ಕಾಬೂಲ್: ಅಪಘಾನಿಸ್ತಾನ ರಾಷ್ಟ್ರೀಯ ರಕ್ಷಣಾ ಮತ್ತು ಭದ್ರತಾ ಪಡೆಗಳು, ಹೆಲ್ಮಂಡ್‌ನ ನಾವೇ-ಇ-ಬರಾಕ್‌ಜೈನಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ದಾಳಿಯಲ್ಲಿ ಇಬ್ಬರು ಕಮಾಂಡರ್‌ಗಳು ಸೇರಿದಂತೆ ಸುಮಾರು 25 ತಾಲಿಬಾನ್ ಉಗ್ರರು ಸಾವನ್ನಪ್ಪಿದ್ದಾರೆ. ಹಾಗೂ 8 ಮಂದಿ ಗಾಯಗೊಂಡಿರುವುದಾಗಿ ಸೇನೆಯು ಮಾಹಿತಿ ನೀಡಿದೆ.
ಓದಿ: ಪುಲ್ವಾಮ ಮಾದರಿಯಲ್ಲಿ ಸೈನಿಕರ ಮೇಲೆ ದಾಳಿ... 31 ಸಾವು, 24 ಜನರಿಗೆ ಗಾಯ!
ಭದ್ರತಾ ಪಡೆಗಳ ನೆಲೆಗಳ ಮೇಲೆ ಉಗ್ರರು ದಾಳಿ ನಡೆಸಲು ಯತ್ನಿಸುತ್ತಿದ್ದ ಕಾರಣ, ಈ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಉಗ್ರರ ಆರು ಅಡಗು ತಾಣಗಳ ಮೇಲೆ ದಾಳಿ ನಡೆಸಲಾಗಿದೆ.
ಕೆಲ ದಿನಗಳ ಹಿಂದೆ ಅಪಘಾನಿಸ್ತಾನದಲ್ಲಿ ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡು ಪುಲ್ವಾಮಾ ಮಾದರಿಯಲ್ಲಿ ಆತ್ಮಾಹುತಿ ಕಾರು ಬಾಂಬ್ ಸ್ಫೋಟಿಸಲಾಗಿತ್ತು. ಘಟನೆಯಲ್ಲಿ ಭದ್ರತಾ ಸಿಬ್ಬಂದಿ ಸೇರಿದಂತೆ 31 ಜನ ಮೃತಪಟ್ಟಿದ್ದರು.