ಜೆರುಸಲೇಂ: ರಾಕೆಟ್ ದಾಳಿಯಿಂದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾರೆ. ದಾಳಿಯನ್ನು ಮುಂದೆ ಅರಿತ ರಕ್ಷಣಾ ದಳ ಪ್ರಧಾನಿಯನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇಸ್ರೇಲ್ನಲ್ಲಿ ಚುನಾವಣೆ ಕಾವು ಜೋರಾಗಿದೆ. ಚುನಾವಣೆ ಪ್ರಚಾರಕ್ಕೆ ಎಂದು ಪ್ರಧಾನಿ ನೆತನ್ಯಾಹು ಅಶ್ಕಲೋನ್ ನಗರಕ್ಕೆ ತೆರಳಿದ್ದರು. ಇದನ್ನರಿತ ಉಗ್ರರು ಗಾಜಾ ತೀರದಿಂದ ಪ್ರಧಾನಿ ಮೇಲೆ ರಾಕೆಟ್ ದಾಳಿ ನಡೆಸಲು ಸಂಚು ರೂಪಿಸಿದ್ದರು.
ಪ್ರಚಾರ ಸಮಯದಲ್ಲಿ ಪ್ರಧಾನಿ ನೆತನ್ಯಾಹು ವೇದಿಕೆ ಮೇಲೆ ಜನರನ್ನುದ್ದೇಶಿ ಮಾತನಾಡುತ್ತಿದ್ದರು. ಈ ವೇಳೆ ಭದ್ರತಾಪಡೆಗೆ ಪ್ರಧಾನಿ ಪ್ರಾಣಕ್ಕೆ ಕುತ್ತು ಇದೆ ಸಂದೇಶ ಬಂದಿದ್ದು, ಕೂಡಲೇ ಪ್ರಧಾನಿಯವರನ್ನು ಸುರಕ್ಷಿತಾ ಸ್ಥಳಕ್ಕೆ ಕೊಂಡೊಯ್ಯಲಾಯಿತು.
ಬಳಿಕ ರಾಕೆಟ್ ದಾಳಿ ನಡೆದಿದೆ ಅಂತಾ ಇಸ್ರೇಲ್ ಅಧಿಕಾರಿಗಳು ಸ್ಪಷ್ಟ ಪಡಿಸಿದರು. ಆದರೆ, ದೇಶದ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಿಂದ ಅವುಗಳನ್ನು ಪರಿಣಾಮಕಾರಿಯಾಗಿ ನಿರ್ಬಂಧಿಸಲಾಗಿದೆ. ಈ ರಾಕೆಟ್ ದಾಳಿಯಲ್ಲಿ ಯಾರೂ ಗಾಯಗೊಂಡಿಲ್ಲ. ಈ ಘಟನೆಯ ಜವಾಬ್ದಾರಿಯನ್ನು ಯಾವುದೇ ಪ್ಯಾಲೇಸ್ಟಿನಿಯನ್ ಗುಂಪು ಹೊಣೆ ಹೊತ್ತುಕೊಂಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.