ಬೀಜಿಂಗ್: ಡ್ರ್ಯಾಗನ್ ದೇಶದ ಜನರ ವರ್ಷಗಳ ಬೇಡಿಕೆ ಈಡೇರಿಕೆಗೆ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸರ್ಕಾರ ಕೊನೆಗೂ ಒಪ್ಪಿಗೆ ನೀಡಿದೆ. ಚೀನಾದಲ್ಲಿ ದಂಪತಿ ಇನ್ಮುಂದೆ ಮೂರು ಮಕ್ಕಳನ್ನು ಹೊಂದುವ ನೀತಿಗೆ ಅನುಮತಿಸಲಾಗಿದೆ. ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ ಈ ಸಂಬಂಧ ಹೊಸ ಕಾನೂನು ಜಾರಿಗೆ ತರಲಾಗುತ್ತಿದೆ.
ಹೆಚ್ಚುತ್ತಿರುವ ವೆಚ್ಚಗಳಿಂದಾಗಿ ಚೀನಿ ದಂಪತಿಗಳು ಹೆಚ್ಚಿನ ಮಕ್ಕಳನ್ನು ಹೊಂದಲು ಹಿಂಜರಿಯುತ್ತಿರುವುದನ್ನು ಪರಿಹರಿಸುವ ಒಂದು ವಿಶೇಷ ಪ್ರಯತ್ನದಲ್ಲಿ, ತಿದ್ದುಪಡಿ ಮಾಡಿದ ಕಾನೂನು ರೂಪಿಸಲಾಗುತ್ತಿದೆ. ಸಾಮಾಜಿಕ ಮತ್ತು ಆರ್ಥಿಕ ಬೆಂಬಲದ ಕ್ರಮಗಳನ್ನು ಈ ಸಮಿತಿ ಅಂಗೀಕರಿಸಿದೆ.
ಇದನ್ನೂ ಓದಿ: ತಾಲಿಬಾನ್ ಜತೆಗಿನ ‘ಸೌಹಾರ್ದ ಸಂಬಂಧ’ಕ್ಕೆ ನಾವು ಸಿದ್ಧ: ಚೀನಾ
ಹಣಕಾಸು, ತೆರಿಗೆಗಳು, ವಿಮೆ, ಶಿಕ್ಷಣ, ವಸತಿ ಮತ್ತು ಉದ್ಯೋಗ ಸೇರಿದಂತೆ ಕುಟುಂಬಗಳ ಹೊರೆಗಳನ್ನು ಕಡಿಮೆ ಮಾಡಲು ಮತ್ತು ಮಕ್ಕಳನ್ನು ಬೆಳೆಸುವ ಮತ್ತು ಶಿಕ್ಷಣ ನೀಡುವ ವೆಚ್ಚವನ್ನು ಒಳಗೊಂಡಂತೆ ದೇಶವು ಪ್ರೋತ್ಸಾಹಕ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೊಸ ಕಾನೂನು ಹೇಳುತ್ತದೆ.
ಒಂದು ಮಗುವಿನ ನೀತಿಯನ್ನು ರದ್ದುಗೊಳಿಸಿ 2016ರಲ್ಲಿ ಚೀನಾದಲ್ಲಿ ಎಲ್ಲಾ ದಂಪತಿ ಎರಡು ಮಕ್ಕಳನ್ನು ಹೊಂದಲು ಅನುಮತಿ ನೀಡಲಾಗಿತ್ತು. ದೇಶದಲ್ಲಿ ವೇಗವಾಗಿ ಏರಿಕೆಯಾಗುತ್ತಿದ್ದ ಜನಸಂಖ್ಯೆ ನಿಯಂತ್ರಣಕ್ಕಾಗಿ ಈ ನೀತಿಯನ್ನು ಜಾರಿಗೆ ತರಲಾಗಿತ್ತು.