ETV Bharat / international

ವೈಮಾನಿಕ ದಾಳಿ: 18 ತಾಲಿಬಾನ್​ ಭಯೋತ್ಪಾದಕರು ಹತ - ಆಫ್ಘಾನಿಸ್ತಾನ ಭದ್ರತಾ ಪಡೆಯಿಂದ ವೈಮಾನಿಕ ದಾಳಿ

ತಾಲಿಬಾನ್​ ಭಯೋತ್ಪಾದಕರ ಮೇಲೆ ಆಫ್ಘಾನ್​ ಭದ್ರತಾ ಪಡೆ ಮೈಮಾನಿಕ ದಾಳಿ ನಡೆಸಿದ್ದು, ಇದರಲ್ಲಿ 18 ಉಗ್ರರು ಹತರಾಗಿದ್ದಾರೆ.

Taliban terrorists
Taliban terrorists
author img

By

Published : Jan 1, 2021, 7:46 PM IST

ಕಾಬೂಲ್​(ಆಫ್ಘಾನಿಸ್ತಾನ): ಪೂರ್ವ ಆಫ್ಘಾನಿಸ್ತಾನದಲ್ಲಿ ನಡೆದ ಏರ್​ಸ್ಟ್ರೈಕ್‌ನಲ್ಲಿ 18 ತಾಲಿಬಾನ್​ ಭಯೋತ್ಪಾದಕರು ಹತರಾಗಿದ್ದಾರೆ. ಆಫ್ಘಾನ್​ ಭದ್ರತಾ ಪಡೆ ಈ ದಾಳಿ ನಡೆಸಿದ್ದಾಗಿ ಅಲ್ಲಿನ ಗವರ್ನರ್​​ ಜಿಯಾಲ್ಹಾಕ್ ಅಮರ್ಖಿಲ್​ ತಿಳಿಸಿದ್ದಾರೆ.

ಆಫ್ಘಾನ್​ ಪ್ರಾಂತ್ಯದ ನಂಗರ್​ಹಾರ್​ನಲ್ಲಿ ಗುರುವಾರ ತಡರಾತ್ರಿ ಈ ವೈಮಾನಿಕ ದಾಳಿ ನಡೆಸಲಾಗಿದೆ. ಭದ್ರತಾ ಪಡೆಗಳ ಮೇಲೆ ತಾಲಿಬಾನ್​ ಉಗ್ರರು ದಾಳಿ ನಡೆಸಲು ಯೋಜನೆ​ ಹಾಕಿಕೊಂಡಿದ್ದ ಮಾಹಿತಿ ಲಭ್ಯವಾಗುತ್ತಿದ್ದಂತೆ ಈ ದಾಳಿ ಮಾಡಲಾಗಿದೆ.

ಓದಿ: ಕೈದಿಗಳ ಪಟ್ಟಿ ವಿನಿಮಯ ಮಾಡಿಕೊಂಡ ಭಾರತ-ಪಾಕಿಸ್ತಾನ

ಘಟನೆಯಲ್ಲಿ ಯಾವುದೇ ನಾಗರಿಕರಿಗೆ ತೊಂದರೆಯಾಗಿಲ್ಲ ಎಂದು ರಾಜ್ಯಪಾಲರು ಮಾಹಿತಿ ನೀಡಿದ್ದಾರೆ. ಕತಾರ್​ ರಾಜಧಾನಿ ದೋಹಾದಲ್ಲಿ ಸರ್ಕಾರ ಮತ್ತು ತಾಲಿಬಾನ್​ ನಡುವೆ ಶಾಂತಿ ಮಾತುಕತೆ ನಡೆಯುತ್ತಿದ್ದರೂ ಉಗ್ರರು ಹಿಂಸಾಚಾರದಲ್ಲಿ ನಿರಂತರಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಸಪ್ಟೆಂಬರ್​​ನಿಂದ ಆರಂಭಗೊಂಡಿರುವ ಶಾಂತಿ ಮಾತುಕತೆಯಲ್ಲಿ ಇಲ್ಲಿಯವರೆಗೆ ಯಾವುದೇ ಮಹತ್ವದ ಮುನ್ನಡೆ ದೊರೆತಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.