ಜಕಾರ್ತ: ಇಂಡೋನೇಷ್ಯಾದ ಮಧ್ಯ ಭಾಗದಲ್ಲಿ ಶನಿವಾರ 6.2 ತೀವ್ರತೆಯ ಭೂಕಂಪನ ಸಂಭವಿಸಿದ್ದು, ಯಾವುದೇ ಸುನಾಮಿಯ ಸಂಭವನೀಯತೆಯಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಳಗ್ಗೆ 7.43 ಕ್ಕೆ (ಸ್ಥಳೀಯ ಸಮಯ) ಭೂಕಂಪನ ಸಂಭವಿಸಿದೆ. ಭೂಕಂಪನ ಕೇಂದ್ರಬಿಂದುವಿನಿಂದ 112 ಕಿ.ಮೀ ದೂರದಲ್ಲಿರುವ ಮೆಲೊಂಗುವೇನ್ ನಗರ, ಕೆಪುಲೌವಾನ್ ತಲಾಡ್ ಜಿಲ್ಲೆಯ ನೈರುತ್ಯ ದಿಕ್ಕಿನಲ್ಲಿ ಭೂಕಂಪನ ಸಂಭವಿಸಿದೆ.
ಸಾವುನೋವಿನ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ.