ಹೈದರಾಬಾದ್: ಇ-ಸಿಗರೆಟ್ ಮತ್ತು ಇತರ ಧೂಮಪಾನರಹಿತ ಉತ್ಪನ್ನಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್ಒ)ಯ ಪ್ರಸ್ತಾವನೆಯನ್ನು ಅಂಗೀಕರಿಸಿದರೆ ಏಷ್ಯಾದ್ಯಂತ ಲಕ್ಷಾಂತರ ಜನ ಧೂಮಪಾನಕ್ಕೆ ಮರಳಬೇಕಾಗಬಹುದು ಎಂದು ಏಷ್ಯಾ ಪೆಸಿಫಿಕ್ ತಂಬಾಕು ಹಾನಿ ಕಡಿತ ಒಕ್ಕೂಟ(ಕ್ಯಾಫ್ರಾ) ದ ವಕೀಲರು ಹೇಳಿದ್ದಾರೆ.
ಡಬ್ಲ್ಯೂಹೆಚ್ಒನ ತಂಬಾಕು ನಿಯಂತ್ರಣ ಸಮಿತಿ ಪ್ರಕಟಿಸಿದ ಹೊಸ ವರದಿಯು ಬಹುತೇಕ ಎಲ್ಲಾ ವ್ಯಾಪರ್ಗಳನ್ನು ನಿಷೇಧಿಸಲು ಶಿಫಾರಸು ಮಾಡಿದೆ. ಇತ್ತೀಚಿನ ಡಬ್ಲ್ಯೂಹೆಚ್ಒ ಶಿಫಾರಸು ಎಲ್ಲಾ ತರ್ಕಗಳನ್ನು ಧಿಕ್ಕರಿಸುತ್ತದೆ ಎಂದು ಕ್ಯಾಫ್ರಾದ ಕಾರ್ಯನಿರ್ವಾಹಕ ಸಂಯೋಜಕರಾದ ನ್ಯಾನ್ಸಿ ಲೌಕಾಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎಲ್ಲಾ ವ್ಯಾಪಿಂಗ್ ಉತ್ಪನ್ನಗಳಿಗೆ ಪುರಾವೆ ಆಧಾರಿತ, ಸಾಮಾನ್ಯ ನಿಯಮಗಳನ್ನು ಅಳವಡಿಸಿಕೊಳ್ಳಲು ಕ್ಯಾಫ್ರಾ ಸರ್ಕಾರಗಳಿಗೆ ಕರೆ ನೀಡುತ್ತಿದೆ. ಕಳೆದ ವಾರವಷ್ಟೇ, ಯುಕೆಯ ಪ್ರಮುಖ ಆರೋಗ್ಯ ಸಂಸ್ಥೆ ಪಬ್ಲಿಕ್ ಹೆಲ್ತ್ ಇಂಗ್ಲೆಂಡ್ (ಪಿಹೆಚ್ಇ), ಧೂಮಪಾನಿಗಳು ಚಟವನ್ನು ತ್ಯಜಿಸಲು ಪ್ರಯತ್ನಿಸುತ್ತಿರುವ ನಿಕೋಟಿನ್ ವ್ಯಾಪಿಂಗ್ ಉತ್ಪನ್ನಗಳು ಅತ್ಯಂತ ಜನಪ್ರಿಯವಾಗಿವೆ. ಇವು ಚಟವನ್ನು ತ್ಯಜಿಸಲು ನೆರವು ನೀಡುತ್ತಿರುವ ಬಗ್ಗೆ ತಿಳಿಸಿದೆ ಎಂದು ಲೌಕಾಸ್ ಹೇಳಿದರು.
ಇದನ್ನೂ ಓದಿ: ಇಂದು ಜನೌಷಧಿ ದಿನ: 'ಮೋದಿ ಅಂಗಡಿ'ಯಿಂದ ಕೈಗೆಟುಕುವ ದರದಲ್ಲಿ ಔಷಧಿ ಪಡೆಯಿರಿ ಎಂದ ಪ್ರಧಾನಿ
ಇ-ಸಿಗರೆಟ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ನಿಲುವು ಧೂಮಪಾನಿಗಳು ಮತ್ತು ವ್ಯಾಪರ್‌ಗಳಿಗೆ ವಿನಾಶಕಾರಿಯಾಗಿದೆ. ಉತ್ಪನ್ನಗಳನ್ನು ನಿಯಂತ್ರಿಸುವ ಮೂಲಕ ಮಾತ್ರ ವ್ಯಾಪರ್‌ಗಳು ರಕ್ಷಿತವಾಗಿ ಉಳಿಯಬಹುದು, ಧೂಮಪಾನವನ್ನು ನಿಲ್ಲಿಸಲು ಪ್ರೋತ್ಸಾಹಿಸಬಹುದು ಮತ್ತು ಇದರ ಪರಿಣಾಮವಾಗಿ ಉತ್ತಮ ಸಾರ್ವಜನಿಕ ಆರೋಗ್ಯ ಫಲಿತಾಂಶಗಳನ್ನು ಸಾಧಿಸಬಹುದು ಎಂದು ಲೌಕಾಸ್ ಹೇಳಿದರು.