ಬೀಜಿಂಗ್: 2019ರಲ್ಲಿ ಪತ್ತೆಯಾದ ಕೊರೊನಾ ಸಾಂಕ್ರಾಮಿಕ ರೋಗದ ವೈರಸ್ ಮೂಲದ ಬಗ್ಗೆ ತನಿಖೆ ನಡೆಸಲು ವುಹಾನ್ ನಗರಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಭೇಟಿ ನೀಡಲಿದ್ದಾರೆ ಎಂದು ಚೀನಾ ಮಂಗಳವಾರ ಹೇಳಿದೆ.
ತಜ್ಞರು ಗುರುವಾರ ವುಹಾನ್‌ಗೆ ಆಗಮಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ತಿಳಿಸಿದ್ದಾರೆ. ಅವರ ವೇಳಾಪಟ್ಟಿಯ ಇತರ ವಿವರಗಳನ್ನು ಘೋಷಿಸಲಾಗಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಆರೋಗ್ಯ ಆಯೋಗವು ಹೆಚ್ಚಿನ ಮಾಹಿತಿ ನೀಡಿಲ್ಲ.
ತಜ್ಞರು ಭೇಟಿ ನೀಡಲು ಒಂದು ತಿಂಗಳಿನಿಂದ ಕಾಯುತ್ತಿದ್ದಾರೆ ಎಂದು ಹೇಳುವ ಮೂಲಕ ಕಳೆದ ವಾರ ಭೇಟಿಯ ಬಗ್ಗೆ WHO ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಭೇಟಿಯನ್ನು ಅಂತಿಮಗೊಳಿಸಲು ಸಾಕಷ್ಟು ಸಮಯವಾಗುತ್ತಿದೆ ಎಂದಿದ್ದರು.
ಓದಿ:ಇಬ್ಬರು ಭಾರತೀಯ ಅಮೆರಿಕನ್ನರನ್ನು ಶ್ವೇತಭವನದ ಕೌನ್ಸಿಲ್ ಕಚೇರಿಗೆ ಹೆಸರಿಸಿದ ಜೋ ಬೈಡನ್
ಆದ್ರೆ ಸೋಮವಾರ ಚೀನಾ WHO ತಜ್ಞರ ಭೇಟಿಯ ಬಗ್ಗೆ ಸ್ಪಷ್ಟಣೆ ನೀಡಿದ್ದು, ಹಲವಾರು ರಾಷ್ಟ್ರಗಳಿಂದ ಬರುವ ವಿಜ್ಞಾನಿಗಳು ಕೊರೊನಾ ವೈರಸ್ ಮನುಷ್ಯನಿಗೆ ಹೇಗೆ ಬಂತು ಎಂಬುದರ ಮೂಲವನ್ನು ಪತ್ತೆ ಹಚ್ಚಲಿದ್ದಾರೆ ಎಂದು ಟೆಡ್ರೊಸ್ ಹೇಳಿದರು.
"ಕೊರೊನಾ ಸೋಂಕಿನ ಮೂಲವನ್ನು ಪತ್ತೆ ಹಚ್ಚುವ ಬಗ್ಗೆ ವುಹಾನ್‌ನಲ್ಲಿ ಅಧ್ಯಯನಗಳು ಪ್ರಾರಂಭವಾಗುತ್ತವೆ" ಎಂದು ಟೆಡ್ರೊಸ್ ಹೇಳಿದ್ದಾರೆ.