ETV Bharat / international

ಒಂದೇ ದಿನ ಅಫ್ಘನ್​ನಲ್ಲಿ 200 ಉಗ್ರರ ಹತ್ಯೆ: ಕುಂಡುಜ್‌ ನಗರ ವಶಕ್ಕೆ ಪಡೆದ ತಾಲಿಬಾನ್‌

ಕಳೆದ 24 ಗಂಟೆಗಳಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಹಾಗೂ ಭದ್ರತಾ ಪಡೆ ನಡುವೆ ನಡೆದ ಸಂಘರ್ಷದಲ್ಲಿ 200ಕ್ಕೂ ಹೆಚ್ಚು ಭಯೋತ್ಪಾದಕರು ಹತರಾಗಿದ್ದರೆ, 11 ನಾಗರಿಕರು ಮೃತಪಟ್ಟಿದ್ದಾರೆ. ಇದೇ ವೇಳೆ, ತಮ್ಮ ಹೋರಾಟ ಹಾಗು ವಿಧ್ವಂಸಕ ಕೃತ್ಯಗಳನ್ನು ಮುಂದುವರೆಸುತ್ತಲೇ ಇರುವ ತಾಲಿಬಾನಿ ಉಗ್ರರು ಕುಂಡುಜ್‌ ನಗರವನ್ನು ಕೈವಶ ಮಾಡಿಕೊಂಡಿದ್ದಾರೆ ಎಂದು ತಿಳಿಬಂದಿದೆ.

ತಾಲಿಬಾನ್ ಉಗ್ರರ ಹತೈ
ತಾಲಿಬಾನ್ ಉಗ್ರರ ಹತೈ
author img

By

Published : Aug 8, 2021, 2:19 PM IST

ಕಾಬೂಲ್: ಅಫ್ಘಾನಿಸ್ತಾನದ ಶೆಬರ್‌ಗಾನ್ ನಗರದಲ್ಲಿ ಅಫ್ಘನ್ ವಾಯುಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ತಾಲಿಬಾನ್ ಉಗ್ರ ಸಂಘಟನೆ ಭಾರಿ ಪ್ರಮಾಣದ ಸಾವು-ನೋವು ಅನುಭವಿಸಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ತಾಲಿಬಾನ್ ಉಗ್ರರ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದ್ದು, 200ಕ್ಕೂ ಹೆಚ್ಚು ಭಯೋತ್ಪಾದಕರು ಹತರಾಗಿದ್ದಾರೆ. ಅಲ್ಲದೇ ಉಗ್ರರ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಅವರ 100ಕ್ಕೂ ಹೆಚ್ಚು ವಾಹನಗಳು ನಾಶವಾಗಿವೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಫವಾದ್ ಅಮನ್ ಟ್ವೀಟ್ ಮಾಡಿದ್ದಾರೆ.

  • #Details: More than 200 terrorist Taliban were killed in #Cheberghan city after Air Forces targeted their gathering and hideouts today evening. A large amount of their weapons and ammunition and more than 100s of their vehicles were destroyed as a result of the airstrikes.

    — Fawad Aman (@FawadAman2) August 7, 2021 " class="align-text-top noRightClick twitterSection" data=" ">

ಇದನ್ನೂ ಓದಿ: 94 ತಾಲಿಬಾನ್, ಅಲ್-ಖೈದಾ ಉಗ್ರರ ಸದೆಬಡಿದ ಅಫ್ಘನ್ ಸೇನೆ

ಇನ್ನು ಇತ್ತ ಕಳೆದ 24 ಗಂಟೆಗಳಲ್ಲಿ ಎರಡು ಪ್ರಾಂತ್ಯಗಳಲ್ಲಿ ತಾಲಿಬಾನ್​ ಉಗ್ರರು ನಡೆಸಿದ ದಾಳಿಯಲ್ಲಿ 11 ಮಂದಿ ನಾಗರಿಕರು ಸಾವನ್ನಪ್ಪಿದ್ದು, 64 ಜನರು ಗಾಯಗೊಂಡಿದ್ದಾರೆ. ನಿನ್ನೆ ಕೂಡ ಕುಂದುಜ್ ಪ್ರಾಂತ್ಯದಲ್ಲಿ ನಡೆದ ಘರ್ಷಣೆಯಲ್ಲಿ 10 ನಾಗರಿಕರು ಮೃತಪಟ್ಟಿದ್ದು, 42 ಜನರು ಗಾಯಗೊಂಡಿದ್ದರು. ಇದೀಗ ಬಂದಿರುವ ಮಾಹಿತಿ ಪ್ರಕಾರ, ತಾಲಿಬಾನಿಗಳು ಕುಂಡುಜ್‌ ಅನ್ನು ತಮ್ಮ ಸ್ವಾಧೀನಕ್ಕೆ ಪಡೆದಿದ್ದಾರೆ. ಕುಂಡುಜ್ ನಗರ ಅಫ್ಘಾನಿಸ್ತಾನದ ಪ್ರಾದೇಶಿಕ ರಾಜಧಾನಿಯಾಗಿದೆ.

ಅಫ್ಘಾನಿಸ್ತಾನದಿಂದ ಅಮೆರಿಕ ಸೇನೆ ಹಿಂದೆ ಸರಿದ ಬಳಿಕ ದೇಶವು ಹಿಂಸಾಚಾರದ ಉಲ್ಬಣಕ್ಕೆ ಸಾಕ್ಷಿಯಾಗಿದೆ. ಅಫ್ಘನ್ ನಾಗರಿಕರು ಮತ್ತು ಭದ್ರತಾ ಪಡೆಗಳ ವಿರುದ್ಧ ತಾಲಿಬಾನ್​ ಉಗ್ರರು ತಮ್ಮ ಆಕ್ರಮಣವನ್ನು ತೀವ್ರಗೊಳಿಸಿದ್ದಾರೆ. ಹಲವು ಜಿಲ್ಲೆಗಳ ಮೇಲೆ ಹಿಡಿತ ಸಾಧಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.