ETV Bharat / international

ಕಂದಕಕ್ಕೆ ಉರುಳಿ ಬಿದ್ದ ಬಸ್​... 26 ಯಾತ್ರಿಗಳು ಸಾವು! - ಇಂಡೋನೇಷ್ಯಾ ರಸ್ತೆ ಅಪಘಾತ ಸುದ್ದಿ

bus plunges into a ravine  killing 26 pilgrims in Indonesia  Indonesia road acident  Indonesia road acident news  Indonesia road acident updste  ಕಂದಕಕ್ಕೆ ಉರುಳಿ ಬಿದ್ದ ಬಸ್  26 ಯಾತ್ರಿಗಳು ಸಾವು  ಇಂಡೋನೇಷ್ಯಾದಲ್ಲಿ 26 ಯಾತ್ರಿಗಳು ಸಾವು  ಇಂಡೋನೇಷ್ಯಾ ರಸ್ತೆ ಅಪಘಾತ  ಇಂಡೋನೇಷ್ಯಾ ರಸ್ತೆ ಅಪಘಾತ ಸುದ್ದಿ
ಸಂಗ್ರಹ ಚಿತ್ರ
author img

By

Published : Mar 11, 2021, 7:26 AM IST

Updated : Mar 11, 2021, 9:05 AM IST

07:25 March 11

ಬಸ್​ನ ಬ್ರೇಕ್​ ಫೇಲ್​ ಆಗಿ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 26 ಜನ ಸಾವನ್ನಪ್ಪಿರುವ ಘಟನೆ ಇಂಡೋನೇಷ್ಯಾದ ಜಾವಾದಲ್ಲಿ ನಡೆದಿದೆ.

ಜಕಾರ್ತಾ: ಇಂಡೋನೇಷ್ಯಾದ ಪ್ರಮುಖ ದ್ವೀಪವಾದ ಜಾವಾದಲ್ಲಿ ಪ್ರವಾಸಿ ಬಸ್​ವೊಂದು ಕಂದಕಕ್ಕೆ ಉರುಳಿ ಬಿದ್ದು, 26 ಯಾತ್ರಿಗಳನ್ನು ಬಲಿ ಪಡೆದಿದೆ. 

ಬಸ್​ ಬ್ರೇಕ್​ಗಳು ಫೇಲ್​ ಆಗಿರುವುದೇ ಘಟನೆಗೆ ಮುಖ್ಯವಾಗಿ ಕಾರಣವಾಗಿದೆ ಎಂದು ತಿಳಿದು ಬಂದಿದೆ. ಬಸ್​ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಕನಿಷ್ಠ 26 ಜನರು ಸಾವನ್ನಪ್ಪಿದ್ದಾರೆ. ಮತ್ತು 35 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಶ್ಚಿಮ ಜಾವಾ ಪ್ರಾಂತ್ಯದ ಪಟ್ಟಣವಾದ ಸುಬಾಂಗ್‌ನಿಂದ ಇಸ್ಲಾಮಿಕ್ ಕಿರಿಯ ಪ್ರೌಢಾ ಶಾಲಾ ವಿದ್ಯಾರ್ಥಿಗಳು ಜೊತೆ ಪೋಷಕರ ಗುಂಪು ತಸಿಕ್ಮಲಯ ಜಿಲ್ಲೆಯ ತೀರ್ಥಯಾತ್ರೆಕ್ಕೆ ಬಸ್ ತೆರುಳುತ್ತಿದ್ದಾಗ ಬುಧವಾರ ತಡರಾತ್ರಿ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯ ಪೊಲೀಸ್​ ಮುಖ್ಯಸ್ಥರು ತಿಳಿಸಿದ್ದಾರೆ.

ಸುಮೇಡಾಂಗ್ ಜಿಲ್ಲೆಯಲ್ಲಿ ಹಲವಾರು ತೀವ್ರ ಕುಸಿತಗಳು ಕಂಡುಬಂದ ಪ್ರದೇಶದಲ್ಲಿ ಚಾಲಕ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾನೆ. ನಂತರ ಬಸ್ 20 ಮೀಟರ್ ಆಳದ ಕಂದಕಕ್ಕೆ ಉರುಳಿದೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದರು. 

ಅಪಘಾತದ ಕಾರಣದ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆದರೆ, ಗಾಯಾಗಳುಗಳು ಹೇಳಿಕೆ ಪ್ರಕಾರ ವಾಹನದ ಬ್ರೇಕ್  ಫೇಲ್​ ಆಗಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ. 

ಚಾಲಕ ಸೇರಿ 26 ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಗಾಯಗೊಂಡ 35 ಜನರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Last Updated : Mar 11, 2021, 9:05 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.