ಬೀಜಿಂಗ್: ಅಮೆರಿಕ ತನ್ನ ಪ್ರಚಂಡ ಶೀತಲ ಸಮರದ ಮನಸ್ಥಿತಿಯಿಂದ ಹೊರ ಬರಬೇಕು. ಉಭಯ ದೇಶಗಳ ನಡುವಿನ ಸಂಬಂಧಗಳು ಮುಂದುವರೆಯುವ ಅವಶ್ಯಕತೆ ಇದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ಪ್ರತಿನಿಧಿ ಜಾವೊ ಲಿಜಿಯನ್ ಹೇಳಿದ್ದಾರೆ.
ಕಳೆದ ಎರಡು ವರ್ಷಗಳಿಂದ ಚೀನಾದ ಆಂತರಿಕ ವಿಚಾರದಲ್ಲಿ ಅಮೆರಿಕ ಅಪಹಾಸ್ಯ ಮಾಡುವ ಮೂಲಕ ಮೂಗು ತೂರಿಸುತ್ತಿದೆ. ಚೀನಾ ಯೋಜನೆಗಳನ್ನು ತುಳಿಯಲು ತೀವ್ರ ಪ್ರಯತ್ನ, ಅಪಪ್ರಚಾರಗಳನ್ನು ಮಾಡ್ತಿದೆ. ಇದೆಲ್ಲವನ್ನ ಚೀನಾ ದಿಟ್ಟಾಗಿ ಎದುರಿಸುತ್ತದೆ ಎಂದು ಲಿಜಯನ್ ವಿಶ್ವದ ದೊಡ್ಡಣ್ಣ ಅಮೆರಿಕಗೆ ತಿರುಗೇಟು ನೀಡಿದ್ದಾರೆ.
ಕಮ್ಯೂನಿಸ್ಟ್ ಪಾರ್ಟಿ ಆಫ್ ಚೈನಾ (ಸಿಪಿಸಿ) ಬಲವಾದ ನಾಯಕತ್ವದಲ್ಲಿ ನಡೆಯುತ್ತಿದೆ. ಸಾಮಾಜಿಕ ಮಾರ್ಗ, ಅಭಿವೃದ್ಧಿಯ ಪಥದತ್ತ ಚೀನಾವನ್ನು ಪ್ರಜೆಗಳು ಕರೆೆದೊಯ್ಯುತ್ತಿದ್ದಾರೆ ಹಾಗೂ ದೊಡ್ಡ ಸಾಧನೆಗಳನ್ನು ಮಾಡ್ತಿದ್ದಾರೆ ಎಂದು ಲಿಜಿಯನ್ ತಿಳಿಸಿದ್ದಾರೆ. ಅದೇ ರೀತಿ ವಿಶ್ವದ ಶಾಂತಿ, ಸ್ಥಿರತೆ, ಅಭಿವೃದ್ಧಿಗೆ ಕಮ್ಯೂನಿಸ್ಟರ್ ರಾಷ್ಟ್ರ ಸಹಕರಿಸುತ್ತಿದೆ. ಚೀನಾ ಅಭಿವೃದ್ಧಿಯನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.