ETV Bharat / international

ಒಮಿಕ್ರಾನ್​ ಸೋಂಕಿಗೆ ಆಸ್ಟ್ರೇಲಿಯಾದಲ್ಲಿ ಮೊದಲ ಬಲಿ - ಒಮಿಕ್ರಾನ್​ ಅಪ್ಡೇಟ್​ ನ್ಯೂಸ್​

ಒಮಿಕ್ರಾನ್​ ವೈರಾಣು ವಿಶ್ವಕ್ಕೆ ವ್ಯಾಪಿಸುತ್ತಿದೆ. ಆಸ್ಟ್ರೇಲಿಯಾದಲ್ಲಿ ಮೊದಲ ಸಾವು ವರದಿಯಾಗಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

Omicron
Omicron
author img

By

Published : Dec 27, 2021, 9:46 AM IST

ಆಸ್ಟ್ರೇಲಿಯಾ: ವಿಶ್ವಾದ್ಯಂತ ಕೊರೊನಾ ರೂಪಾಂತರಿ ಒಮಿಕ್ರಾನ್ ವೈರಸ್​ ಆತಂಕ ಮನೆಮಾಡಿದ್ದು ಆಘಾತಕಾರಿ ವಿಚಾರ ಏನಂದ್ರೆ, ಆಸ್ಟ್ರೇಲಿಯಾದಲ್ಲಿ ಒಮಿಕ್ರಾನ್ ಮೊದಲ ಬಲಿ ಪಡೆದಿದೆ.

80 ವರ್ಷದ ವ್ಯಕ್ತಿಯೊಬ್ಬರು ಒಮಿಕ್ರಾನ್​ ಸೋಂಕು ತಗುಲಿ ಚಿಕಿತ್ಸೆ ಫಲಕಾರಿಯಾಗದೇ ಸಿಡ್ನಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇವರು ಕೊವಿಡ್-​19 ಹೊಸ ತಳಿ ಒಮಿಕ್ರಾನ್​ನಿಂದ ನ್ಯೂ ಸೌತ್ ವೇಲ್ಸ್‌ನಲ್ಲಿ ರಾಜ್ಯದಲ್ಲಿ ಮೃತಪಟ್ಟ ಮೊದಲ ವ್ಯಕ್ತಿ ಎಂದು ಸರ್ಕಾರ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಎನ್‌ಎಸ್‌ಡಬ್ಲ್ಯೂ ಹೆಲ್ತ್ ಎಪಿಡೆಮಿಯಾಲಜಿಸ್ಟ್ ಕ್ರಿಸ್ಟೀನ್ ಸೆಲ್ವೆ ತಿಳಿಸಿದ್ದಾರೆ.

ಕಳೆದ ದಿನ ಆಸ್ಟ್ರೇಲಿಯಾದಲ್ಲಿ ಒಟ್ಟು 6 ಮಂದಿ ಕೋವಿಡ್‌ ಸೋಂಕಿಗೆ ಬಲಿಯಾಗಿದ್ದರು. ಅವರಲ್ಲಿ ಈ ವ್ಯಕ್ತಿ ಕೂಡ ಸೇರಿದ್ದಾನೆ. ಎನ್‌ಎಸ್‌ಡಬ್ಲ್ಯೂ​ ಮತ್ತು ವಿಕ್ಟೋರಿಯಾ ರಾಜ್ಯಗಳು ಹೆಚ್ಚು ಜನಸಂಖ್ಯೆ ಹೊಂದಿದ್ದು, ಅಲ್ಲೇ ಅಧಿಕ ಕೋವಿಡ್ ಸೋಂಕಿತರು ಪತ್ತೆಯಾಗುತ್ತಿದ್ದಾರೆ, ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಕೋವಿಡ್​ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಅಧಿಕಾರಿಗಳು ಲಾಕ್‌ಡೌನ್ ಕುರಿತು ಚಿಂತನೆ ನಡೆಸುತ್ತಿದ್ದಾರೆ. ಆದರೆ ಇದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದು, ಕೆಲ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.

ಡಿಸೆಂಬರ್​ ಪ್ರಾರಂಭದಲ್ಲಿ ಬ್ರಿಟನ್​​ನಲ್ಲಿ ಒಮಿಕ್ರಾನ್​ನಿಂದ ಮೊದಲ ಸಾವು ಸಂಭವಿಸಿತ್ತು. ಇದು ವಿಶ್ವದಲ್ಲೇ ಮೊದಲ ಒಮಿಕ್ರಾನ್ ಸಾವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.