ಕಠ್ಮಂಡು: ಬಸ್ ಚಾಲಕನ ನಿಯಂತ್ರಣ ತಪ್ಪಿ ತುಂಬಿ ಹರಿಯುತ್ತಿರುವ ನದಿಗೆ ಉರುಳಿ ಬಿದ್ದಿದ್ದು, 17 ಪ್ರಯಾಣಿಕರು ನೀರುಪಾಲಾಗಿರುವ ಘಟನೆ ಕಠ್ಮಂಡುವಿನಲ್ಲಿ ನಡೆದಿದೆ.
ದೊಲ್ಖಾ ಜಿಲ್ಲೆಯಿಂದ ಕಠ್ಮಂಡುವಿಗೆ ಬಸ್ವೊಂದು ತೆರಳುತ್ತಿತ್ತು. ಮಹಿಳೆಯರೇ ಹೆಚ್ಚಾಗಿ ಪ್ರಯಾಣಿಸುತ್ತಿದ್ದ ಬಸ್ ಚಾಲಕನ ನಿಯಂತ್ರ ತಪ್ಪಿ 100 ಮೀಟರ್ ಮೇಲಿನಿಂದ ತುಂಬಿ ಹರಿಯುತ್ತಿದ್ದ ಸುಂಕೋಶಿ ನದಿಗೆ ಬಿದ್ದಿದೆ. ಅಪಘಾತದಲ್ಲಿ ಮೂರು ತಿಂಗಳ ಮಗು ಸೇರಿದಂತೆ 17 ಜನರು ಸಾವನ್ನಪ್ಪಿದ್ದಾರೆ. ಈ ಘಟನೆ ಬಗ್ಗೆ ಕಠ್ಮಂಡು ಪೊಲೀಸರು ಮಾಹಿತಿ ನೀಡಿದ್ದಾರೆ.
-
In Nepal at least 14 persons including eight women and two children died after a bus plunged into a river in Sindhupalchowk district. The accident occurred this afternoon when a bus skidded off the road and fell some 500 meter into Sunkoshiriver in Sukute. pic.twitter.com/Y6q24MtSlM
— DD India - English News (@DDIndiaLive) November 3, 2019 " class="align-text-top noRightClick twitterSection" data="
">In Nepal at least 14 persons including eight women and two children died after a bus plunged into a river in Sindhupalchowk district. The accident occurred this afternoon when a bus skidded off the road and fell some 500 meter into Sunkoshiriver in Sukute. pic.twitter.com/Y6q24MtSlM
— DD India - English News (@DDIndiaLive) November 3, 2019In Nepal at least 14 persons including eight women and two children died after a bus plunged into a river in Sindhupalchowk district. The accident occurred this afternoon when a bus skidded off the road and fell some 500 meter into Sunkoshiriver in Sukute. pic.twitter.com/Y6q24MtSlM
— DD India - English News (@DDIndiaLive) November 3, 2019
ಅಪಘಾತದಲ್ಲಿ 48ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 48 ಮಂದಿ ಗಾಯಳುಗಳ ಪೈಕಿ ಆರು ಜನರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಏರುವ ಸಾಧ್ಯತೆಯಿದೆ. ಈ ಘಟನೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.