ETV Bharat / international

ಪಾಕಿಸ್ತಾನದಲ್ಲಿ ತಾಲಿಬಾನ್ ಆತ್ಮಾಹುತಿ ದಾಳಿ: ಮೂವರ ಸಾವು, 20 ಮಂದಿಗೆ ಗಾಯ - ಪಾಕಿಸ್ತಾನದ ಫ್ರಾಂಟಿಯರ್ ಕಾರ್ಪ್ಸ್

ಫ್ರಾಂಟಿಯರ್ ಕಾರ್ಪ್ಸ್ ಬೆಂಗಾವಲು ವಾಹನಗಳನ್ನು ಕ್ವೆಟ್ಟಾ ನಗರದಲ್ಲಿರುವ ಹಝಾರಾ ಅಲ್ಪಸಂಖ್ಯಾತ ಸಮುದಾಯಕ್ಕೆ ರಕ್ಷಣೆ ಒದಗಿಸುವ ಸಲುವಾಗಿ ನಿಯೋಜಿಸಲಾಗಿತ್ತು. ಈ ವಾಹನಗಳ ಮೇಲೆ ಆತ್ಮಹತ್ಯಾ ದಾಳಿ ನಡೆದಿದೆ.

3 people dead, 20 injured in Quetta suicide blast
ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿ: ಮೂವರ ಸಾವು, 20 ಮಂದಿಗೆ ಗಾಯ
author img

By

Published : Sep 5, 2021, 3:18 PM IST

ಇಸ್ಲಾಮಾಬಾದ್(ಪಾಕಿಸ್ತಾನ): ಒಂದೆಡೆ ಅಫ್ಘಾನಿಸ್ತಾನದಲ್ಲಿ ನೂತನ ಸರ್ಕಾರ ರಚನೆಗೆ ಸಿದ್ಧತೆಗಳು ನಡೆಯುತ್ತಿವೆ. ಪಾಕಿಸ್ತಾನದ ಐಎಸ್​ಐ(ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ) ಮುಖ್ಯಸ್ಥರ ನೇತೃತ್ವದ ತಂಡ ತಾಲಿಬಾನಿಗಳನ್ನು ಭೇಟಿಯಾಗಿ ಚರ್ಚಿಸಲು ಮುಂದಾಗಿದೆ. ಈ ಬೆನ್ನಲ್ಲೇ ಪಾಕಿಸ್ತಾನದಲ್ಲಿ ತಾಲಿಬಾನ್ ಆತ್ಮಾಹುತಿ ಬಾಂಬ್ ದಾಳಿ ನಡೆಸಿದೆ.

ಇಲ್ಲಿನ ಕ್ವೆಟ್ಟಾ ನಗರದಲ್ಲಿ ಭಾನುವಾರ ನಡೆದ ದಾಳಿಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ. 20 ಮಂದಿ ಗಾಯಗೊಂಡಿದ್ದಾರೆ ಎಂದು ರಕ್ಷಣಾ ತಂಡಗಳು ತಿಳಿಸಿವೆ. ನಗರದ ಹೊರವಲಯದಲ್ಲಿರುವ ಫ್ರಾಂಟಿಯರ್ ಕಾರ್ಪ್ಸ್ (ಎಫ್‌ಸಿ) ಬೆಂಗಾವಲಿನ ವಾಹನಗಳ ಮೇಲೆ ದಾಳಿ ನಡೆದಿದೆ.

ಸ್ಫೋಟಕ ತುಂಬಿದ ಬೈಕ್​ನಲ್ಲಿ ಬಂದ ಉಗ್ರನೊಬ್ಬ, ಫ್ರಾಂಟಿಯರ್ ಕಾರ್ಪ್ಸ್ ಬೆಂಗಾವಲು ವಾಹನಗಳಿಗೆ ಬೈಕ್ ಅನ್ನು ಗುದ್ದಿಸಿ, ದಾಳಿ ನಡೆಸಿದ್ದಾನೆ. ಮುಂಜಾನೆ 7.30ರ ಸುಮಾರಿಗೆ ಘಟನೆ ನಡೆದಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ತಿಳಿಸಿದೆ.

ಫ್ರಾಂಟಿಯರ್ ಕಾರ್ಪ್ಸ್ ಬೆಂಗಾವಲು ವಾಹನಗಳನ್ನು ಕ್ವೆಟ್ಟಾ ನಗರದಲ್ಲಿರುವ ಹಝಾರಾ ಅಲ್ಪಸಂಖ್ಯಾತ ಸಮುದಾಯಕ್ಕೆ ರಕ್ಷಣೆ ಒದಗಿಸುವ ಸಲುವಾಗಿ ನಿಯೋಜಿಸಲಾಗಿತ್ತು. ದಾಳಿಗೊಳಗಾಗುವ ವೇಳೆ ಬೆಂಗಾವಲು ವಾಹನಗಳು ಗಸ್ತು ತಿರುಗುತ್ತಿದ್ದವು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಆಫ್ಘನ್​ನಲ್ಲಿ​ ಸರ್ಕಾರ ರಚನೆಗೆ ಚುನಾವಣೆ ಅತ್ಯಗತ್ಯ: ಇರಾನ್ ಅಧ್ಯಕ್ಷ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.