ಬೀಜಿಂಗ್: ಸಾಮಾಜಿಕ ಜಾಲತಾಣದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬ ಚೀನಾ ಪ್ರಜೆಗಳ ಬಗ್ಗೆ ಅವಹೇಳನಾಕಾರಿಯಾಗಿ ಪೋಸ್ಟ್ ಹಾಕಿದ್ದಾನೆ ಎಂಬ ಕಾರಣಕ್ಕಾಗಿ ಆತನಿಗೆ ಚೀನಾ ವಿಶ್ವವಿದ್ಯಾಲಯವೊಂದು ಜೀವ ಬೆದರಿಕೆ ಹಾಕಿದೆ ಎಂದು ವರದಿ ಆಗಿದೆ.
ಪೂರ್ವ ಚೀನಾದ ಜಿಯಾಂಗ್ಸು ಪ್ರಾಂತ್ಯದಲ್ಲಿನ ಜಿಯಾಂಗ್ಸು ವಿಶ್ವವಿದ್ಯಾಲಯದ (ಜೆಎಸ್‌ಯು) ವಿದ್ಯಾರ್ಥಿಯಾಗಿರುವ ಕಡುಕ್ಕಸ್ಸೆರಿ ಎಂಬ ಭಾರತೀಯ ಮೂಲದ ವಿದ್ಯಾರ್ಥಿ, ಟ್ವಿಟರ್‌ನಲ್ಲಿ ಚೀನಾದ ವಿರುದ್ದ ಅವಹೇಳನಕಾರಿಯಾಗಿ ಪೋಸ್ಟ್ವೊಂದನ್ನ ಮಾಡಿದ್ದ ಎನ್ನಲಾಗಿದೆ. ಈ ಪೋಸ್ಟ್ ಸಿನಾ ವೀಬೊದಲ್ಲಿ ವೈರಲ್ ಆಗಿವೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
ಈ ಪೊಸ್ಟ್ ವೈರಲ್ ಆದ ಹಿನ್ನೆಲೆ, ಕಡುಕ್ಕಸ್ಸೆರಿ ಎಂಬ ವಿದ್ಯಾರ್ಥಿಗೆ ವಿಶ್ವವಿದ್ಯಾಲಯ ಜೀವ ಬೆದರಿಕೆ ಹಾಕಿದ್ದು, ತದನಂತರ ಈ ಬಗ್ಗೆ ವಿದ್ಯಾರ್ಥಿ ಕ್ಷಮೆಯಾಚಿಸಿದ್ದಾನೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇನ್ನು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ವಿಶ್ವವಿದ್ಯಾಲಯ ನಿರ್ಧರಿಸಿದ್ದು, ವಿದ್ಯಾರ್ಥಿಗಳ ಮೇಲಿನ ನಿಯಮಗಳ ಪ್ರಕಾರ ಕಡುಕ್ಕಸ್ಸೆರಿ ಮಾಡಿದ ತಪ್ಪಿಗೆ ವಿಶ್ವವಿದ್ಯಾಲಯವು ಶಿಕ್ಷೆ ವಿಧಿಸುತ್ತದೆ ಎಂದು ಜೆಎಸ್‌ಯು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಚೀನಾ ಮಾಧ್ಯಮ ವರದಿ ಮಾಡಿದೆ.