ಕಾಬೂಲ್ (ಅಫ್ಘಾನಿಸ್ತಾನ): ತಾಲಿಬಾನಿಗಳು ನಡೆಸಿದ ಎರಡು ಪ್ರತ್ಯೇಕ ದಾಳಿಯಿಂದಾಗಿ ಅಫ್ಘಾಸ್ತಾನದಲ್ಲಿ ಕನಿಷ್ಠ 18 ಜನ ಸಾವನ್ನಪ್ಪಿದ್ದಾರೆ
ತಾಲಿಬಾನ್ ದಂಗೆಕೋರರು ಶುಕ್ರವಾರ ತಡರಾತ್ರಿ ಪೊಲೀಸ್ ಚೆಕ್‌ಪಾಯಿಂಟ್‌ಗೆ ನುಗ್ಗಿ ಹತ್ತು ಪೊಲೀಸ್ ಅಧಿಕಾರಿಗಳನ್ನು ಕೊಂದಿದ್ದಾರೆ. ಪಾಸಾಬಂದ್ ಜಿಲ್ಲೆಯ ದೂರದ ಹಳ್ಳಿಯಲ್ಲಿ ನಡೆದ ದಾಳಿಯಲ್ಲಿ ಓರ್ವ ಪೊಲೀಸ್ ಗಾಯಗೊಂಡಿದ್ದು, ಇನ್ನೊಬ್ಬರು ಕಾಣೆಯಾಗಿದ್ದಾರೆ ಎಂದು ಪಶ್ಚಿಮ ಘೋರ್‌ನ ಸ್ಥಳೀಯ ಪೊಲೀಸ್ ಮುಖ್ಯಸ್ಥ ಫಕ್ರುದ್ದೀನ್ ತಿಳಿಸಿದರು.
ಪೂರ್ವ ಖೋಸ್ಟ್ ಪ್ರಾಂತ್ಯದಲ್ಲಿ ಮಾಜಿ ಯೋಧನನ್ನು ಗುರಿಯಾಗಿಸಿಕೊಂಡ ಅಪರಿಚಿತ ಬಂದೂಕುಧಾರಿಗಳು ಪ್ರಾಂತ್ಯದ ಅಲಿ ಶೇರ್ ಜಿಲ್ಲೆಯಲ್ಲಿ ಕನಿಷ್ಠ ಎಂಟು ಜನರನ್ನು ಕೊಂದಿದ್ದಾರೆ ಎಂದು ಪ್ರಾಂತೀಯ ಪೊಲೀಸ್ ಮುಖ್ಯಸ್ಥ ವಕ್ತಾರ ಅಡೆಲ್ ಹೈದರ್ ಮಾಹಿತಿ ನೀಡಿದ್ದಾರೆ.