ETV Bharat / international

ಮ್ಯಾನ್ಮಾರ್ ಮಿಲಿಟರಿ ಪಡೆ ಪೋಸ್ಟ್​ಗಳಿಗೆ ಫೇಸ್​ಬುಕ್​ ಕಡಿವಾಣ

ಮ್ಯಾನ್ಮಾರ್​ನಲ್ಲಿ ನಡೆಯುತ್ತಿರುವ ಮಿಲಿಟರಿ ದಂಗೆಯ ವಿರುದ್ಧ ಪ್ರತಿಭಟನೆಗಳು ಮುಂದುವರೆದಿದ್ದು, ಮಿಲಿಟರಿ ಪಡೆಯ ಪೋಸ್ಟ್​ಗಳು ಹಾಗೂ ಪ್ರೊಫೈಲ್​​ಗಳ ಮೇಲೆ ಫೇಸ್​ಬುಕ್​ ನಿರ್ಬಂಧ ಹೇರಿದೆ.

Facebook puts curbs on Myanmar military content
ಮ್ಯಾನ್ಮಾರ್ ಮಿಲಿಟರಿ ಪಡೆ ಪೋಸ್ಟ್​ಗಳಿಗೆ ಫೇಸ್​ಬುಕ್​ ಕಡಿವಾಣ
author img

By

Published : Feb 12, 2021, 4:53 PM IST

ಬರ್ಮಾ: ತಪ್ಪು ಮಾಹಿತಿ ಹರಡುವುದನ್ನು ತಡೆಯುವ ದೃಷ್ಟಿಯಿಂದ ಮ್ಯಾನ್ಮಾರ್ ಮಿಲಿಟರಿ ಪಡೆಯ ಪೋಸ್ಟ್​ಗಳು ಹಾಗೂ ಪ್ರೊಫೈಲ್​​ಗಳ ಮೇಲೆ ಫೇಸ್​ಬುಕ್​ ನಿರ್ಬಂಧ ಹೇರಿದೆ.

ಮ್ಯಾನ್ಮಾರ್​ನಲ್ಲಿ ನಡೆಯುತ್ತಿರುವ ಮಿಲಿಟರಿ ದಂಗೆಯ ವಿರುದ್ಧ ಜನರ ಪ್ರತಿಭಟನೆಗಳು ಮುಂದುವರೆದಿದ್ದು, ಮತ್ತಷ್ಟು ಅಹಿತಕರ ಘಟನೆಗಳಿಗೆ ಫೇಸ್​ಬುಕ್​ ಪೋಸ್ಟ್​ಗಳು ಎಡೆ ಮಾಡಿಕೊಡಬಾರದೆಂಬ ಕಾರಣಕ್ಕೆ ಕಡಿವಾಣ ಹಾಕಲಾಗಿದೆ. ಈ ನಿರ್ಬಂಧವು ಮ್ಯಾನ್ಮಾರ್ ಮಿಲಿಟರಿ ವಕ್ತಾರ ಬ್ರಿಗೇಡಿಯರ್-ಜನರಲ್ ಝಾ ಮಿನ್ ತುನ್‌ರ ಫೇಸ್‌ಬುಕ್ ಖಾತೆ ಸೇರಿದಂತೆ ಸೇನೆಯ ಇತರ ಅಧಿಕಾರಿಗಳ ಖಾತೆಗೆ ಅನ್ವಯಿಸುತ್ತವೆ.

ಇದನ್ನೂ ಓದಿ: ಮ್ಯಾನ್ಮಾರ್​ ಸೇನೆ ಶೀಘ್ರ ಸಂಸತ್ ಸಭೆ ನಡೆಸಲಿ; ಅಮೆರಿಕ ಸೂಚನೆ

2020ರ ನವೆಂಬರ್ 8 ರಂದು ಹೊರಬಂದ ಸಂಸತ್​ ಚುನಾವಣಾ ಫಲಿತಾಂಶ ಮ್ಯಾನ್ಮಾರ್​ ಅನ್ನು ನಡುಗಿಸಿದೆ. ಚುನಾವಣೆಯಲ್ಲಿ ಮಾಜಿ ಆಡಳಿತ ಪಕ್ಷವಾದ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ) ಶೇ.80 ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿದೆ. ಅಂದಿನಿಂದ ಮ್ಯಾನ್ಮಾರ್​ನಲ್ಲಿ ಸರ್ಕಾರ ಮತ್ತು ಮಿಲಿಟರಿ ಆಡಳಿತದ ನಡುವೆ ಸಂಘರ್ಷ ನಡೆಯುತ್ತಿದೆ.

ಮ್ಯಾನ್ಮಾರ್‌ನ ಆಡಳಿತಾರೂಢ ಪಕ್ಷದ ಕೌನ್ಸಿಲರ್ ಆಂಗ್ ಸಾನ್ ಸೂಕಿ ಸೇರಿದಂತೆ ಹಲವು ನಾಯಕರನ್ನು ಅಲ್ಲಿನ ಸೇನೆಯು ವಶಕ್ಕೆ ಪಡೆದು ಗೃಹಬಂಧನದಲ್ಲಿರಿಸಿದೆ. ಫೇಸ್​ಬುಕ್​, ಟ್ವಿಟರ್ ಮತ್ತು ಇನ್​ಸ್ಟಾಗ್ರಾಂಗೆ ನಿರ್ಬಂಧ ಹೇರಿದೆ. ಅಲ್ಲದೇ ದೇಶದಲ್ಲಿ ಒಂದು ವರ್ಷಗಳ ಕಾಲ ತುರ್ತು ಪರಿಸ್ಥಿತಿ ಕೂಡ ಘೋಷಣೆ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.