ವಾಷಿಂಗ್ಟನ್ ಡಿಸಿ: ಕೊನೆ ಗಳಿಗೆಯಲ್ಲಿ ಸಂಪರ್ಕ ಕಳೆದುಕೊಂಡ ವಿಕ್ರಮ್ ಲ್ಯಾಂಡರನ್ನು ಆರ್ಬಿಟರ್ ಪತ್ತೆ ಹಚ್ಚಿದ್ದು ಥರ್ಮಲ್ ಫೊಟೋ ತೆಗೆದು ಇಸ್ರೋ ಪ್ರಧಾನ ಕಚೇರಿಗೆ ಕಳುಹಿಸಿದೆ. ಇಸ್ರೋದ ಪ್ರತಿಯೊಂದು ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಅಮೆರಿಕದ ಬಾಹ್ಯಾಕಾಶ ಸಂಸ್ಥೆ 'ನಾಸಾ', ಭಾರತೀಯ ವಿಜ್ಞಾನಿಗಳೊಂದಿಗೆ ಕೆಲಸ ಮಾಡುವ ಇಂಗಿತ ವ್ಯಕ್ತಪಡಿಸಿದೆ.
"ಬಾಹ್ಯಾಕಾಶವು ಕಠಿಣವಾಗಿದೆ" ಎಂದು ಹೇಳುವ ನಾಸಾ, ಇಸ್ರೋ ಜೊತೆಗೆ ಸೌರಮಂಡಲ ಅನ್ವೇಷಿಸುವ ಭವಿಷ್ಯದ ಅವಕಾಶಗಳನ್ನು ಎದುರು ನೋಡುತ್ತಿರುವುದಾಗಿ ಹೇಳಿದೆ.