ETV Bharat / international

ಚೀನಾದಲ್ಲಿ ಕೊರೊನಾ ವೈರಸ್​ಗೆ ಸಾವಿನ ಸಂಖ್ಯೆ 25ಕ್ಕೆ ಏರಿಕೆ: 5 ನಗರಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ - Death toll rises to 25 in 830 reported cases of the new coronavirus in China

ಕೊರೊನಾ ವೈರಸ್​ಗೆ ಚೀನಾದಲ್ಲಿ 25 ಮಂದಿ ಬಲಿಯಾಗಿದ್ದು, ಹುಬೈ ಪ್ರಾಂತ್ಯದ ಐದು ನಗರಗಳಲ್ಲಿ ಜನರು ಒಂದೇ ಕಡೆ ಸೇರದಂತೆ ನಿರ್ಬಂಧ ಹೇರಲಾಗಿದೆ.

coronavirus
ಚೀನಾದಲ್ಲಿ ಕೊರೊನಾ ವೈರಸ್
author img

By

Published : Jan 24, 2020, 8:34 AM IST

ಬೀಜಿಂಗ್​: ಚೀನಾದಲ್ಲಿ ಹೊಸದಾಗಿ ಪತ್ತೆಯಾಗಿರುವ ಕೊರೊನಾ ವೈರಸ್​ನ 830 ಪ್ರಕರಣಗಳಲ್ಲಿ ಸಾವಿನ ಸಂಖ್ಯೆ ಇದೀಗ 25ಕ್ಕೆ ಏರಿದೆ. ಇನ್ನೂ ಸೋಂಕು ಹರಡುವ ಸಾಧ್ಯತೆ ಇದ್ದು, ವುಹಾನ್ ಸೇರಿದಂತೆ ಐದು ನಗರಗಳಲ್ಲಿ ಜನರ ಓಡಾಟ ಹಾಗೂ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

  • Death toll rises to 25 in 830 reported cases of the new coronavirus in China: The Associated Press

    — ANI (@ANI) January 24, 2020 " class="align-text-top noRightClick twitterSection" data=" ">

ಗುರುವಾರ ಸಂಜೆ ಚೀನಾದ ಅಧಿಕಾರಿಗಳು ಹುಬೈ ಪ್ರಾಂತ್ಯದ ಐದು ನಗರಗಳಾದ ಹುವಾಂಗ್‌ಗ್ಯಾಂಗ್, ಅಜೋ, ಜಿಜಿಯಾಂಗ್, ಕಿಯಾಂಜಿಯಾಂಗ್ ಹಾಗೂ ವುಹಾನ್​ನಲ್ಲಿ ಸಾರ್ವಜನಿಕ ಸಾರಿಗೆ ಸ್ಥಗಿತಗೊಳಿಸುವುದಾಗಿ ಘೋಷಿಸಿದ್ದಾರೆ. ಈ ನಗರಗಳಲ್ಲಿ ಬಸ್, ರೈಲು ಸಂಚಾರ, ವಿಮಾನ ಸೇವೆ, ಸುರಂಗ ಮಾರ್ಗಗಳು ಹಾಗೂ ದೋಣಿ ಸಂಚಾರ ನಿಷೇಧಿಸಲಾಗಿದ್ದು, ಜನರು ಒಂದೇ ಕಡೆ ಸೇರುವಂತಿಲ್ಲ.

  • 11 ಮಿಲಿಯನ್​ ಜನಸಂಖ್ಯೆ ಹೊಂದಿರುವ ವುಹಾನ್​ನಲ್ಲಿ ಮೊದಲು ಕೊರೊನಾ ವೈರಸ್ ಪತ್ತೆಯಾಗಿದೆ. ವಿಶ್ವವಿದ್ಯಾಲಗಳನ್ನು ಹೊಂದಿರುವ, ಪ್ರಮುಖ ಸಾರಿಗೆ ಕೇಂದ್ರವಾದ ವುಹಾನ್​ನಲ್ಲಿ ಇದೀಗ ಸಂಚಾರ ವ್ಯವಸ್ಥೆಗೆ ನಿರ್ಬಂಧ ಹೇರಿರುವುದು ನಗರ ಸ್ಥಬ್ಧವಾದಂತಾಗಿದೆ.
  • ಇನ್ನು ವೈರಸ್​ಗೆ ಬಲಿಯಾಗುತ್ತಿರುವವರ ಸರಾಸರಿ ವಯಸ್ಸು 73 ಆಗಿದ್ದು, ಅತಿ ಹಿರಿಯರ ವಯಸ್ಸು 89 ಹಾಗೂ ಕಿರಿಯರ ವಯಸ್ಸು 48 ಆಗಿದೆ. ಈ ವೈರಸ್​ ಅಪಾಯಕಾರಿ ಪ್ರಮಾಣದಲ್ಲಿ ಹರಡುತ್ತಿದೆ ಎಂದು ವುಹಾನ್‌ನ ವೈದ್ಯರು ತಿಳಿಸಿದ್ದಾರೆ.
  • ಚೀನಾದಲ್ಲಿ ಭಾರತದ ಸುಮಾರು 700 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವರು ಭಾರತಕ್ಕೆ ಬಂದರೆ ವೈರಸ್​ ಹರಡುವ ಭೀತಿ ಎದುರಾಗಿದ್ದು, ಅಲ್ಲಿಯೇ ಉಳಿದಿದ್ದಾರೆ. ಆದಾಗ್ಯೂ ಕೆಲವರು ರಜಾ ದಿನಗಳಿರುವ ಕಾರಣ ತಮ್ಮ ಮನೆಗಳಿಗೆ ತೆರಳಿದ್ದಾರೆ.
  • ವೈರಸ್ ಹರಡುವ ಭೀತಿಯಿಂದ ಬೀಜಿಂಗ್ ಸೇರಿದಂತೆ ಹಲವಾರು ನಗರಗಳು, ಅಲ್ಲಿ ನಡೆಯಬೇಕಿದ್ದ ಸ್ಪ್ರಿಂಗ್​ ಫೆಸ್ಟಿವಲ್​ ಸೇರಿದಂತೆ ವಿಶೇಷ ಕಾರ್ಯಕ್ರಮಗಳನ್ನು ರದ್ದುಗೊಳಿಸಿವೆ.
  • ಪ್ರಾಂತ್ಯದ ಎಲ್ಲಾ ನಿವಾಸಿಗಳಿಗೆ ಮಾಸ್ಕ್​ ಧರಿಸಲು ಆದೇಶಿಸಲಾಗಿದೆ.

Intro:Body:

gdfgdfg

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.