ಇಸ್ಲಾಮಾಬಾದ್: ಅಫ್ಘಾನಿಸ್ತಾನದ ಕೆಲ ಕಿಡಿಗೇಡಿಗಳು ಉದ್ದೇಶ ಪೂರ್ವಕವಾಗಿ ನೀಡಿರುವ ಹೇಳಿಕೆಗಳು ರಾಷ್ಟ್ರದ ಶಾಂತಿ ಮತ್ತು ಸ್ಥಿರತೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪಾಕಿಸ್ತಾನ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯೂಸುಫ್ ಹೇಳಿದ್ದಾರೆ.
ತಾಲಿಬಾನ್ಗೆ ಆಶ್ರಯ ನೀಡಿದ್ದಾಕ್ಕಾಗಿ ಪಾಕಿಸ್ತಾನವನ್ನು ಕೆಣಕಿದ ಅಫ್ಘಾನ್ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಅವರು 1971 ರ ಯುದ್ಧದ ನಂತರ ಪಾಕಿಸ್ತಾನ ಸೇನೆಯು ಭಾರತಕ್ಕೆ ಶರಣಾದ ಚಿತ್ರವನ್ನು ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು. ಅಫ್ಘಾನಿಸ್ತಾನ ಇಂತಹ ಚಿತ್ರಗಳನ್ನು ಯಾವತ್ತೂ ಹೊಂದಿಲ್ಲ, ಮುಂದೆಯೂ ಹೊಂದುವುದಿಲ್ಲ ಎಂದು ಉಲ್ಲೇಖಿಸಿದ್ದರು.
ಇದೀಗ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಯೂಸುಫ್, ಅಫ್ಘಾನಿಸ್ತಾನ್ ಶಾಂತಿಗೆ ಪಾಕಿಸ್ತಾನ ಬದ್ಧವಾಗಿದೆ. ಹೀಗೆ ಮೂರ್ಖತನದ ಹೇಳಿಕೆಗಳನ್ನು ನೀಡುವುದರಿಂದ ಅಫ್ಘಾನಿಸ್ತಾನವೇ ಮುಜುಗರಕ್ಕೊಳಗಾಗುತ್ತಿದೆ. ಅಫ್ಘಾನಿಸ್ತಾನಕ್ಕೆ ಪಾಕಿಸ್ತಾನ ಸದಾ ಬೆಂಬಲ ನೀಡುತ್ತದೆ. ಇಂತಹ ಹೇಳಿಕೆಗಳು ನಮ್ಮ ಶಾಂತಿ ಮತ್ತು ಸ್ಥಿರತೆ ಮೇಲೆ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.