ಕಾಬೂಲ್(ಅಫ್ಘಾನಿಸ್ತಾನ) : ಅಫ್ಘಾನಿಸ್ತಾನದಲ್ಲಿ ಅಸ್ತವ್ಯಸ್ತವಾಗಿರುವ ಮತ್ತು ಭದ್ರತೆಯ ಪರಿಸ್ಥಿತಿ ಅಸ್ಥಿರವಾಗುತ್ತಿರುವಾಗ, ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಭಾನುವಾರ ಅಧಿಕಾರವನ್ನು ಬಿಟ್ಟುಕೊಟ್ಟಿದ್ದಾರೆ. ಅಫ್ಘಾನ್ ಸರ್ಕಾರ ಮತ್ತು ತಾಲಿಬಾನ್ ಸಂಧಾನಕಾರರ ನಡುವೆ ಮಾತುಕತೆಯ ನಂತರ ತಾಲಿಬಾನ್ ಮಧ್ಯಂತರ ಸರ್ಕಾರವನ್ನು ರಚಿಸಿದೆ.
ಅಫ್ಘಾನಿಸ್ತಾನ ಸರ್ಕಾರವು ತಾಲಿಬಾನ್ ಪಡೆಗಳಿಗೆ ಶರಣಾದ ನಂತರ ಮುಲ್ಲಾ ಅಬ್ದುಲ್ ಘನಿ ಬರದಾರ್ ಈಗ ತಾಲಿಬಾನ್ ಆಡಳಿತದಲ್ಲಿ ಅಫ್ಘಾನಿಸ್ತಾನದ ನೂತನ ಅಧ್ಯಕ್ಷರಾಗಲಿದ್ದಾರೆ. ಅಫ್ಘಾನ್ ಭದ್ರತಾ ಪಡೆಗಳ ವಿರುದ್ಧ ಒಂದು ತಿಂಗಳ ಅವಧಿಯ ದಾಳಿಯ ನಂತರ, ತಾಲಿಬಾನ್ ಹೋರಾಟಗಾರರು ಕೊನೆಗೂ ಭಾನುವಾರ (ಆಗಸ್ಟ್ 15) ಕಾಬೂಲ್ ಗೇಟ್ ತಲುಪಿದರು.
ನಂತರ, ಮುಲ್ಲಾ ಅಬ್ದುಲ್ ಘನಿ ಬರದಾರ್ ನೇತೃತ್ವದ ತಾಲಿಬಾನ್ ನಿಯೋಗವು ಅಧಿಕಾರ ವರ್ಗಾವಣೆಗೆ ತಯಾರಿ ನಡೆಸಲು ಕಾಬೂಲ್ ಪ್ರವೇಶಿಸಿದ ನಂತರ ರಾಷ್ಟ್ರಪತಿ ಭವನಕ್ಕೆ ತೆರಳಿತು.
ಮೊದಲು, ತಾಲಿಬಾನ್‌ಗಳು ಅಫ್ಘಾನಿಸ್ತಾನದ ರಾಜಧಾನಿಯನ್ನು ಸುತ್ತುವರಿದಾಗ, ಆಂತರಿಕ ಸಚಿವ ಅಬ್ದುಲ್ ಸತ್ತಾರ್ ಮಿರ್ಜಕ್ವಾಲ್ ಕಾಬೂಲ್ ಮೇಲೆ ದಾಳಿ ಮಾಡುವುದಿಲ್ಲ ಮತ್ತು ಅಧಿಕಾರ ವರ್ಗಾವಣೆಯು ಶಾಂತಿಯುತವಾಗಿ ನಡೆಯುತ್ತದೆ ಎಂದು ಹೇಳಿದರು. ಕಾಬೂಲ್ ನಿವಾಸಿಗಳಿಗೆ ಭದ್ರತಾ ಪಡೆಗಳು ನಗರದ ಭದ್ರತೆಯನ್ನು ಖಚಿತಪಡಿಸುತ್ತವೆ ಎಂದು ಅವರು ಭರವಸೆ ನೀಡಿದರು.
ಇದನ್ನೂ ಓದಿ: ಕಾಬೂಲ್ ಪ್ರವೇಶಿಸಿದ ತಾಲಿಬಾನ್.. ಇಂದು ರಾತ್ರಿ ದೆಹಲಿಗೆ ಕಾಬೂಲ್‌ನಿಂದ ಅಂತಿಮ ಏರ್ ಇಂಡಿಯಾ ವಿಮಾನ..
ವರದಿಗಳ ಪ್ರಕಾರ, ತಾಲಿಬಾನ್ ತನ್ನ ಸದಸ್ಯರಿಗೆ ಕಾಬೂಲ್ ಗೇಟ್ ಬಳಿ ಕಾಯುವಂತೆ ಮತ್ತು ನಗರವನ್ನು ಪ್ರವೇಶಿಸಲು ಪ್ರಯತ್ನಿಸದಂತೆ ಆದೇಶಿಸಿತು. ಅಧಿಕಾರ ವರ್ಗಾವಣೆ ಪ್ರಕ್ರಿಯೆ ಮುಗಿಯುವವರೆಗೂ ಕಾಬೂಲ್‌ನ ಭದ್ರತೆಯ ಜವಾಬ್ದಾರಿಯನ್ನು ಸರ್ಕಾರವು ಹೊಂದಿರುತ್ತದೆ. ಎಲ್ಲಾ ನಾಗರಿಕ ಮತ್ತು ಸೇನಾ ಅಧಿಕಾರಿಗಳು ಸುರಕ್ಷಿತವಾಗಿರುತ್ತಾರೆ ಎಂದು ಹೇಳಿತು.
ತಾಲಿಬಾನ್ ಗೆಲುವಿನ ಪ್ರತಿಪಾದನೆಯೊಂದಿಗೆ, ಇದು ಈಗ ನೆರೆಯ ರಾಷ್ಟ್ರಗಳೊಂದಿಗಿನ ಎಲ್ಲಾ ಪ್ರಮುಖ ಗಡಿ ದಾಟುವಿಕೆಯನ್ನು ನಿಯಂತ್ರಿಸುತ್ತದೆ. ಕಾಬೂಲ್ ಅಲ್ಲದೆ, ಅವರು ಅಫ್ಘಾನಿಸ್ತಾನದ ಬಹುತೇಕ ಎಲ್ಲಾ ಪ್ರಮುಖ ನಗರಗಳು ಮತ್ತು ವಿಮಾನ ನಿಲ್ದಾಣಗಳನ್ನು ವಶಪಡಿಸಿಕೊಂಡಿದ್ದಾರೆ. ಇತ್ತೀಚಿನ ವಾರಗಳಲ್ಲಿ ಅಫ್ಘಾನಿಸ್ತಾನವು ತಾಲಿಬಾನ್ ಪಡೆಗಳಿಂದ ನಿರಂತರವಾಗಿ ಹಿಂಸೆ ಮತ್ತು ಹತ್ಯೆಯ ಘಟನೆಗಳೊಂದಿಗೆ ಪ್ರತಿ ದಿನವೂ ಘಟಿಸುತ್ತಿರುವ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ.