ETV Bharat / international

ಗಡಿ ಸಮಸ್ಯೆ ಬಗೆಹರಿಸುವ ಟ್ರಂಪ್‌ ಪ್ರಸ್ತಾಪ ತಿರಸ್ಕರಿಸಿದ ಚೀನಾ

author img

By

Published : May 29, 2020, 8:43 PM IST

ಭಾರತ - ಚೀನಾ ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿ ಬಗೆಹರಿಸಲು ತಾವು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದಿದ್ದ ಟ್ರಂಪ್ ಪ್ರಸ್ತಾಪವನ್ನು ಚೀನಾ ತಿರಸ್ಕರಿಸಿದೆ.

china-rejects-trumps-offer-to-mediate-in-sino-india-border-standoff
ಗಡಿ ಸಮಸ್ಯೆ ಬಗೆಹರಿಸುವ ಟ್ರಂಪ್‌ ಪ್ರಸ್ತಾಪ ತಿರಸ್ಕರಿಸಿದ ಚೀನಾ

ನವದೆಹಲಿ: ಭಾರತ - ಚೀನಾ ನಡುವೆ ಉಂಟಾಗಿರುವ ಬಿಕ್ಕಟ್ಟು ಬಗೆ ಹರಿಸಲು ಮಧ್ಯಸ್ಥಿಕೆಗೆ ಸಿದ್ಧ ಎಂದಿದ್ದ ಟ್ರಂಪ್‌ ಪ್ರಸ್ತಾಪವನ್ನು ಚೀನಾ ತಿರಸ್ಕರಿಸಿದೆ

ಮೇ 27 ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಭಾರತ - ಚೀನಾ ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಬಗೆ ಹರಿಸಲು ತಾವು ಮಧ್ಯಸ್ಥಿಕೆ ವಹಿಸಲು ಸಿದ್ಧ ಇರುವುದಾಗಿ ಹೇಳಿಕೆ ನೀಡಿದ್ದರು. ಇಂದೂ ಕೂಡ ಅದನ್ನು ಪುರುಚ್ಛರಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝೋ ಲಿಜಿಯಾನ್‌, ಪ್ರಸ್ತುತ ಗಡಿಯಲ್ಲಿ ಉದ್ಭವಿಸಿರುವ ಸೇನಾ ನಿಯೋಜನೆ ಕುರಿತ ಎರಡು ದೇಶಗಳ ವಿಚಾರದಲ್ಲಿ ಮೂರನೇ ವ್ಯಕ್ತಿಯ ಪ್ರವೇಶ ಬೇಡ ಎಂದು ಹೇಳಿದ್ದಾರೆ.

ಸಮಸ್ಯೆಯನ್ನು ನಾವು ಬಗೆಹರಿಸಿಕೊಳ್ಳುತ್ತೇವೆ. ಸಂಪರ್ಕ ಹಾಗೂ ನಿಯೋಗ ಮಟ್ಟದ ಮಾತುಕತೆ ಮೂಲಕವೂ ಬಗೆಹರಿಸಿಕೊಳ್ಳುವ ಶಕ್ತಿ ನಮಗಿದೆ ಎಂದು ಲಿಜಿಯಾನ್,‌ ಟ್ರಂಪ್‌‌ ಆಫರ್‌ಗೆ ತೀಕ್ಷಣವಾದ ಪ್ರತಿಕ್ರಿಯೆ ನೀಡಿದ್ದಾರೆ.

ಲಡಾಕ್‌ನಲ್ಲಿ ಚೀನಾ ಸೇನೆ ಸಾಮಾನ್ಯ ಪ್ರೊಟೊಕಾಲ್‌ ಉಲ್ಲಂಘಿಸಿದೆ ಎಂದು ಭಾರತ ಆರೋಪಿಸಿತ್ತು. ಲಾಡಾಕ್‌ನ ಎಲ್‌ಎಸಿ ಮತ್ತು ಉತ್ತರ ಸಿಕ್ಕಿಂನ ಗಡಿಯಲ್ಲಿ ಭಾರತ ಮತ್ತು ಚೀನಾ ಎರಡೂ ದೇಶಗಳು ಹೆಚ್ಚಿನ ಸೇನೆಯನ್ನು ನಿಯೋಜಿಸಿದ್ದವು. ಕೆಲ ದಿನಗಳ ಹಿಂದೆ ಉಭಯ ದೇಶದ ಸೇನೆಗಳ ಮಾತಿನ ಚಕಮಕಿಗೂ ಕಾರಣವಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.