ಹೈದರಾಬಾದ್ : ಕಳೆದ ತಿಂಗಳು ಚೀನಾ ರಾಷ್ಟ್ರೀಯ ಭದ್ರತಾ ಕಾನೂನು ಪ್ರಸ್ತಾಪ ಮಾಡಿತ್ತು. ಇದು ಹಾಂಕಾಂಗ್‌ನಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಚೀನಾದ ಸ್ವಾಯತ್ತತೆಯಾಗಿರುವ ಹಾಂಕಾಂಗ್ ಪ್ರಜೆಗಳು ತಮ್ಮ ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ.
ಬ್ರಿಟೀಷ್ ಕಲೋನಿಯಲ್ 1997ರಲ್ಲಿ 'ಒಂದು ದೇಶ' 'ಎರಡು ವ್ಯವಸ್ಥೆ'ಯಡಿ ಹಾಂಕಾಂಗ್‌ನ ಚೀನಾಗೆ ಒಪ್ಪಿಸಿದ್ದರು. ಇದಕ್ಕೆ ವಿಶೇಷ ಹಕ್ಕುಗಳು ಮತ್ತು ಸ್ವಾಯತ್ತತೆ ನೀಡಲಾಗಿತ್ತು. ತನ್ನದೇ ಆದ ನ್ಯಾಯಾಂಗ ಮತ್ತು ಕಾನೂನು ವ್ಯವಸ್ಥೆ ಹೊಂದಿರುವ ಹಾಂಕಾಂಗ್‌ನಲ್ಲಿ ಇದೀಗ ಪೂರ್ಣ ಸ್ವಾತಂತ್ರ್ಯ ಹಾಗೂ ಪೊಲೀಸರು ನಡೆಸಿದ್ದಾರೆ ಎನ್ನಲಾದ ದೌರ್ಜನ್ಯ ಕುರಿತು ತನಿಖೆಗೆ ಒತ್ತಾಯಿಸಿ ಲಕ್ಷಾಂತರ ಜನ ಬೀದಿಗಳಿದು ಪ್ರತಿಭಟನೆ ಮಾಡುತ್ತಿದ್ದಾರೆ.
ಈ ಬಗ್ಗೆ ಹಾಂಕಾಂಗ್‌ನ ಸಿವಿಕ್ ಪಕ್ಷದ ನಾಯಕ ಹಾಗೂ ಜನಪ್ರತಿನಿಧಿ ಅಲ್ವಿನ್ ಯೆಯುಂಗ್ ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ. ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಾ, ಅಲ್ವಿನ್ ಅವರೊಂದಿಗೆ ಸಂದರ್ಶನ ನಡೆಸಿದ್ದಾರೆ.
ಚೀನಾ ಎಂದಿಗೂ 'ಒಂದು ದೇಶ' 'ಎರಡು ವ್ಯವಸ್ಥೆ'ಯನ್ನು ಗೌರವಿಸೋದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅಲ್ವಿನ್, ಅಮೆರಿಕ ಹಾಂಕಾಂಗ್‌ಗೆ ವಿಶೇಷ ಸ್ಥಾನಮಾನ ನೀಡಿದೆ. ತಮ್ಮದೇ ಆದ ಕಾನೂನು ವ್ಯವಸ್ಥೆಯನ್ನು ಹೊಂದಿದ್ದೇವೆ ಎನ್ನುವ ಮೂಲಕ ಚೀನಾ ರಾಷ್ಟ್ರೀಯ ಭದ್ರತಾ ಕಾನೂನು ಪ್ರಸ್ತಾಪಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತ ಸೇರಿ ವಿವಿಧ ದೇಶಗಳ ಪ್ರಜೆಗಳು ಇಲ್ಲಿ ನೆಲೆಸಿದ್ದಾರೆ. ಹಲವರು ಹೂಡಿಕೆ ಮಾಡಿದ್ದಾರೆ. ಅಲ್ಲದೆ ಚೀನಾದಲ್ಲಿ ಏನಾಗ್ತಿದೆ ಅನ್ನೋದು ಅಲ್ಲಿನ ಜನರಿಗೆ ಗೊತ್ತಿದೆ ಎಂದು ಹೇಳಿದ್ದಾರೆ.
ಕಮ್ಯೂನಿಸ್ಟರ ನಾಡಲ್ಲಿ ಅಧ್ಯಕ್ಷ ಕ್ಸಿ ಜಿಂಗ್ ಪಿಂಗ್ ಅಧಿಕಾರವನ್ನು ಚೀನಿ ಪ್ರಜೆಗಳು ಪ್ರಶ್ನಿಸುತ್ತಿದ್ದಾರೆ. ತಮ್ಮ ವಿರುದ್ಧ ಎದ್ದಿರುವ ವಿರೋಧದ ಅಲೆಯಿಂದ ಬಚಾವ್ ಆಗಲು ಜಿಂಗ್ ಪಿಂಗ್, ಹಾಂಕಾಂಗ್ ವಿಚಾರವನ್ನು ಪ್ರಸ್ತಾಪಿಸಿದ್ದಾರೆ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.