ಬಾಗ್ಲಾನ್ (ಅಫ್ಘಾನಿಸ್ತಾನ): ತಾಲಿಬಾನ್ ಉಗ್ರರು ನಡೆಸಿದ ಬಾಂಬ್ ದಾಳಿಯಲ್ಲಿ ಎಂಟು ಮಂದಿ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಅಫ್ಘಾನಿಸ್ತಾನದ ಬಾಗ್ಲಾನ್ ಪ್ರಾಂತ್ಯದಲ್ಲಿ ನಡೆದಿದೆ.
ಎರಡು ಸೇನಾ ವಾಹನಗಳು ನಾಶವಾಗಿದ್ದು, ಭದ್ರತಾ ಪಡೆಯ ಮತ್ತಿಬ್ಬರು ಸದಸ್ಯರು ನಾಪತ್ತೆಯಾಗಿದ್ದಾರೆ ಎಂದು ಟೋಲೊ ನ್ಯೂಸ್ ವರದಿ ಮಾಡಿದೆ. ದಾಳಿಯ ಬಗ್ಗೆ ತಾಲಿಬಾನ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ: ಅಫ್ಘಾನಿಸ್ತಾನದ ಹೈಕೋರ್ಟ್‌ನ ಇಬ್ಬರು ಮಹಿಳಾ ನ್ಯಾಯಮೂರ್ತಿಗಳ ಹತ್ಯೆ
ಮೃತದೇಹಗಳನ್ನು ಪಡೆಯಲು ಆಸ್ಪತ್ರೆಗೆ ಬಂದ ಮೃತ ಸಿಬ್ಬಂದಿಯ ಕುಟುಂಬಸ್ಥರು, ಭದ್ರತಾ ಪಡೆಗಳಿಗೆ ಯಾವುದೇ ಸೌಲಭ್ಯ ನೀಡಿರಲಿಲ್ಲ ಎಂದು ಸರ್ಕಾರದ ನಿರ್ಲಕ್ಷ್ಯವನ್ನು ಟೀಕಿಸಿದರು.
ನಿನ್ನೆಯಷ್ಟೇ ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಹೈಕೋರ್ಟ್‌ನ ಇಬ್ಬರು ಮಹಿಳಾ ನ್ಯಾಯಮೂರ್ತಿಗಳನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು.