ಬೀಜಿಂಗ್(ಚೀನಾ): ಬಹುಪಾಲು ಚೀನೀಯರಲ್ಲಿ ರೋಗನಿರೋಧಕ ಶಕ್ತಿ ಕೊರತೆಯಿರುವ ಕಾರಣ ಕೊರೊನಾ ಸೋಂಕಿನ ಎರಡನೇ ಅಧ್ಯಾಯದ ಸವಾಲನ್ನು ಚೀನಾ ಎದುರಿಸುತ್ತಿದೆ ಎಂದು ದೇಶದ ಉನ್ನತ ವೈದ್ಯಕೀಯ ಸಲಹೆಗಾರ ಎಚ್ಚರಿಸಿದ್ದಾರೆ.
ಚೀನಾ ಸರ್ಕಾರದ ಹಿರಿಯ ವೈದ್ಯಕೀಯ ಸಲಹೆಗಾರ ಡಾ.ಝಾಂಗ್ ನನ್ಶಾನ್, ಈ ಸಮಯದಲ್ಲಿ ಬಹುಪಾಲು ಚೀನಿಯರು ರೋಗ ನಿರೋಧಕ ಶಕ್ತಿಯ ಕೊರತೆಯನ್ನು ಎದುರಿಸುತ್ತಿರುವ ಹಿನ್ನೆಲೆ ಇನ್ನೂ ಹೆಚ್ಚಿನ ಪ್ರಮಾಣದದಲ್ಲಿ ಕೋವಿಡ್ -19 ಸೋಂಕಿಗೆ ತುತ್ತಾಗಿದ್ದಾರೆ. ನಾವು ದೊಡ್ಡ ಸವಾಲನ್ನು ಎದುರಿಸುತ್ತಿದ್ದೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಡಾ.ಝಾಂಗ್ ನನ್‌ಶಾನ್ ಚೀನಾದಲ್ಲಿ ಪ್ರಸಿದ್ಧ ವ್ಯಕ್ತಿಯಾಗಿದ್ದು, 2003 ರಲ್ಲಿ ತೀವ್ರವಾದ ಉಸಿರಾಟದ ಸಿಂಡ್ರೋಮ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಿದ ಕಾರಣ ಅವರನ್ನು "SARS ಹೀರೋ" ಎಂದು ಕರೆಯುತ್ತಾರೆ. ಈಗಲೂ ದೇಶದ ಕೊರೊನಾ ವೈರಸ್ ಸಂದಿಗ್ಧ ಪರಿಸ್ಥಿತಿಯಲ್ಲಿ ಝಾಂಗ್ ಅವರ ಕೊಡುಗೆ ಪ್ರಮುಖವೆಂದು ಪರಿಗಣಿಸಲಾಗಿದೆ.
ಜನವರಿಯಲ್ಲಿ ಪ್ರಸಾರವಾದ ಟಿವಿ ಕಾರ್ಯಕ್ರಮವೊಂದರಲ್ಲಿ ಡಾ.ಝಾಂಗ್ ನನ್ಶಾನ್ ಕೊರೊನಾ ಮಾನವನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದರು.