ಸಿರಿಯಾ: ಟರ್ಕಿ ಗಡಿಯಲ್ಲಿ ಸಿರಿಯಾ ಸೇನೆ ನಡೆಸಿದ ವಾಯುದಾಳಿಯಲ್ಲಿ ಟರ್ಕಿಶ್ ಸೈನಿಕರು ಸಾವನ್ನಪ್ಪಿದ್ದಾರೆ.
ಸಿರಿಯಾದ ರಾಜಧಾನಿ ಡಮಾಸ್ಕಸ್ನ ವಾಯುವ್ಯ ಪ್ರಾಂತ್ಯದ ಇಡ್ಲಿಬ್‌ನಲ್ಲಿ ನಡೆದ ವಾಯುದಾಳಿಯಲ್ಲಿ ನಮ್ಮ 29 ಸೈನಿಕರು ಹುತಾತ್ಮರಾಗಿದ್ದಾರೆ ಎಮದು ಟರ್ಕಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನು ಘಟನೆಯಲ್ಲಿ 36 ಸೈನಿಕರು ಗಾಯಗೊಂಡಿದ್ದು, ಅವರಿಗೂ ಟರ್ಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ನಿನ್ನೆ ನಡೆದ ದಾಳಿ ವೇಳೆ ಮೂವರು ಟರ್ಕಿಶ್ ಸೈನಿಕರು ಹುತಾತ್ಮರಾಗಿದ್ರು. ಫೆಬ್ರವರಿಯಲ್ಲಿ ನಡೆದ ದಾಳಿಯಲ್ಲಿ ಈವೆರೆಗೆ ಒಟ್ಟು 50 ಕ್ಕೂ ಹೆಚ್ಚು ಟರ್ಕಿ ಯೋಧರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಇಡ್ಲಿಬ್‌ನಲ್ಲಿನ ಬಂಡುಕೋರರಿಗೆ ಟರ್ಕಿ ಸೇನಾ ವಿಮಾನ ಮೊಬೈಲ್ ರಾಕೆಟ್ ಲಾಂಚರ್ ಗಳನ್ನು ನೀಡುತ್ತಿದೆ ಎಂಬ ರಷ್ಯಾದ ಗಂಭೀರ ಆರೋಪದ ಮೇರೆಗೆ ಸಿರಿಯಾ ಸೇನೆ ಈ ವಾಯುದಾಳಿ ನಡೆಸಿದೆ ಎನ್ನಲಾಗಿದೆ. ಸಿರಿಯಾ ಮತ್ತು ಟರ್ಕಿ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಲೆಸಿದೆ. ಈ ಹಿನ್ನೆಲೆ ಟರ್ಕಿ ಅಧ್ಯಕ್ಷ ರೆಜೆಪ್ ತಾಯಿಪ್ ಎಡೋರ್ಗನ್ ಅಂಕಾರಾದಲ್ಲಿ ತುರ್ತು ರಕ್ಷಣಾ ಸಭೆ ನಡೆಸಿದ್ದು, ಟರ್ಕಿ ಸೇನೆ ಕೂಡ ಸಿರಿಯಾಗೆ ತಿರುಗೇಟು ನೀಡುವ ಎಚ್ಚರಿಕೆ ನೀಡಿದೆ.