ತೈಪೆ (ತೈವಾನ್): ಯುಎಸ್ನಲ್ಲಿ ತರಬೇತಿ ಪಡೆದ ಅಧಿಕಾರಿ ತೈವಾನ್‌ನ ರಕ್ಷಣಾ ಮಂತ್ರಿಯಾಗಿ ನೇಮಕವಾಗಿದ್ದು, ಇದರ ಬೆನ್ನಲ್ಲೇ ಚೀನಾದ ಎಂಟು ಯುದ್ಧ ವಿಮಾನಗಳು ವಾಯು ರಕ್ಷಣಾ ವಲಯದ ನೈಋತ್ಯ ಭಾಗಕ್ಕೆ ಹಾರಿ, ತೈವಾನ್ ಸಮೀಪಿಸಿವೆ.
"ಒಂಬತ್ತು ಪಿಎಲ್‌ಎ ವಿಮಾನಗಳು (ಜೆ -16 * 4, ಜೆಹೆಚ್ -7 * 4 ಮತ್ತು ವೈ -9 ಇಡಬ್ಲ್ಯೂ) 2021ರ ಫೆಬ್ರವರಿ 19ರಂದು ತೈವಾನ್‌ನ ನೈಋತ್ಯ ವಲಯಕ್ಕೆ ಪ್ರವೇಶಿಸಿವೆ" ಎಂದು ತೈವಾನ್ ಸಚಿವಾಲಯ ತನ್ನ ಟ್ವೀಟ್‌ನಲ್ಲಿ ತಿಳಿಸಿದೆ.
"ಎಚ್ಚರಿಕೆಗಳನ್ನು ನೀಡಲಾಗಿದೆ ಮತ್ತು ಚಟುವಟಿಕೆಯ ಮೇಲ್ವಿಚಾರಣೆ ಮಾಡಲು ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳನ್ನು ನಿಯೋಜಿಸಲಾಗಿದೆ" ಎಂದು ತೈವಾನ್ ವಾಯುಪಡೆ ತಿಳಿಸಿದೆ.
1999ರಲ್ಲಿ ಯುಎಸ್ ಆರ್ಮಿ ವಾರ್ ಕಾಲೇಜಿನಿಂದ ಪದವಿ ಪಡೆದ ರಾಷ್ಟ್ರೀಯ ಭದ್ರತಾ ಬ್ಯೂರೋ ಮಹಾನಿರ್ದೇಶಕ ಚಿಯು ಕುವೊ - ಚೆಂಗ್ ಅವರನ್ನು ತೈವಾನ್‌ನ ರಕ್ಷಣಾ ಮಂತ್ರಿಯಾಗಿ ನೇಮಕ ಮಾಡಲಾಗಿದೆ.
ಇತ್ತೀಚಿನ ತಿಂಗಳುಗಳಲ್ಲಿ ಚೀನಾ, ತೈವಾನ್ ಸುತ್ತಮುತ್ತ ತನ್ನ ಮಿಲಿಟರಿ ಚಟುವಟಿಕೆಗಳನ್ನು ಹೆಚ್ಚಿಸಿದ್ದು, ತೈವಾನ್‌ನ ಕೆಲ ಭಾಗಗಗಳನ್ನು ತನ್ನ ಪ್ರದೇಶ ಹೇಳಿಕೊಳ್ಳುತ್ತಿದೆ.