ಮಾಸ್ಕೊ: ಅಫ್ಘಾನಿಸ್ತಾನ ಸೇನೆಯ ವೈಮಾನಿಕ ದಾಳಿಯಲ್ಲಿ ತಾಲಿಬಾನ್ ಭಯೋತ್ಪಾದನಾ ಸಂಘಟನೆಯ ಒಬ್ಬ ಮುಖಂಡ ಸೇರಿದಂತೆ 21 ಉಗ್ರರು ಹತರಾಗಿದ್ದಾರೆ.
ಇಲ್ಲಿನ ಸ್ಥಳೀಯ ಸುದ್ದಿ ಮಾಧ್ಯಮ ವರದಿಯ ಪ್ರಕಾರ, ಶುಕ್ರವಾರ ತಡ ರಾತ್ರಿ ಘಜ್ನಿ ಪ್ರಾಂತ್ಯದಲ್ಲಿ ಆಫ್ಘನ್ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ 6 ಉಗ್ರರು ಹತರಾದರು. ಶೋಲಗ್ರಾಹ್ ಜಿಲ್ಲೆಯಲ್ಲಿನ ಬಲ್ಖ್ನಲ್ಲಿ ನಡೆದ ಮತ್ತೊಂದು ಏರ್ಸ್ಟ್ರೈಕ್ಗೆ 15 ಜನ ಉಗ್ರರು ಬಲಿಯಾಗಿದ್ದಾರೆ.
ನ್ಯಾಟೊ ನೇತೃತ್ವದ ರೆಸೂಲ್ಯೂಟ್ ಸಹಕಾರದಿಂದ ದಿಹ್ ಯಾಕ್ ಜಿಲ್ಲೆಯ ಹಡ್ಡಾ ಗ್ರಾಮದಲ್ಲಿನ ತಾಲಿಬಾನ್ ಅಡುಗು ತಾಣಗಳ ಮೇಲೆ ನಡೆಸಲಾದ ದಾಳಿಗೆ 6 ಉಗ್ರರು ಹತರಾಗಿದ್ದಾರೆ ಎಂದು ತಿಳಿದುಬಂದಿದೆ.