನ್ನೇ ಲಾಕ್​ ಮಾಡಿದ Google

ಕಾಬೂಲ್ (ಅಫ್ಘಾನಿಸ್ತಾನ): ಆಫ್ಘನ್​​ ಸರ್ಕಾರದಲ್ಲಿದ್ದ ಅಧಿಕಾರಿಗಳ ಇಮೇಲ್‌(e-mail) ಗಳನ್ನು ಬಳಸಲು ತಾಲಿಬಾನಿಗಳು ಯತ್ನಿಸಿದ್ದು, ಸರ್ಕಾರಿ ಇಮೇಲ್ ಖಾತೆಗಳನ್ನು ಗೂಗಲ್(Google) ತಾತ್ಕಾಲಿಕವಾಗಿ ಲಾಕ್ ಮಾಡಿದೆ.

ನಾವು ನಿರಂತರವಾಗಿ ಅಫ್ಘಾನಿಸ್ತಾನದ ಪರಿಸ್ಥಿತಿಯ ಅವಲೋಕನ ಮಾಡುತ್ತಿದ್ದೇವೆ. ಸರ್ಕಾರದ ಕೆಲವು ಇಮೇಲ್‌ಗಳ ಸುರಕ್ಷತೆ ಹಾಗೂ ಭದ್ರತೆಗಾಗಿ ತಜ್ಞರೊಂದಿಗೆ ಸಮಾಲೋಚಿಸಿ ನಾವು ಈ ಕ್ರಮ ಕೈಗೊಂಡಿದ್ದೇವೆ. ಆದರೆ ಇದು ತಾತ್ಕಾಲಿಕ ಮಾತ್ರ. ಶಾಶ್ವತವಾಗಿ ಲಾಕ್​ ಮಾಡಿಲ್ಲ ಎಂದು ಗೂಗಲ್ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆಫ್ಘನ್​ ಸರ್ಕಾರದ ಮಾಜಿ ಅಧಿಕಾರಿಗಳನ್ನು ಪತ್ತೆಹಚ್ಚಲು ತಾಲಿಬಾನ್ ಉಗ್ರರು ಇಮೇಲ್‌ಗಳನ್ನು ಬಳಸಬಹುದು. ಹಣಕಾಸು, ಕೈಗಾರಿಕೆ, ಉನ್ನತ ಶಿಕ್ಷಣ, ಗಣಿ ಸೇರಿದಂತೆ ಎಲ್ಲಾ ಸಚಿವಾಲಯಗಳ ಅಧಿಕಾರಿಗಳು ಅಧಿಕೃತ ಸಂವಹನಕ್ಕಾಗಿ ಗೂಗಲ್ ಅನ್ನು ಬಳಸಿದ್ದಾರೆ. ಇಡೀ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನ್​ಗೆ ಅಲ್ಲಿ ನೂತನ ಸರ್ಕಾರ ಸ್ಥಾಪಿಸಬೇಕೆಂದರೆ ಅಥವಾ ಸ್ಥಾಪಿಸಿದ ಮೇಲೂ ಹಳೆಯ ಪ್ರಮುಖ ದಾಖಲೆಗಳು ಬೇಕೇ ಬೇಕು. ಹೀಗಾಗಿ ಗೂಗಲ್​ನಲ್ಲಿ ದಾಖಲಾಗಿರುವ ಮಾಹಿತಿಗಳನ್ನು ಪಡೆಯಲು ಇನ್ನಿಲ್ಲದ ಪ್ರಯತ್ಮ ಮಾಡುತ್ತಿದ್ದಾರೆ.

ಇದನ್ನೂ ಓದಿ: ತಾಲಿಬಾನಿಗಳ ವಿರುದ್ಧ ಪ್ರತಿರೋಧ ಮುಂದುವರಿಯುತ್ತಲೇ ಇರುತ್ತದೆ: ಸ್ವಯಂಘೋಷಿತ ಅಧ್ಯಕ್ಷ ಸಲೇಹ

ಈ ಹಿಂದೆ ಕೂಡ ಅಂದರೆ ಜುಲೈ ತಿಂಗಳ ಕೊನೆಯಲ್ಲಿ ಸರ್ಕಾರದ ಉದ್ಯೋಗಿಯೊಬ್ಬರ ಬಳಿ ಅವರು ಸೇವೆಯಲ್ಲಿದ್ದ ಸಚಿವಾಲಯದ ಡೇಟಾವನ್ನು ಸೇವ್​ ಮಾಡಿಡುವಂತೆ ಉಗ್ರರು ಬೆದರಿಕೆ ಹಾಕಿದ್ದರು. ಆದರೆ ಆ ಉದ್ಯೋಗಿ ಇದಕ್ಕೆ ನಿರಾಕರಿಸಿದ್ದು, ಈಗ ತಲೆಮರೆಸಿಕೊಂಡಿದ್ದಾರೆ.

ಗೂಗಲ್​, ಇದು ನಿಜವಾದ ಮಾಹಿತಿಯ ಸಂಪತ್ತನ್ನು ನೀಡುತ್ತದೆ. ಆದರೆ ಗೂಗಲ್ ಶೀಟ್‌ನಲ್ಲಿ ಸರ್ಕಾರಿ ಉದ್ಯೋಗಿಗಳ ಪಟ್ಟಿ ಇರುವುದು ಕೂಡ ಬಹುದೊಡ್ಡ ಸಮಸ್ಯೆಯಾಗಿದೆ ಎಂದು ಇಂಟರ್ನೆಟ್ ಗುಪ್ತಚರ ಸಂಸ್ಥೆ ಡೊಮೈನ್ ಟೂಲ್ಸ್‌ನ ಭದ್ರತಾ ಸಂಶೋಧಕ ಚಾಡ್ ಆ್ಯಂಡರ್ಸನ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.