ETV Bharat / international

ಒಂದೇ ದಿನ 47 ಸಾವು: ಚೀನಾದಲ್ಲಿ 2,835 ಮಂದಿಯ ಪ್ರಾಣ ತೆಗೆದ ಕೊರೊನಾ

ಚೀನಾದಲ್ಲಿ ಮತ್ತೆ 47 ಜನ ಕೊರೊನಾ ವೈರಸ್​​ನಿಂದ ಮೃತಪಟ್ಟಿದ್ದು, ಈವರೆಗೆ ಚೀನಾದಲ್ಲಿ ಕೊರೊನಾ ದಾಳಿಗೆ ತುತ್ತಾದವರ ಸಂಖ್ಯೆ 2,835ಕ್ಕೆ ಏರಿಕೆಯಾಗಿದೆ.

China reports 47 more coronavirus death
ಕೊರೋನಾಗೆ ಬಲಿ
author img

By

Published : Feb 29, 2020, 9:28 AM IST

Updated : Feb 29, 2020, 11:45 AM IST

ಬೀಜಿಂಗ್: ಚೀನಾದಲ್ಲಿ ಇಂದು ಮತ್ತೆ 47 ಜನ ಕೋವಿಡ್‌-19 (ಕೊರೊನಾ) ವೈರಸ್​​ನಿಂದ ಮೃತಪಟ್ಟಿದ್ದು, ಈವರೆಗಿನ ಒಟ್ಟಾರೆ ಸಾವಿನ ಸಂಖ್ಯೆ 2,835 ಕ್ಕೆ ಏರಿಕೆಯಾಗಿದೆ.

ನಿನ್ನೆಗಿಂತ ಇಂದು 427 ಹೊಸ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 79,251 ಕ್ಕೇರಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

ದಕ್ಷಿಣ ಕೊರಿಯಾದ ಚಿತ್ರಣ:

ದಕ್ಷಿಣ ಕೊರಿಯಾದಲ್ಲಿ 594 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು 2,931 ಜನರಲ್ಲಿ ಮಾರಣಾಂತಿಕ ವೈರಸ್​​ ಪತ್ತೆಯಾಗಿದೆ. 3 ಜನ ಮಹಿಳೆಯರು ಕರೊನಾಗೆ ಬಲಿಯಾಗಿದ್ದಾರೆ. ಶೇ.90 ಕ್ಕೂ ಹೆಚ್ಚು ಪ್ರಕರಣಗಳು ಸಿಯೋಲ್​​ನ ಡೆಗುವಿನಲ್ಲಿ ಪತ್ತೆಯಾಗಿವೆ.

ಈ ಹಿನ್ನೆಲೆ ಕರೊನಾ ವೈರಸ್​ನ ಲಕ್ಷಣಗಳು ಕಂಡುಬಂದ ವ್ಯಕ್ತಿಗಳು ಹಾಗೂ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳು ಮನೆಯಿಂದ ಹೊರಗೆ ಬರದಂತೆ ಸೂಚಿಸಲಾಗಿದೆ. ಜೊತೆಗೆ ಯಾವುದೇ ದೊಡ್ಡ ದೊಡ್ಡ ಧಾರ್ಮಿಕ ಸಭೆಗಳನ್ನೂ ನಡೆಸದಂತೆ ದಕ್ಷಿಣ ಕೊರಿಯಾ ಪ್ರಧಾನಿ ಚುಂಗ್​ ಸೈ- ಕ್ಯುನ್​​ ಡೆಗುನಲ್ಲಿ ನಡೆದ ಸಭೆಯಲ್ಲಿ ಆದೇಶಿಸಿದ್ದಾರೆ.

ಅಧಿಕಾರಿಗಳಿಗೆ ಉತ್ತರ ಕೊರಿಯಾ ನಾಯಕ ಎಚ್ಚರಿಕೆ:

ದೇಶದಲ್ಲಿ ಹೊಸದಾಗಿ ಕೊರೊನಾ ವೈರಸ್ ಹರಡುವುದನ್ನು ತಡೆಯುವಲ್ಲಿ ವಿಫಲವಾದ ಬಗ್ಗೆ ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್ ಉನ್ ಪಕ್ಷದ ಉನ್ನತ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ವೈರಸ್​​ ಹರಡುವುದನ್ನು ತಡೆಯಲು ದಕ್ಷಿಣ ಕೊರಿಯಾ ಜೊತೆಗಿನ ಗಡಿ ಪ್ರದೇಶಗಳನ್ನು ಬಂದ್​ ಮಾಡಿದೆ. ಜೊತೆಗೆ ಪ್ರವಾಸಿಗರ ಆಗಮನವನ್ನೂ ನಿಷೇಧಿಸಿದೆ. ಅಂತಾರಾಷ್ಟ್ರೀಯ ರೈಲುಗಳು ಮತ್ತು ವಿಮಾನಗಳ ಹಾರಾಟ ಸ್ಥಗಿತಗೊಳಿಸಿದೆ ಮತ್ತು ನೂರಾರು ವಿದೇಶಿಯರ ಸಂಪರ್ಕಕ್ಕೆ ತಡೆ ನೀಡಿದೆ. ಶಾಲಾ ತರಗತಿಗಳನ್ನು ಕೂಡ ಮುಂದೂಡಿದೆ.

Last Updated : Feb 29, 2020, 11:45 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.