ಗಿಲ್ಗಿಟ್(ಪಾಕ್ ಆಕ್ರಮಿತ ಕಾಶ್ಮೀರ): ಗಿಲ್ಗಿಟ್ ಬಾಲ್ಟಿಸ್ತಾನದ ರಾಜಕೀಯ ಮುಖಂಡರು ಚೀನಾದ ಒನ್ ಬೆಲ್ಟ್ ಒನ್ ರೋಡ್ (ಒಬಿಒಆರ್) ಯೋಜನೆಯನ್ನು ತಕ್ಷಣವೇ ರದ್ದುಮಾಡಬೇಕೆಂದು ಕರೆ ನೀಡಿದ್ದಾರೆ. ಇದನ್ನು ಗಿಲ್ಗಿಟ್ ಮಾತ್ರವಲ್ಲದೆ ವಿಶ್ವದ ದೊಡ್ಡ ಭಾಗಗಳನ್ನು ನಾಶಮಾಡಲು ಕೊವಿಡ್ -19 ವೈರಸ್ ಪ್ರಯಾಣಿಸಿದ ರಸ್ತೆ ಎಂದು ಅವರು ವ್ಯಾಖ್ಯಾನಿಸಿದ್ದಾರೆ.
ಆಕ್ರಮಿತ ಗಿಲ್ಗಿಟ್ ಬಾಲ್ಟಿಸ್ತಾನ್ ಪ್ರದೇಶದಲ್ಲಿ ಚೀನಾದ ಕಾರ್ಮಿಕರು ಮತ್ತು ಸೇನಾ ಸಿಬ್ಬಂದಿ ಕೆಲಸ ಮಾಡುತ್ತಿದ್ದು ಇವರಿಂದಲೇ ಕೊರೊನಾ ಸೋಂಕು ಹರಡಿದೆ ಎನ್ನು ಆರೋಪಗಳು ಕೇಳಿಬಂದಿದೆ.
ಈ ಪ್ರದೇಶದಲ್ಲಿ ಕೊರೊನಾ ವೈರಸ್ ಹರಡುವಿಕೆ ಹೆಚ್ಚಾಗುತ್ತಿರುವುದರಿಂದ ಚೀನಾ ಮತ್ತು ಗಿಲ್ಗಿಟ್ ಬಾಲ್ಟಿಸ್ತಾನ್ ನಡುವಿನ ಗಡಿಯನ್ನು ಮುಚ್ಚಬೇಕು ಎಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನಾಯಕ ಡಾ.ಅಮ್ಜದ್ ಮಿರ್ಜಾ ಹೇಳಿದ್ದಾರೆ.
'ಇಲ್ಲಿಯವರೆಗೆ 21 ಕ್ಕೂ ಹೆಚ್ಚು ಜನರು ಕರೊನಾ ಸೋಂಕಿಗೆ ತುತ್ತಾಗಿರುವುದು ಬೆಳಕಿಗೆ ಬಂದಿದೆ. ಆದರೆ, ನಿಜವಾದ ಅಂಕಿ ಅಂಶವು ಹೆಚ್ಚಾಗಿದೆ. ಗಿಲ್ಗಿಟ್ ಬಾಲ್ಟಿಸ್ತಾನದಲ್ಲಿ ಯಾವುದೇ ಮಾಸ್ಕ್ ಅಥವಾ ಸ್ಯಾನಿಟೈಜರ್ಗಳು ಲಭ್ಯವಿಲ್ಲ. ಇಲ್ಲಿನ ಜನರು ಆರಂಭದಿಂದಲೂ ಸಿಪಿಇಸಿ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ನಮ್ಮ ಭೂಮಿ ಮತ್ತು ನಮ್ಮ ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಳ್ಳುವ ಯೋಜನೆ ಇದಾಗಿದೆ ಎಂದು ಕರೆಯುತ್ತಾರೆ ಎಂದಿದ್ದಾರೆ.
ಗಿಲ್ಗಿಟ್ ಬಾಲ್ಟಿಸ್ತಾನ್, ಚೀನಾದ ಕ್ಸಿನ್‌ಜಿಯಾಂಗ್ ಪ್ರದೇಶದೊಂದಿದೆ ಸಂಪರ್ಕ ಹೊಂದಿದೆ. ಮುಂದೊಂದು ದಿನ ಇಟಲಿಯಲ್ಲಿ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಲಿದೆ. ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಚಟುವಟಿಕೆಗಳಿಂದಾಗಿ ಗಿಲ್ಗಿಟ್ ಬಾಲ್ಟಿಸ್ತಾನ್ ಜನರು ದುರ್ಬಲರಾಗಿದ್ದಾರೆ ಎಂದು ಸೆಂಗೆ ಹೆಚ್ ಸೆರಿಂಗ್ ಹೇಳಿದ್ದಾರೆ.