ETV Bharat / international

ತಮ್ಮದೇ ಬಾಹ್ಯಾಕಾಶ ನಿಲ್ದಾಣಕ್ಕೆ ಗಗನಯಾತ್ರಿಗಳನ್ನು ಕಳುಹಿಸಿದ ಚೀನಾ - China's space station

'ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣ'ಕ್ಕೆ ಚೀನಾ ತನ್ನ ಮೂವರು ಗಗನಯಾತ್ರಿಗಳನ್ನು ಶೆನ್​ಶಾವ್-​12 ಆಕಾಶನೌಕೆಯ ಮೂಲಕ ಕಳುಹಿಸಿಕೊಟ್ಟಿದೆ.

China
ಬಾಹ್ಯಾಕಾಶ ನಿಲ್ದಾಣಕ್ಕೆ ಗಗನಯಾತ್ರಿಗಳನ್ನು ಕಳುಹಿಸಿದ ಚೀನಾ
author img

By

Published : Jun 17, 2021, 12:37 PM IST

ಬೀಜಿಂಗ್​: ಮೂವರು ಗಗನಯಾತ್ರಿಗಳನ್ನು ಹೊತ್ತ ಶೆನ್​ಶಾವ್-​12 ಆಕಾಶನೌಕೆಯನ್ನು ಚೀನಾ ಯಶಸ್ವಿಯಾಗಿ ಉಡಾಯಿಸಿದೆ. ಸ್ವದೇಶಿಯಾಗಿರುವ ನೂತನ ಬಾಹ್ಯಾಕಾಶ ನಿಲ್ದಾಣಕ್ಕೆ ಮೊದಲ ಬ್ಯಾಚ್​ನ ಗಗನಯಾತ್ರಿಗಳನ್ನು ಆ ದೇಶ ಕಳುಹಿಸಿಕೊಟ್ಟಿದೆ. ಇವರು ಮೂರು ತಿಂಗಳುಗಳ ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿ ತಂಗಲಿದ್ದು ಸಂಶೋಧನೆಗಳನ್ನು ನಡೆಸಲಿದ್ದಾರೆ.

ಬಾಹ್ಯಾಕಾಶ ನಿಲ್ದಾಣಕ್ಕೆ ಗಗನಯಾತ್ರಿಗಳನ್ನು ಕಳುಹಿಸಿದ ಚೀನಾ

ಶೆನ್​ಶಾವ್-​12, ಇದು 'ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣ' ನಿರ್ಮಿಸಲು ಸ್ಥಾಪನೆಯಾದ 11 ಮಿಷನ್​ಗಳ ಪೈಕಿ ಮೂರನೇಯದ್ದಾಗಿದೆ. ನಿಯೆ ಹೈಶೆಂಗ್, ಲಿಯು ಬೋಮಿಂಗ್ ಮತ್ತು ಟ್ಯಾಂಗ್ ಹಾಂಗ್ಬೊ ಎಂಬ ಮೂವರು ಗಗನಯಾತ್ರಿಗಳು ಶೆನ್​ಶಾವ್-​12 ಆಕಾಶನೌಕೆ ಮೂಲಕ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದಾರೆ.

ಇವರು ತೆರಳುವ ಮುನ್ನ ಚೀನಾದ ಇನ್ನರ್​ ಮಂಗೋಲಿಯಾದಲ್ಲಿರುವ ಜಿಯುಕ್ವಾನ್ ಉಪಗ್ರಹ ಉಡ್ಡಯನ ಕೇಂದ್ರದಲ್ಲಿ ಕೇಂದ್ರ ಮಿಲಿಟರಿ ಆಯೋಗದ ಉಪಾಧ್ಯಕ್ಷ ಕ್ಸು ಕಿಲಿಯಾಂಗ್ ಗಗನಯಾತ್ರಿಗಳನ್ನು ಭೇಟಿಯಾಗಿ, ಸಂಭ್ರಮದಿಂದ ಇವರನ್ನು ಕಳುಹಿಸಿಕೊಡಲಾಯಿತು.

ಬಾಹ್ಯಾಕಾಶ ನಿಲ್ದಾಣ ನಿರ್ಮಾಣ ಕಾಮಗಾರಿಯನ್ನು ಮುಂದಿನ ವರ್ಷದೊಳಗೆ ಪೂರ್ಣಗೊಳಿಸುವ ಗುರಿಯನ್ನು ಚೀನಾ ಹೊಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.