ETV Bharat / international

ಬಾಂಗ್ಲಾದಲ್ಲಿ ಭಾರೀ ಮಳೆ, ಪ್ರವಾಹ: 5 ಸಾವಿರಕ್ಕೂ ಹೆಚ್ಚು ರೋಹಿಂಗ್ಯಾಗಳ ತಾತ್ಕಾಲಿಕ ಸ್ಥಳಾಂತರ

24 ಗಂಟೆಗಳಲ್ಲಿ 30 ಸೆಂಟಿಮೀಟರ್‌ಗಳಿಗಿಂತ ಹೆಚ್ಚು ಮಳೆ ಸುರಿದಿದ್ದು ದಕ್ಷಿಣ ಬಾಂಗ್ಲಾದೇಶದ ರೋಹಿಂಗ್ಯಾ ನಿರಾಶ್ರಿತರ ಶಿಬಿರಗಳು ನಾಶವಾಗಿವೆ. ಹೀಗಾಗಿ ಸಾವಿರಾರು ಜನರು ಸೂರಿಲ್ಲದೆ ಪರದಾಡುವಂತಾಗಿದೆ.

ರೋಹಿಂಗ್ಯಾಗಳ ಬದುಕನ್ನು ಇನ್ನಷ್ಟು ಕಠಿಣವಾಗಿಸಿದ ಭಾರೀ ಪ್ರವಾಹ

author img

By

Published : Jul 29, 2021, 3:06 PM IST

ಢಾಕಾ(ಬಾಂಗ್ಲಾದೇಶ): ಬಹಳ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ವರ್ಷಧಾರೆಗೆ ದಕ್ಷಿಣ ಬಾಂಗ್ಲಾದೇಶದ ರೋಹಿಂಗ್ಯಾ ನಿರಾಶ್ರಿತರ ಶಿಬಿರಗಳು ಜಲಾವೃತಗೊಂಡಿವೆ.

ಬುಧವಾರದ ಮಳೆಗೆ ಕೇವಲ 24 ಗಂಟೆಗಳಲ್ಲಿ, ಕಾಕ್ಸ್ ಬಜಾರ್ ಜಿಲ್ಲೆಯ ಶಿಬಿದಲ್ಲಿ 30 ಸೆಂಟಿಮೀಟರ್ ಮಳೆ ಬಿದ್ದಿದೆ. ಮುಂದಿನ ಕೆಲವು ದಿನಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ. ಕೊರೊನಾ ಸಾಂಕ್ರಾಮಿಕದಿಂದ ಪರಿಸ್ಥಿತಿ ಮತ್ತಷ್ಟು ಕಠಿಣವಾಗಿದೆ. ಈ ವಾರದ ಮಳೆಯಿಂದ ಉಂಟಾದ ಭೂಕುಸಿತದಲ್ಲಿ ಐದು ಮಂದಿ ಮತ್ತು ಪ್ರವಾಹದ ನೀರಿನಿಂದ ಒಂದು ಮಗು ಸಾವಿಗೀಡಾಗಿದೆ.

ಆರಂಭಿಕ ವರದಿಗಳ ಪ್ರಕಾರ, 12,000 ಕ್ಕೂ ಹೆಚ್ಚು ನಿರಾಶ್ರಿತರು ಭಾರಿ ಮಳೆ ಪರಿಣಾಮ ಎದುರಿಸಿದ್ದಾರೆ ಮತ್ತು ಅಂದಾಜು 2,500 ಆಶ್ರಯಗಳು ಹಾನಿಗೀಡಾಗಿವೆ ಎಂದು ಹೇಳಲಾಗಿದೆ. 5,000ಕ್ಕೂ ಹೆಚ್ಚು ನಿರಾಶ್ರಿತರನ್ನು ತಾತ್ಕಾಲಿಕವಾಗಿ ಬೇರೆಡೆಗೆ ಸ್ಥಳಾಂತರಿಸಲಾಗದೆ.

ತಿನ್ನಲು ಅಥವಾ ಕುಡಿಯಲು ಸರಿಯಾಗಿ ಏನೂ ಸಿಗುತ್ತಿಲ್ಲ ಎಂದು ನಿರಾಶ್ರಿತರು ನೋವು ತೋಡಿಕೊಂಡಿದ್ದಾರೆ. ಕಳೆದ ನಾಲ್ಕು ದಿನಗಳ ನಿರಂತರ ಮಳೆಯಿಂದಾಗಿ ನಮ್ಮ ಮನೆಯಲ್ಲಿ ನೀರು ತುಂಬಿದೆ. ನಾವು ಅಹಾರಕ್ಕೆ ಹಾಹಾಕಾರ ಪಡುವಂತಾಗಿದೆ. ಮಕ್ಕಳು ಎಲ್ಲಿ ಈ ಅನಾಹುತಕ್ಕೆ ಬಲಿಯಾಗುತ್ತಾರೋ ಎಂಬ ಭಯ ನಮ್ಮನ್ನು ಕಾಡುತ್ತಿದೆ ಎನ್ನುತ್ತಾರೆ ಐದು ಮಕ್ಕಳನ್ನು ಹೊಂದಿರುವ ಬೇಗಂ ಎಂಬ ಮಹಿಳೆ.

ಯಾರು ಈ ರೋಹಿಂಗ್ಯಾಗಳು?

ಬೌದ್ಧ ಬಹುಸಂಖ್ಯಾತರನ್ನು ಹೊಂದಿರುವ ಮ್ಯಾನ್ಮಾರ್‌ನಿಂದ ಆಗಸ್ಟ್ 2017 ರಿಂದ 700,000 ಕ್ಕೂ ಹೆಚ್ಚು ರೋಹಿಂಗ್ಯಾ ಮುಸ್ಲೀಮರು ಬಾಂಗ್ಲಾದೇಶದ ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.