ETV Bharat / international

ರಷ್ಯಾದ ಕೋವಿಡ್ ಲಸಿಕೆಯ ಪ್ರಾಯೋಗಿಕ ಪರೀಕ್ಷೆ ಪ್ರಾರಂಭಿಸಲಿರುವ ಭಾರತ!

ಭಾರತ, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಫಿಲಿಪೈನ್ಸ್ ಮತ್ತು ಬ್ರೆಜಿಲ್​ನಲ್ಲಿ ಸ್ಪುಟ್ನಿಕ್ ವಿ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳು ಈ ತಿಂಗಳಿನಿಂದ ಪ್ರಾರಂಭವಾಗಲಿವೆ.

vaccine
vaccine
author img

By

Published : Sep 8, 2020, 8:50 AM IST

ಮಾಸ್ಕೋ (ರಷ್ಯಾ): ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಈ ತಿಂಗಳು ಕೊರೊನಾ ವೈರಸ್​ನ ಸ್ಪುಟ್ನಿಕ್ ವಿ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳು ನಡೆಯಲಿವೆ ಎಂದು ರಷ್ಯಾದ ನೇರ ಹೂಡಿಕೆ ನಿಧಿಯ (ಆರ್‌ಡಿಐಎಫ್) ಸಿಇಒ ಕಿರಿಲ್ ಡಿಮಿಟ್ರಿವ್ ಖಚಿತಪಡಿಸಿದ್ದಾರೆ.

ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಫಿಲಿಪೈನ್ಸ್, ಭಾರತ ಮತ್ತು ಬ್ರೆಜಿಲ್​ನಲ್ಲಿ ಕ್ಲಿನಿಕಲ್ ಪ್ರಯೋಗಗಳು ಈ ತಿಂಗಳಿನಿಂದ ಪ್ರಾರಂಭವಾಗಲಿವೆ ಎಂದು ಡಿಮಿಟ್ರಿವ್ ಹೇಳಿದ್ದಾರೆ.

"ಆಗಸ್ಟ್ 26ರಂದು ರಷ್ಯಾದಲ್ಲಿ 40,000ಕ್ಕೂ ಹೆಚ್ಚು ಜನರು ನೋಂದಾಯಿಸಿದ್ದು, ಅಧ್ಯಯನಗಳು ಪ್ರಾರಂಭವಾಗಿವೆ. ಮೂರನೇ ಹಂತದ ಪ್ರಯೋಗದ ಪ್ರಾಥಮಿಕ ಫಲಿತಾಂಶಗಳನ್ನು ಅಕ್ಟೋಬರ್-ನವೆಂಬರ್​ನಲ್ಲಿ ಪ್ರಕಟಿಸಲಾಗುವುದು" ಎಂದು ಡಿಮಿಟ್ರಿವ್ ತಿಳಿಸಿದ್ದಾರೆ.

ಸ್ಪುಟ್ನಿಕ್ ವಿ ಲಸಿಕೆಯ ಸ್ಥಳೀಯ ಉತ್ಪಾದನೆಗೆ ಸಂಬಂಧಿಸಿದಂತೆ ರಷ್ಯಾ ಭಾರತ ಸರ್ಕಾರದೊಂದಿಗೆ ಈಗಾಗಲೇ ಮಾತುಕತೆ ನಡೆಸಿದೆ.

ಆರ್​ಡಿಐಎಫ್​ ಮತ್ತು ಗಮಲೇಯ ನ್ಯಾಷನಲ್ ರಿಸರ್ಚ್ ಸೆಂಟರ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋ ಬಯಾಲಜಿ ಜಂಟಿಯಾಗಿ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್ ವಿ ಲಸಿಕೆಯನ್ನು ರಷ್ಯಾ ಆರೋಗ್ಯ ಸಚಿವಾಲಯ ಆಗಸ್ಟ್ 11ರಂದು ನೋಂದಾಯಿಸಿದ್ದು, ಇದು ಕೋವಿಡ್-19 ವಿರುದ್ಧ ನೋಂದಾಯಿತ ವಿಶ್ವದ ಮೊದಲ ಲಸಿಕೆಯಾಗಿದೆ.

ಸ್ಪುಟ್ನಿಕ್ ವಿ ಮಾನವ ಅಡೆನೊವೈರಲ್ ವೆಕ್ಟರ್ ಲಸಿಕೆಯಾಗಿದ್ದು, ಇದು ಕೊರೊನಾ ವೈರಸ್ ವಿರುದ್ಧ ಹೋರಾಡುತ್ತದೆ ಎಂದು ರಷ್ಯಾದ ಸಂಶೋಧಕರು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.