ETV Bharat / international

'ಮಹಿಳೆಯರ ಹಕ್ಕುಗಳನ್ನು ಗೌರವಿಸಿ..': ಅಫ್ಘಾನಿಸ್ತಾನದ ರಾಷ್ಟ್ರಪತಿ ಭವನದ ಮುಂದೆ ಮಹಿಳೆಯರ ಪ್ರತಿಭಟನೆ - ಸರ್ಕಾರದ ಭಾಗವಾಗಲು ಮಹಿಳೆಯರ ಆಗ್ರಹ

ಅಫ್ಘಾನಿಸ್ತಾನವನ್ನು ತಮ್ಮ ತೆಕ್ಕೆಗೆ ಪಡೆದುಕೊಂಡಿರುವ ತಾಲಿಬಾನಿಗರು ಮಹಿಳೆಯರ ಮೇಲೆ ದಾಳಿ ಮಾಡುತ್ತಿದ್ದಾರೆ. ಹೊಸದಾಗಿ ಆಯ್ಕೆಯಾಗುವ ತಾಲಿಬಾನ್ ಸರ್ಕಾರವು ಮಹಿಳಾ ಹಕ್ಕುಗಳನ್ನು ಗೌರವಿಸಬೇಕು. ಹೊಸ ಸರ್ಕಾರದಲ್ಲಿ ಮಹಿಳೆಯರನ್ನು ಪಾಲುದಾರರನ್ನಾಗಿ ಮಾಡುವಂತೆ ಈ ವೇಳೆ ಪ್ರತಿಭಟನಾನಿರತ ಮಹಿಳೆಯರು ಆಗ್ರಹಿಸಿದರು.

dozens march for womens rights at kabul palace
ಆಫ್ಘನ್​ನಲ್ಲೂ ಇದೆ ಮಹಿಳೆಯರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ: ರಾಷ್ಟ್ರಪತಿ ಭವನದ ಮುಂದೆ ಹಲವರ ಪ್ರತಿಭಟನೆ
author img

By

Published : Sep 3, 2021, 8:30 PM IST

ಕಾಬೂಲ್(ಅಫ್ಘಾನಿಸ್ತಾನ): ತಾಲಿಬಾನ್​​ ಸರ್ಕಾರ ಅಫ್ಘಾನಿಸ್ತಾನದ ಮಹಿಳೆಯರ ಹಕ್ಕುಗಳನ್ನು ಗೌರವಿಸಬೇಕು ಎಂದು ಆಗ್ರಹಿಸಿ ಕಾಬೂಲ್‌ನ ರಾಷ್ಟ್ರಪತಿ ಭವನದ ಮುಂದೆ ಶುಕ್ರವಾರ ಪ್ರತಿಭಟನೆಗಳು ಭುಗಿಲೆದ್ದವು. ನಾವೂ ಹೊಸ ಸರ್ಕಾರದ ಭಾಗವಾಗಬೇಕು ಎಂದು ಮಹಿಳೆಯರು ಆಗ್ರಹಿಸಿದರು.

dozens march for womens rights at kabul palace
ಕಾಬೂಲ್​ನ ರಾಷ್ಟ್ರಪತಿ ಭವನದ ಮುಂದೆ ಮಹಿಳೆಯರ ಪ್ರತಿಭಟನೆ

ಅಫ್ಘಾನಿಸ್ತಾನವನ್ನು ತಮ್ಮ ತೆಕ್ಕೆಗೆ ಪಡೆದುಕೊಂಡಿರುವ ತಾಲಿಬಾನಿಗರು ಮಹಿಳೆಯರ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಬೂಲ್​ನ ರಾಷ್ಟ್ರಪತಿ ಭವನದ ಮುಂದೆ ಪ್ರತಿಭಟನೆ ನಡೆಸಿದರು. ಈ ವೇಳೆ ಹೊಸದಾಗಿ ಆಯ್ಕೆಯಾಗುವ ತಾಲಿಬಾನ್ ಸರ್ಕಾರವು ಮಹಿಳಾ ಹಕ್ಕುಗಳನ್ನು ಗೌರವಿಸಬೇಕು ಎನ್ನುವ ಗಟ್ಟಿಧ್ವನಿ ಮೊಳಗಿಸಿದರು. ಹೊಸ ಸರ್ಕಾರದಲ್ಲಿ ಮಹಿಳೆಯರನ್ನು ಪಾಲುದಾರರನ್ನಾಗಿ ಮಾಡಲು ಈ ವೇಳೆ ಆಗ್ರಹಿಸಲಾಯಿತು.

ಕೆಲವು ಮಹಿಳೆಯರು ಶುಕ್ರವಾರ ಅರಮನೆಯ ಮೊದಲ ಗೇಟ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. 'ಮಹಿಳೆಯರಿರುವ ವೀರರ ಕ್ಯಾಬಿನೆಟ್​' (A heroic cabinet with the presence of women) ಎಂದು ಬರೆದಿರುವ ಭಿತ್ತಿ ಪತ್ರಗಳು ಈ ಸಂದರ್ಭದಲ್ಲಿ ಪ್ರದರ್ಶನಗೊಂಡವು.

ಮಾನವ ಹಕ್ಕುಗಳ ರಕ್ಷಣೆ ಮತ್ತು ಹಿಂದಿನ ಕ್ರೂರ ಆಡಳಿತ ಬೇಡ ಎಂದು ಘೋಷಣೆ ಕೂಗಲಾಯಿತು. ಈ ಮೂಲಕ ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಶಿಕ್ಷಣ ಮತ್ತು ಸಮಾನತೆಗಾಗಿ ಹೋರಾಟ ನಡೆಸುತ್ತಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವೂ ಕೂಡಾ ಈ ಪ್ರತಿಭಟನೆಯಲ್ಲಿ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಚೀನಾ ನಮ್ಮ ಅತ್ಯಂತ ಪ್ರಮುಖ ಪಾಲುದಾರ: ತಾಲಿಬಾನ್ ಹೀಗೆ ಹೇಳಿದ್ದೇಕೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.