ರೋಮ್: ಕೋವಿಡ್-19ಗೆ ಇಟಲಿಯಲ್ಲಿ ಇಂದು ಒಂದೇ ದಿನ 969 ಮಂದಿ ಬಲಿಯಾಗಿದ್ದು, ಮೃತರ ಸಂಖ್ಯೆ 8,215ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಈವರೆಗೂ ಒಟ್ಟು 86,500 ಕೊರೊನಾ ಪ್ರಕರಣಗಳು ವರದಿಯಾಗಿವೆ.
ಇನ್ನು ಮಹಾಮಾರಿ ಕೊರೊನಾಗೆ ಜಗತ್ತಿನಾದ್ಯಂತ ಬಲಿಯಾದವರ ಸಂಖ್ಯೆ 25,278ಕ್ಕೆ ಏರಿಕೆಯಾಗಿದ್ದು, ಈ ಪೈಕಿ ಇಟಲಿಯದ್ದೇ ಸಿಂಹಪಾಲಾಗಿದೆ. ಇಟಲಿಯ ನಂತರದ ಸ್ಥಾನದಲ್ಲಿ ಸ್ಪೇನ್ (4,858 ಸಾವು), ಚೀನಾ (3,292 ಸಾವು), ಇರಾನ್ (2,378) ಹಾಗೂ ಅಮೆರಿಕಾ (1,321) ರಾಷ್ಟ್ರಗಳು ಇವೆ.
ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಪ್ರಪಂಚದಾದ್ಯಂತ ಈವರೆಗೆ ಒಟ್ಟು 5,59,103 ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ ಇಟಲಿ, ಸ್ಪೇನ್, ಚೀನಾವನ್ನು ಅಮೆರಿಕಾ ಹಿಂದಿಕ್ಕಿದೆ. ಸ್ಪೇನ್ನಲ್ಲಿ 64,059, ಇಟಲಿಯಲ್ಲಿ 80,589, ಚೀನಾದಲ್ಲಿ 81,340 ಪ್ರಕರಣಗಳಿದ್ದರೆ, ಅಮೆರಿಕಾದಲ್ಲಿ ಬರೊಬ್ಬರಿ 86,548 ಪ್ರಕರಣಗಳು ದೃಢಪಟ್ಟಿವೆ.