ಕಾಬೂಲ್, ಅಫ್ಘಾನಿಸ್ತಾನ: ನೆರೆಯ ರಾಷ್ಟ್ರ ತಾಲಿಬಾನ್ನಲ್ಲಿ ಹಾವು ಏಣಿ ಆಟ ಮುಂದುವರೆದಿದೆ. ತಾಲಿಬಾನ್ ಭಯೋತ್ಪಾದಕರಿಂದ ಉತ್ತರ ಬಘ್ಲಾನ್ ಪ್ರಾಂತ್ಯದ ಜಿಲ್ಲೆಯೊಂದನ್ನು ಆಫ್ಘನ್ ಪಡೆ ವಶಕ್ಕೆ ಪಡೆದುಕೊಂಡಿದೆ.
ಉತ್ತರ ಬಘ್ಲಾನ್ ಪ್ರಾಂತ್ಯದ ಪೊಲ್-ಇ- ಹೆಸಾರ್ ಜಿಲ್ಲೆಯನ್ನು ಆಫ್ಘನ್ ಪಡೆಗಳು ತಾಲಿಬಾನಿಗಳಿಂದ ವಶಕ್ಕೆ ಪಡೆದಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದ್ದು ಈ ಮೂಲಕ ಆಫ್ಘನ್ನಲ್ಲಿ ಪಡೆಗಳಲ್ಲಿ ಹುಮ್ಮಸ್ಸು ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.
ತಾಲಿಬಾನಿಗಳಿಂದ ದೆಹ್ ಸಲಾಹ್ ಮತ್ತು ಖ್ವಸಾನ್ ಜಿಲ್ಲೆಗಳನ್ನೂ ಆಫ್ಘನ್ ಪಡೆಗಳು ವಶಕ್ಕೆ ಪಡೆದುಕೊಂಡಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ ಎಂದು ಆಫ್ಘಾನಿಸ್ತಾದನ ಖಾಮಾ ಪ್ರೆಸ್ ಶುಕ್ರವಾರ ವರದಿ ಮಾಡಿದೆ.
-
مقاومت علیه طالبان تروریست بر هر یک ما فرض است #ولسوالی های پل حصار، ده صلاح و بنو در بغلان به تصرف نیروهای مقاومت مردمی درآمده است.
— General Bismillah Mohammadi (@Muham_madi1) August 20, 2021 " class="align-text-top noRightClick twitterSection" data="
مقاومت هنوز زنده است.
">مقاومت علیه طالبان تروریست بر هر یک ما فرض است #ولسوالی های پل حصار، ده صلاح و بنو در بغلان به تصرف نیروهای مقاومت مردمی درآمده است.
— General Bismillah Mohammadi (@Muham_madi1) August 20, 2021
مقاومت هنوز زنده است.مقاومت علیه طالبان تروریست بر هر یک ما فرض است #ولسوالی های پل حصار، ده صلاح و بنو در بغلان به تصرف نیروهای مقاومت مردمی درآمده است.
— General Bismillah Mohammadi (@Muham_madi1) August 20, 2021
مقاومت هنوز زنده است.
ಈ ಕುರಿತಂತೆ ಟ್ವೀಟ್ ಮಾಡಿರುವ ಅಫ್ಘಾನಿಸ್ತಾನದ ಮಾಜಿ ರಕ್ಷಣಾ ಸಚಿವ ಬಿಸ್ಮಿಲ್ಲಾ ಮುಹಮ್ಮದಿ ತಾಲಿಬಾನ್ ಉಗ್ರರನ್ನು ಹತ್ತಿಕ್ಕುವುದು ನಮ್ಮ ಕರ್ತವ್ಯ, ತಾಲಿಬಾನ್ನಿಂದ ಪೊಲ್-ಇ-ಹೆಸಾರ್, ದೆಹ್ ಸಲಾಹ್, ಬೆನೋ ಜಿಲ್ಲೆಗಳನ್ನು ಆಫ್ಘನ್ ಪಡೆಗಳು ವಶಕ್ಕೆ ಪಡೆದಿವೆ' ಎಂದು ಮಾಹಿತಿ ನೀಡಿದ್ದಾರೆ.
ಸದ್ಯಕ್ಕೆ ಬಿಸ್ಮಿಲ್ಲಾ ಮುಹಮ್ಮದಿ ಇನ್ನೂ ತಾಲಿಬಾನ್ ಅಧೀನಕ್ಕೆ ಒಳಪಡದ ಪಂಜ್ಶೀರ್ ಪ್ರಾಂತ್ಯದಲ್ಲಿದ್ದು, ತಾಲಿಬಾನಿಗಳು ಕಾಬೂಲ್ ಅನ್ನು ವಶಕ್ಕೆ ಪಡೆದುಕೊಂಡಾಗ ಪಂಜ್ಶೀರ್ ಪ್ರಾಂತ್ಯಕ್ಕೆ ಪಲಾಯನ ಮಾಡಿದ್ದರು.
ತಾಲಿಬಾನಿಗಳಿಂದ ಆಫ್ಘನ್ ಪಡೆಗಳು ಜಿಲ್ಲೆಗಳನ್ನು ವಶಕ್ಕೆ ಪಡೆಯುವ ವೇಳೆ ಸುಮಾರು 40 ತಾಲಿಬಾನಿಗಳನ್ನು ಕೊಲ್ಲಲಾಗಿದ್ದು, 15 ಮಂದಿಗೆ ಗಾಯಗಳಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆದರೆ ಈ ಬಗ್ಗೆ ತಾಲಿಬಾನ್ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
ಇದನ್ನೂ ಓದಿ: Afghanistan Crisis: ಕತಾರ್ ವಿದೇಶಾಂಗ ಸಚಿವರೊಂದಿಗೆ ಮಾತುಕತೆ ನಡೆಸಿದ ಎಸ್.ಜೈಶಂಕರ್