ಘಜ್ನಿ: ಅಫ್ಘಾನಿಸ್ತಾನದಲ್ಲಿ ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡು ಪುಲ್ವಾಮಾ ಮಾದರಿಯಲ್ಲಿ ಆತ್ಮಾಹುತಿ ಕಾರುಬಾಂಬ್ ಸ್ಫೋಟಿಸಲಾಗಿದ್ದು, ಘಟನೆಯಲ್ಲಿ ಭದ್ರತಾ ಸಿಬ್ಬಂದಿ ಸೇರಿದಂತೆ 31 ಜನ ಮೃತಪಟ್ಟಿದ್ದಾರೆ.
ಅಫ್ಘಾನಿಸ್ತಾನದ ಘಜ್ನಿ ಪ್ರಾಂತ್ಯದಲ್ಲಿ ಭಾನುವಾರ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 31 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಇಂದು ವಾರಣಾಸಿಗೆ ಪ್ರಧಾನಿ ಭೇಟಿ: ನವೀಕೃತ ರಾಷ್ಟ್ರೀಯ ಹೆದ್ದಾರಿ ಸಮರ್ಪಣೆ
ಭಾನುವಾರ ಬೆಳಗ್ಗೆ ಘಜ್ನಿಯಲ್ಲಿರುವ ಸಾರ್ವಜನಿಕ ಸಂರಕ್ಷಣಾ ಘಟಕದ ಸಮೀಪ ಆತ್ಮಾಹುತಿ ಕಾರ್ ಬಾಂಬರ್ ತನ್ನ ಸ್ಫೋಟಕಗಳನ್ನು ಸ್ಫೋಟಿಸಿದ್ದಾನೆ ಎಂದು ಪ್ರಾಂತೀಯ ರಾಜ್ಯಪಾಲರ ವಕ್ತಾರ ವಹಿದುಲ್ಲಾ ಜುಮಾಜಾಡಾ ಹೇಳಿದ್ದಾರೆ.
ಸಾರ್ವಜನಿಕ ಸಂರಕ್ಷಣಾ ಘಟಕದ ಮೇಲಿನ ದಾಳಿಯ ಸಾವಿನ ಸಂಖ್ಯೆ 31ಕ್ಕೆ ಏರಿದ್ದು, 24 ಮಂದಿ ಗಾಯಗೊಂಡಿದ್ದಾರೆ. ಈ ದಾಳಿಯಲ್ಲಿ ಹೆಚ್ಚಾಗಿ ಮಿಲಿಟರಿ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ಸ್ಥಳೀಯ ಸಾರ್ವಜನಿಕ ಆರೋಗ್ಯ ಇಲಾಖೆಯ ಮುಖ್ಯಸ್ಥ ಜಹೀರ್ ಶಾ ನಿಕ್ಮಲ್ ಹೇಳಿದ್ದಾರೆ.
ಇದನ್ನೂ ಓದಿ: ಮಾರುತಿ ವ್ಯಾನ್ಗೆ ಅಪ್ಪಳಿಸಿದ ಸರ್ಕಾರಿ ಬಸ್: ಭೀಕರ ಅಪಘಾತದಲ್ಲಿ ಮೂವರ ದುರ್ಮರಣ
ಭದ್ರತಾ ಮೂಲಗಳ ಪ್ರಕಾರ, ಬಾಂಬರ್ ಸ್ಫೋಟಕಗಳಿಂದ ತುಂಬಿದ್ದ ಹಮ್ವೀ ವಾಹನವನ್ನು ಸ್ಫೋಟಿಸಿದ್ದಾನೆ ಎಂದು ತಿಳಿದು ಬಂದಿದೆ. ಆದರೆ, ಇದುವರೆಗೂ ಯಾವುದೇ ಭಯೋತ್ಪಾದಕ ಸಂಘಟನೆಗಳು ಈ ಸ್ಫೋಟದ ಜವಾಬ್ದಾರಿ ಹೊತ್ತುಕೊಂಡಿಲ್ಲ.
ಪೂರ್ವ ಅಫ್ಘಾನಿಸ್ತಾನದ ಘಜ್ನಿಯಲ್ಲಿ ಈ ದಾಳಿ ಸಂಭವಿಸಿದ್ದು, ಈ ಪ್ರದೇಶದಲ್ಲಿ ತಾಲಿಬಾನ್ ಉಗ್ರ ಪಡೆಗಳು ಮತ್ತು ಸೇನೆ ನಡುವೆ ನಿರಂತರವಾಗಿ ಘರ್ಷಣೆಗಳು ನಡೆಯುತ್ತಲೇ ಇವೆ.
ಇತ್ತೀಚಿನ ದಿನಗಳಲ್ಲಿ ಅಫ್ಘಾನಿಸ್ತಾನದಲ್ಲಿ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಅತಿ ದೊಡ್ಡ ದಾಳಿ ಇದಾಗಿದೆ.