ETV Bharat / international

ಅಫ್ಘಾನಿಸ್ತಾನದಲ್ಲಿ 1 ಕೋಟಿ 40 ಲಕ್ಷ ಜನ ಹಸಿವಿನಿಂದ ಬಳಲುತ್ತಿದ್ದಾರೆ: ವಿಶ್ವಸಂಸ್ಥೆ ಕಳವಳ

ಅಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ಸ್ವಾಧೀನಪಡಿಸಿಕೊಂಡ ನಂತರ ಯುದ್ಧಪೀಡಿತ ದೇಶದಲ್ಲಿ 14 ಮಿಲಿಯನ್‌ ಜನರು ತೀವ್ರ ಸ್ವರೂಪದ ಹಸಿವು ಎದುರಿಸುತ್ತಿದ್ದಾರೆ. ಅಲ್ಲಿ ಮಾನವೀಯತೆಯ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ವಿಶ್ವಸಂಸ್ಥೆ (United Nations) ಕಳವಳ ವ್ಯಕ್ತಪಡಿಸಿದೆ.

Food agency warns of hunger in Afghan conflict
ಅಫ್ಘಾನ್‌ ಬಿಕ್ಕಟ್ಟು: 1 ಕೋಟಿ 40 ಲಕ್ಷ ಜನ ಹಸಿವಿನಿಂದ ಬಳಲುತ್ತಿದ್ದಾರೆ - ವಿಶ್ವಸಂಸ್ಥೆ
author img

By

Published : Aug 19, 2021, 7:24 AM IST

ವಿಶ್ವಸಂಸ್ಥೆ: ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ತಾಲಿಬಾನ್‌ ಉಗ್ರರು ಒಂದೆಡೆ ತೋರಿಕೆಯ ಶಾಂತಿ ಮಂತ್ರ ಜಪಿಸುತ್ತಿದ್ದರೆ, ಮತ್ತೊಂದೆಡೆ ತಮ್ಮ ಉಗ್ರ ಸ್ವರೂಪ ಪ್ರದರ್ಶಿಸುತ್ತಿದ್ದಾರೆ. ನಾಗರಿಕರಿಗೆ ತೊಂದರೆ ಮಾಡುವುದಿಲ್ಲ ಎಂದು ಹೇಳುತ್ತಲೇ ವಿವಿಧ ಸಮುದಾಯಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿ ಅಟ್ಟಹಾಸ ಮೆರೆಯುತ್ತಿದ್ದಾರೆ.

ಈ ನಡುವೆ ಸಂಘರ್ಷಪೀಡಿತ ದೇಶದಲ್ಲಿ 14 ಮಿಲಿಯನ್‌ ಜನರು ತೀವ್ರ ಸ್ವರೂಪದ ಹಸಿವು ಎದುರಿಸುತ್ತಿದ್ದಾರೆ. ಇಲ್ಲಿ ಮಾನವೀಯತೆಯ ಬಿಕ್ಕಟ್ಟು ತೆರೆದುಕೊಳ್ಳುತ್ತಿದೆ ಎಂದು ವಿಶ್ವಸಂಸ್ಥೆಯ ಆಹಾರ ಯೋಜನೆಯ ಮುಖ್ಯಸ್ಥರಾದ ಮೇರಿ ಎಲ್ಲೆನ್ ಮೆಕ್‌ಗ್ರಾಟಿ ಹೇಳಿದ್ದಾರೆ.

ಕಾಬೂಲ್‌ನಿಂದ ವಿಶ್ವಸಂಸ್ಥೆಗೆ ನೀಡಿದ ವೀಡಿಯೋದಲ್ಲಿ ಮೆಕ್‌ಗ್ರಾಟಿ ಈ ವಿಚಾರ ಹಂಚಿಕೊಂಡಿದ್ದಾರೆ. ಮೂರು ವರ್ಷಗಳಲ್ಲಿ ತೀವ್ರ ಬರ, ಕೋವಿಡ್‌ನಿಂದಾಗಿ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳಿಂದ ಈಗಾಗಲೇ ದೇಶ ಭೀಕರ ಪರಿಸ್ಥಿತಿ ಎದುರಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಾತು ತಪ್ಪಿದ ತಾಲಿಬಾನ್- ತಿರುಗಿ ಬಿದ್ದ ಜನ​: ಆಫ್ಘನ್ನರಲ್ಲಿ ಭಯದ ವಾತಾವರಣ..

ಬರದಿಂದ ಶೇ.40 ರಷ್ಟು ಬೆಳೆ ನಷ್ಟವಾಗಿದೆ. ಜಾನುವಾರುಗಳು ನಾಶವಾಗಿವೆ. ತಾಲಿಬಾನ್ ಲಗ್ಗೆ ಇಟ್ಟಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ಜನರು ಬೇರೆ ಬೇರೆ ಕಡೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಮೇ ತಿಂಗಳಲ್ಲಿ ವಿಶ್ವ ಆಹಾರ ಕಾರ್ಯಕ್ರಮವು 4 ಮಿಲಿಯನ್ ಜನರನ್ನು ತಲುಪಿದೆ. ಮುಂದಿನ ಎರಡು ತಿಂಗಳಲ್ಲಿ 9 ಮಿಲಿಯನ್ ಜನರನ್ನು ತಲುಪಲು ಯೋಜನೆ ಕೈಗೊಳ್ಳಲಾಗಿದೆ. ಆದರೆ ಈ ನಿಟ್ಟಿನಲ್ಲಿ ಹಲವು ಸವಾಲುಗಳಿವೆ ಎಂದಿರುವ ಮೆಕ್‌ಗಾರ್ಟಿ, ಸಂಘರ್ಷ ನಿಲ್ಲಿಸುವಂತೆಯೂ ಜಾಗತಿಕ ಸಮುದಾಯವನ್ನು ಒತ್ತಾಯಿಸಿದ್ದಾರೆ.

ಈ ದೇಶಕ್ಕೆ ಆಹಾರ ಪಡೆಯಲು 200 ಮಿಲಿಯನ್ ಡಾಲರ್ ಒದಗಿಸುವಂತೆ ದಾನಿಗಳನ್ನು ಕೋರಿದರಲ್ಲದೆ, ಚಳಿಗಾಲ ಆರಂಭವಾಗುವ ಮೊದಲು ಆಹಾರ ಸಮುದಾಯಗಳನ್ನು ತಲುಪಬೇಕಿದೆ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.