ವಿಯೆಟ್ನಾಂ: ಸಾಂಕ್ರಾಮಿಕ ರೋಗದ ಕುರಿತು ಆನ್‌ಲೈನ್‌ನಲ್ಲಿ ಏಷ್ಯಾದ ನಾಯಕರ ಶೃಂಗಸಭೆ ನಡೆಯಲಿದ್ದು, ಅದರಲ್ಲಿ ಕೊರೊನಾ ವೈರಸ್ ನಿಭಾಯಿಸಲು ತುರ್ತು ನಿಧಿಯನ್ನು ಸ್ಥಾಪಿಸುವಂತೆ ವಿಯೆಟ್ನಾಂ ಆಗ್ರಹಿಸಲಿದೆ.
ಕೋವಿಡ್-19 ಕುರಿತು ನಡೆಯಲಿರುವ ಈ (ಆಸಿಯಾನ್)' ಸಭೆಯ ಅಧ್ಯಕ್ಷತೆಯನ್ನು ಹನೋಯಿ (ವಿಯೆಟ್ನಾಂ) ವಹಿಸಲಿದೆ.
ಕೊರೊನಾ ವೈರಸ್ ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿ ಕ್ವಾರಂಟೈನ್ ಹಾಗೂ ಸಾಮಾಜಿಕ ಅಂತರವನ್ನು ವಿಯೆಟ್ನಾಂ ಸಾಧಿಸಿದೆ.
ವಿಯೆಟ್ನಾಂನಲ್ಲಿ 265 ಕೊರೊನಾ ವೈರಸ್ ಪ್ರಕರಣಗಳಿದ್ದು, ಯಾವುದೇ ಸಾವು ಸಂಭವಿಸಿಲ್ಲ.
ಥಾಯ್ಲೆಂಡ್ ಕೂಡಾ ಕೊರೊನಾ ವೈರಸ್ ನಿಯಂತ್ರಿಸುತ್ತಿದ್ದು, ದೇಶದಲ್ಲಿ ಈವರೆಗೆ 2,500 ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿದ್ದು, 40 ಜನ ಸಾವನ್ನಪ್ಪಿದ್ದಾರೆ.