ಕಾಬೂಲ್(ಅಫ್ಘಾನಿಸ್ತಾನ): ತಾಲಿಬಾನ್ ಸಂಘಟನೆ ಅಫ್ಘಾನಿಸ್ತಾನದಲ್ಲಿ ಸೃಷ್ಟಿಸಿರುವ ಪರಿಸ್ಥಿತಿಗಳ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಕ್ರಿಯೆಗಳು ಕೇಳಿಬರುತ್ತಿವೆ. ಈಗ ಕಾಬೂಲ್ನಲ್ಲಿ ಐಎಸ್-ಕೆ ಸಂಘಟನೆ (ಖೊರೋಸಾನ್ನಲ್ಲಿ ಐಸಿಸ್ ಅನ್ನು ಹೀಗೆ ಕರೆಯಲಾಗುತ್ತದೆ) ನಡೆಸಿದ ದಾಳಿಯನ್ನು ಬಹುತೇಕ ಎಲ್ಲಾ ರಾಷ್ಟ್ರಗಳೂ ಖಂಡಿಸಿವೆ.
-
Every evidence we have in hand shows that IS-K cells have their roots in Talibs & Haqqani network particularly the ones operating in Kabul. Talibs denying links with ISIS is identical/similar to denial of Pak on Quetta Shura. Talibs hv leanred vry well from the master. #Kabul
— Amrullah Saleh (@AmrullahSaleh2) August 27, 2021 " class="align-text-top noRightClick twitterSection" data="
">Every evidence we have in hand shows that IS-K cells have their roots in Talibs & Haqqani network particularly the ones operating in Kabul. Talibs denying links with ISIS is identical/similar to denial of Pak on Quetta Shura. Talibs hv leanred vry well from the master. #Kabul
— Amrullah Saleh (@AmrullahSaleh2) August 27, 2021Every evidence we have in hand shows that IS-K cells have their roots in Talibs & Haqqani network particularly the ones operating in Kabul. Talibs denying links with ISIS is identical/similar to denial of Pak on Quetta Shura. Talibs hv leanred vry well from the master. #Kabul
— Amrullah Saleh (@AmrullahSaleh2) August 27, 2021
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್, ಐಎಸ್-ಕೆ ಸಂಘಟನೆ ಕಾಬೂಲ್ನಿಂದ ಕಾರ್ಯಾಚರಣೆ ನಡೆಸುವ ತಾಲಿಬಾನ್ ಮತ್ತು ಹಕ್ಕಾನಿ ಸಂಘಟನೆಗಳೊಂದಿಗೆ ನೇರ ಸಂಪರ್ಕ ಹೊಂದಿದೆ ಎಂದು ಈಗಿರುವ ಎಲ್ಲಾ ಸಾಕ್ಷ್ಯಗಳು ಬಹಿಂಗಪಡಿಸುತ್ತವೆ.
ಪಾಕಿಸ್ತಾನ ಸರ್ಕಾರ ಕ್ವೆಟ್ಟಾ ಶುರಾ ಭಯೋತ್ಪಾದಕ ಸಂಘಟನೆಯೊಂದಿಗಿನ ಸಂಪರ್ಕವನ್ನು ನಿರಾಕರಿಸುವಂತೆ ತಾಲಿಬಾನಿಗಳು ಐಸಿಸ್ನೊಂದಿಗಿನ ಸಂಬಂಧವನ್ನು ನಿರಾಕರಿಸುತ್ತಾರೆ ಎಂದು ಸಹೇಲ್ ವ್ಯಂಗ್ಯವಾಡಿದ್ದಾರೆ.
ಈ ಮೂಲಕ ಪಾಕಿಸ್ತಾನ ಸರ್ಕಾರವು ಕ್ವೆಟ್ಟಾ ಶುರಾ ಎಂಬ ಭಯೋತ್ಪಾದನಾ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದೆ ಎಂಬ ವಿಚಾರವನ್ನು ಅವರು ಹೊರಹಾಕಿದ್ದಾರೆ. ಇದರ ಜೊತೆಗೆ ತಾಲಿಬಾನಿಗಳು ಪಾಕ್ನಿಂದ ಸಾಕಷ್ಟು ಕಲಿತಿದ್ದಾರೆ ಎಂದು ಪರೋಕ್ಷವಾಗಿ ಟೀಕಿಸಿದ್ದಾರೆ.
ಈ ಹಿಂದೆ, ಅಫ್ಘಾನಿಸ್ತಾನದಲ್ಲಿ ಅವಾಂತರ ಸೃಷ್ಟಿಸುವ ಸಲುವಾಗಿ ತಾಲಿಬಾನ್‌ಗೆ ಸ್ಫೋಟಕ ಸಾಮಗ್ರಿಗಳನ್ನು ಒದಗಿಸುವ ಏಜೆನ್ಸಿಗಳನ್ನು ಪಾಕಿಸ್ತಾನ ಸ್ಥಾಪಿಸಿದೆ ಎಂದು ಅಮರುಲ್ಲಾ ಸಲೇಹ್ ಆರೋಪಿಸಿದ್ದರು.
ಇದನ್ನೂ ಓದಿ: Mysuru gang rape case: ಸಂತ್ರಸ್ತೆ ಯಾವುದೇ ಹೇಳಿಕೆ ನೀಡಿಲ್ಲ: ಆರಗ ಜ್ಞಾನೇಂದ್ರ