ETV Bharat / international

ಇಂಡೋನೇಷ್ಯಾದಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪನ ; ಸುನಾಮಿ ಎಚ್ಚರಿಕೆ - ಪೂರ್ವ ಮಲುಕು ಪ್ರಾಂತ್ಯದಲ್ಲಿ ಕಂಪನಿಸಿದ ಭೂಮಿ

ಭೂಕಂಪದ ಕೇಂದ್ರ ಬಿಂದು ಸ್ಥಳದಿಂದ 1,000 ಕಿಮೀ (621 ಮೈಲುಗಳು) ಒಳಗಿನ ಕರಾವಳಿಯಲ್ಲಿ ಸುನಾಮಿ ಅಲೆಗಳು ಕಂಡು ಬರುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದೆ..

7.6 magnitude earthquake hits Indonesia
ಇಂಡೋನೇಷ್ಯಾದಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪನ; ಸುನಾಮಿ ಎಚ್ಚರಿಕೆ
author img

By

Published : Dec 14, 2021, 11:30 AM IST

ಜಕಾರ್ತ : ಇಂಡೋನೇಷ್ಯಾದ ಪೂರ್ವದ ಮಲುಕು ಪ್ರಾಂತ್ಯದಲ್ಲಿ ಪ್ರಬಲ ಭೂಕಂಪನವಾಗಿದ್ದು, ರಿಕ್ಟರ್‌ ಮಾಪಕದಲ್ಲಿ 7.6 ತೀವ್ರತೆ ದಾಖಲಾಗಿದೆ.

ಮಂಗಳವಾರ ಮಧ್ಯಾಹ್ನ 3:20ರ ಸುಮಾರಿಗೆ ಮೌಮೆರೆಯಿಂದ ಉತ್ತರಕ್ಕೆ 95 ಕಿ.ಮೀ ದೂರದಲ್ಲಿ ಕಂಪನದ ಕೇಂದ್ರ ಬಿಂದುವಾಗಿದೆ. ಹೀಗಾಗಿ, ಫ್ಲೋರ್ಸ್ ಸಮುದ್ರದ ಸಮೀಪದ ಕರಾವಳಿಯಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ.

75.9 ಕಿ.ಮೀ ಆಳವಿರುವ ಭೂಕಂಪನ ಕೇಂದ್ರವು ಆರಂಭದಲ್ಲಿ 7.758 ಡಿಗ್ರಿ ದಕ್ಷಿಣ ವಿಸ್ತಾರ ಹಾಗೂ 122.313 ಡಿಗ್ರಿ ಪೂರ್ವ ರೇಖಾಂಶದಲ್ಲಿದೆ ಎಂದು ನ್ಯಾಶನಲ್ ಓಷಿಯಾನಿಕ್ ಅಂಡ್ ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್‌ ಹೇಳಿದೆ.

ಭೂಕಂಪದ ಕೇಂದ್ರ ಬಿಂದು ಸ್ಥಳದಿಂದ 1,000 ಕಿಮೀ (621 ಮೈಲುಗಳು) ಒಳಗಿನ ಕರಾವಳಿಯಲ್ಲಿ ಸುನಾಮಿ ಅಲೆಗಳು ಕಂಡು ಬರುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದೆ.

ಕಳೆದ ಶನಿವಾರ ರಾತ್ರಿ ಕೂಡ ಮಲುಕು ಪ್ರಾಂತ್ಯದಲ್ಲಿ 5.6 ತೀವ್ರತೆಯ ಭೂಕಂಪ ಸಂಭವಿಸಿತ್ತು.

ಇದನ್ನೂ ಓದಿ: ಚೀನಾ- ರಷ್ಯಾ ನಾಯಕರ ಮಧ್ಯೆ ವರ್ಚುಯಲ್​ ಸಭೆ.. ಅಮೆರಿಕಾಕ್ಕೆ ಸೆಡ್ಡು ಹೊಡೆಯಲಿದ್ದಾರಾ ಉಭಯ ನಾಯಕರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.