ETV Bharat / international

ಸಹೋದರಿಯರ ಮೇಲೆ ಸಾಮೂಹಿಕ ಅತ್ಯಾಚಾರ!: ಪಾಕಿಸ್ತಾನದಲ್ಲಿ ಕೋಲಾಹಲಕ್ಕೆ ನಾಂದಿ ಹಾಡಿದ ರೇಪ್​​ ಕೇಸ್​​

ನಾವು ಬಡ ಜನರು. ಅವರೊಂದಿಗೆ ಹೋರಾಡಲು ನಮಗೆ ಸಾಧ್ಯವಿಲ್ಲ. ವಕೀಲರಿಗೆ ಹಣ ನೀಡಲೂ ನಮ್ಮಿಂದ ಆಗುವುದಿಲ್ಲ. ಆದ್ದರಿಂದ ನಾವು ನಮ್ಮ ಮನೆಯನ್ನು ಬಿಟ್ಟು ಬೇರೆಡೆಗೆ ಹೋಗಲು ನಿರ್ಧರಿಸಿದ್ದೇವೆ ಎಂದು ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ತಾಯಿಯು ಈ ರೀತಿಯ ನೋವು ತೋಡಿಕೊಂಡಿದ್ದಾಳೆ.

Gang-rape of two sisters sparks uproar in Pak
ಸಾಂದರ್ಭಿಕ ಚಿತ್ರ
author img

By

Published : Oct 26, 2020, 9:18 PM IST

ಫೈಸಲಾಬಾದ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಇಬ್ಬರು ಹದಿಹರೆಯದ ಬಾಲಕಿಯರನ್ನು ಅಪಹರಣದ ದುರುಳರು ಆರು ದಿನಗಳ ಕಾಲ ಅವರ ಮೇಲೆ ಅತ್ಯಾಚಾರ ಮಾಡಿದ್ದಾರೆ.

15 ಜನರಿದ್ದ ಈ ಕಾಮುಕರ ತಂಡ 15 ಮತ್ತು 17 ವರ್ಷ ವಯಸ್ಸಿನ ಇಬ್ಬರು ಬಾಲಕಿಯರನ್ನು ಅತ್ಯಾಚಾರ ಎಸಗಿದ್ದರಿಂದಲೇ ವಿಡಿಯೋವನ್ನು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸಂತ್ರಸ್ತೆಯ ತಾಯಿ ಈ ಬಗ್ಗೆ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾಳೆ.

ಸೆಪ್ಟೆಂಬರ್ 11 ರಂದು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಅಪಹರಿಸಿದ 15 ಜನರ ಗುಂಪು, ಅವರನ್ನು ಬೇರೆ ಬೇರೆ ಸ್ಥಳಗಳಿಗೆ ಕರೆದೊಯ್ದು ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ. ಅಲ್ಲದೇ ತಾವು ಮಾಡಿದ ಅಸಭ್ಯ ಕೃತ್ಯವನ್ನು ಮೊಬೈಲ್​ ಮೂಲಕ ಚಿತ್ರೀಕರಿಸಿದ್ದಾರೆ ಎಂದು ಸಂತ್ರಸ್ತೆಯ ತಾಯಿ ತಾನು ನೀಡಿದ ದೂರು ಪ್ರತಿಯಲ್ಲಿ ಉಲ್ಲೇಖಿಸಿರುವುದಾಗಿ ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರು ಕಾಮುಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಹಾಗೂ ಕಾನೂನು ಹೋರಾಟ ಮಾಡಲು ತನ್ನ ಬಳಿ ಹಣ ಇಲ್ಲದ್ದರಿಂದ ಆ ವಠಾರವನ್ನೇ ತೊರೆಯಲು ನಿರ್ಧರಿಸಿದ್ದಾಳೆ ಎನ್ನಲಾಗುತ್ತಿದೆ.

ದೂರು ದಾಖಲಾದ ಸುದ್ದಿ ತಿಳಿಯುತ್ತಿದ್ದಂತೆ 15 ವರ್ಷದ ಬಾಲಕಿಯನ್ನು ಫೈಸಲಾಬಾದ್​ನ ಜಾಂಗ್ ಬಜಾರ್​ನಲ್ಲಿ ಕೈಬಿಟ್ಟ ಕಾಮುಕರು ಆಕೆಯ ಸಹೋದರಿಯನ್ನು ಗುಜ್ರಾನ್‌ವಾಲಾದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ.

ನಾವು ಬಡ ಜನರು. ಅವರೊಂದಿಗೆ ಹೋರಾಡಲು ನಮಗೆ ಸಾಧ್ಯವಿಲ್ಲ. ವಕೀಲರಿಗೆ ಹಣ ನೀಡಲೂ ನಮ್ಮಿಂದ ಸಾಧ್ಯವಿಲ್ಲ. ಆದ್ದರಿಂದ ನಾವು ನಮ್ಮ ಮನೆಯನ್ನು ಬಿಟ್ಟು ಬೇರೆಡೆಗೆ ಹೋಗಲು ನಿರ್ಧರಿಸಿದ್ದೇವೆ ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾರೆ. ಈ ನಡುವೆ ಇಂತಹ ಕೃತ್ಯಗಳು ಹೆಚ್ಚಾಗಿದ್ದರಿಂದ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡುವಂತೆ ಒತ್ತಾಯಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಹಾಗಾಗಿ ಸಹೋದರಿಯರ ಸಾಮೂಹಿಕ ಅತ್ಯಾಚಾರದ ಘಟನೆಯು ಪಾಕಿಸ್ತಾನದಲ್ಲಿ ಕೋಲಾಹಲಕ್ಕೆ ನಾಂದಿ ಹಾಡಿದೆ ಎನ್ನಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.