ಬೀಜಿಂಗ್: ಯುಎಸ್ ತನ್ನ ಎರಡು ವಿಮಾನವಾಹಕ ನೌಕೆಗಳನ್ನು ದಕ್ಷಿಣ ಚೀನಾ ಸಮುದ್ರಕ್ಕೆ ಇತ್ತೀಚೆಗೆ ಕಳುಹಿಸಿತ್ತು. ಇದೀಗ ಯುಎಸ್ ಜಂಟಿ ಸಮರಾಭ್ಯಾಸ ನಡೆಸುವ ಮೂಲಕ ಚೀನಾ ಮಿಲಿಟರಿ ಬಗ್ಗುಬಡಿಯುವ ಕೆಲಸ ಮಾಡುತ್ತಿದೆ ಎಂದು ಚೀನಾ ಸೋಮವಾರ ಆರೋಪ ಮಾಡಿದೆ.
ಈ ಸಮರಾಭ್ಯಾಸವನ್ನು ಸಂಪೂರ್ಣವಾಗಿ ದುರುದ್ದೇಶದಿಂದ ನಡೆಸಲಾಗುತ್ತಿದೆ. ಈ ಪ್ರದೇಶದಲ್ಲಿನ ಸ್ಥಿರತೆಯನ್ನು ಹಾಳು ಮಾಡಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಮಿಲಿಟರಿಯನ್ನು ನಾಶಪಡಿಸುವ ಉದ್ದೇಶದಿಂದ ದೊಡ್ಡ ಪ್ರಮಾಣದ ಮಿಲಿಟರಿ ಸಮರಾಭ್ಯಾಸಗಳನ್ನು ನಡೆಸಲು ಯುಎಸ್ ಉದ್ದೇಶಪೂರ್ವಕವಾಗಿ ಬೃಹತ್ ಪಡೆಗಳನ್ನು ರವಾನಿಸಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಜಾವೋ ಲಿಜಿಯಾನ್ ಆಪಾದಿಸಿದ್ದಾರೆ.
ಬೀಜಿಂಗ್ ಹವಳದ ಅಟಾಲ್ಗಳ ಮೇಲೆ ಮಿಲಿಟರಿ ನೆಲೆಗಳನ್ನು ನಿರ್ಮಿಸುವ ಮೂಲಕ ಸಮುದ್ರದಲ್ಲಿ ಅಮೆರಿಕಾ ಹಕ್ಕನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಕಾನೂನಾತ್ಮಕವಾಗಿ ಅಮೆರಿಕಾ ಇಲ್ಲಿ ತನ್ನ ಮಿಲಿಟರಿ ಸ್ಥಾಪಿಸಲು ಯಾವುದೇ ಹಕ್ಕನ್ನು ಹೊಂದಿಲ್ಲ ಎಂಬುದು ಚೀನಾದ ವಾದವಾಗಿದೆ.