ಮಾಸ್ಕೋ(ರಷ್ಯಾ): ನೈಜೀರಿಯಾದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದೆ. ಮಧ್ಯ ನೈಜೀರಿಯಾದ ಜೋಸ್ ನಗರದ ಜೈಲಿನ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ. ಘಟನೆ ವೇಳೆ 262 ಕೈದಿಗಳನ್ನು ಪಲಾಯನ ಮಾಡಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಕಳೆದ ಭಾನುವಾರ ನಡೆದಿದ್ದ ದಾಳಿಯಲ್ಲಿ 9 ಕೈದಿಗಳು ಹಾಗೂ ನೈಜೀರಿಯಾದ ಒಬ್ಬ ಅಧಿಕಾರಿಯನ್ನು ಹತ್ಯೆ ಮಾಡಿದ್ದಾರೆ. ಭದ್ರತಾ ಪಡೆಗಳು ದಾಳಿಕೋರರಲ್ಲಿ ಒಬ್ಬನನ್ನು ಕೊಂದು ಎಂಟು ಕೈದಿಗಳನ್ನು ಮತ್ತೆ ಬಂಧಿಸಲಾಗಿದೆ.
ಬಳಿಕ ಕಾರ್ಯಾಚರಣೆಯನ್ನು ಮುಂದುವರಿಸಿರುವ ಅಲ್ಲಿನ ಭದ್ರತಾ ಪಡೆಗಳು ತಪ್ಪಿಸಿಕೊಂಡವರ ಪೈಕಿ ಏಳು ಪತ್ತೆ ಹಚ್ಚಿ ಜೈಲಿಗಟ್ಟಿದ್ದಾರೆ. ಒಬ್ಬ ಸ್ವಯಂಪ್ರೇರಣೆಯಿಂದ ಪೊಲೀಸರಿಗೆ ಶರಣಾಗಿದ್ದಾನೆ ಎಂದು ನೈಜೀರಿಯಾದ ಸಾರ್ವಜನಿಕ ಸಂಪರ್ಕ ಅಧಿಕಾರಿ ಫ್ರಾನ್ಸಿಸ್ ಎನೋಬೋರ್ ಮಾಹಿತಿ ನೀಡಿದ್ದಾರೆ.
ಅಕ್ಟೋಬರ್ ಅಂತ್ಯದಲ್ಲಿ ನೈರುತ್ಯ ನೈಜೀರಿಯಾದ ಜೈಲಿನ ಮೇಲಿನ ದಾಳಿಯ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು. ಪರಿಣಾಮವಾಗಿ 800 ಕ್ಕೂ ಹೆಚ್ಚು ಕೈದಿಗಳನ್ನು ಬಿಡುಗಡೆ ಮಾಡಿ, 200 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿತ್ತು.
ನೈಜೀರಿಯಾಗೆ ವಿಶೇಷವಾಗಿ ಇದರ ಉತ್ತರ ಭಾಗಗಳಲ್ಲಿ ಅನೇಕ ಕ್ರಿಮಿನಲ್ ಗುಂಪುಗಳ ಚಟುವಟಿಕೆಗಳು ಹಾಗೂ ಇಸ್ಲಾಮಿಕ್ ಸ್ಟೇಟ್, ಬೊಕೊ ಹರಾಮ್ ಭಯೋತ್ಪಾದಕರು (ರಷ್ಯಾದಲ್ಲಿ ಈ ಎರಡೂ ಉಗ್ರ ಸಂಘಟನೆಗಳಿಗೆ ನಿಷೇಧ) ಚಟುವಟಿಕೆಗಳಿಂದಾಗಿ ಕಂಗೆಟ್ಟು ಹೋಗಿದೆ.