ವಾಷಿಂಗ್ಟನ್: ಹೆಚ್1-ಬಿ ವೀಸಾಗಾಗಿ ಅರ್ಜಿ ಸಲ್ಲಿಸಿರುವವರ ಆಯ್ಕೆ ಪ್ರಕ್ರಿಯೆಗಾಗಿ (ನಿಗದಿತ ಜನರಿಗೆ ವೀಸಾ ನೀಡಲು) ಎರಡನೇ ಲಾಟರಿ ಪ್ರಕ್ರಿಯೆ ನಡೆಸಲಿದೆ ಎಂದು ಯುಎಸ್‌ಸಿಐಎಸ್ (ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳು) ಘೋಷಿಸಿದೆ. ಇದರಿಂದಾಗಿ ಭಾರತದ ಐಟಿ ಕ್ಷೇತ್ರದ ಜನರಿಗೆ ಮತ್ತೊಂದು ಅವಕಾಶ ದೊರಕಿದಂತಾಗುತ್ತದೆ.
ಯುಎಸ್‌ಸಿಐಎಸ್ ಈ ವರ್ಷದ ಆರಂಭದಲ್ಲಿ ಮೊದಲ ಲಾಟರಿ ಪ್ರಕ್ರಿಯೆ ನಡೆಸಿತು. ಆದರೆ, ಈ ಪ್ರಕ್ರಿಯೆಯಿಂದಾಗಿ ಸಾಕಷ್ಟು ಜನರಿಗೆ ಹೆಚ್-1 ಬಿ ವೀಸಾ ನೀಡಲಾಗಿಲ್ಲ ಎಂದು ತಿಳಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.
ಭಾರತ ಮೂಲದ ಐಟಿ ವೃತ್ತಿಪರರಿಗೆ ಹೆಚ್-1 ಬಿ ವೀಸಾ (ವಲಸೆ ರಹಿತ ವೀಸಾ) ತುಂಬಾ ಅವಶ್ಯಕವಿದೆ. ಈ ಹಿನ್ನೆಲೆ ತಾಂತ್ರಿಕ ಪರಿಣತಿ ಹೊಂದಿರುವವರನ್ನು ವಿಶೇಷ ಉದ್ಯೋಗಗಳಿಗೆ ವಿದೇಶಿಗರನ್ನು ನೇಮಿಸಿಕೊಳ್ಳಲು ಅಮೆರಿಕ ಕಂಪನಿಗಳಿಗೆ ಯುಎಸ್‌ಸಿಐಎಸ್ ಅನುಮತಿ ನೀಡಿದೆ.
ಭಾರತ ಮತ್ತು ಚೀನಾದಂತಹ ದೇಶಗಳಿಂದ ಪ್ರತಿ ವರ್ಷ ನೂರಾರು ಉದ್ಯೋಗಿಗಳು ಅಮೆರಿಕ ಕಂಪನಿಗಳಿಗೆ ಆಯ್ಕೆಯಾಗುತ್ತಾರೆ. ಅಲ್ಲದೇ, ಆ ಕಂಪನಿಗಳು ಕೂಡ ಭಾರತ, ಚೀನಾದ ಉದ್ಯೋಗಿಗಳನ್ನು ಅವಲಂಬಿಸಿವೆ. ಹಣಕಾಸು ವರ್ಷ 2022 ರಲ್ಲಿ ಹೆಚ್ಚುವರಿ ನೋಂದಣಿ ಆಯ್ಕೆಗಳನ್ನು ಮಾಡಬೇಕಿದೆ ಎಂದು ಯುಎಸ್‌ಸಿಐಎಸ್ ನಿರ್ಧರಿಸಿದೆ.
ಜುಲೈ 28ರ ದಾಖಲಾತಿಗಳ ಆಧಾರದ ಮೇಲೆ ಹೆಚ್1 ಬಿ ವೀಸಾಗಾಗಿ ಅರ್ಜಿ ಸಲ್ಲಿಸುವ ಅವಧಿ ಆಗಸ್ಟ್ 2 ರಿಂದ ನವೆಂಬರ್ 3 ರವರೆಗೆ ಇರುತ್ತದೆ. ಆಯ್ದ ನೋಂದಣಿ ವ್ಯಕ್ತಿಗಳು ತಮ್ಮ ಮೈ ಯುಎಸ್‌ಸಿಐಎಸ್ ಖಾತೆಗಳನ್ನು ಅಪ್ಡೇಟ್ ಮಾಡಿ ಆಯ್ಕೆ ಸೂಚನೆ ಒಳಗೊಂಡಿದ್ದು, ಅರ್ಜಿಯನ್ನು ಯಾವಾಗ ಮತ್ತು ಎಲ್ಲಿ ಸಲ್ಲಿಸಬೇಕು ಎಂಬ ವಿವರಗಳನ್ನು ಒಳಗೊಂಡಿದೆ. ಎರಡನೇ ಲಾಟರಿಯನ್ನು ನಡೆಸಲು ಯುಎಸ್‌ಸಿಐಎಸ್ ನೂರಾರು ಭಾರತೀಯ ಐಟಿ ವೃತ್ತಿಪರರನ್ನು ಒಳಗೊಂಡಂತೆ ಹಲವಾರು ಅರ್ಜಿದಾರರಿಗೆ ಮತ್ತೊಂದು ಅವಕಾಶ ಒದಗಿಸುತ್ತದೆ.
ಫೆಡರಲ್ ಏಜೆನ್ಸಿ FY 2022 ಗಾಗಿ ಆಯ್ದ ನೋಂದಣಿ ಹೊಂದಿರುವ ಅರ್ಜಿದಾರರು ಮಾತ್ರ H-1B ಕ್ಯಾಪ್-ಸಬ್ಜೆಕ್ಟ್ ಅರ್ಜಿಗಳನ್ನು ಸಲ್ಲಿಸಲು ಅರ್ಹರು ಎಂದು ಯುಎಸ್‌ಸಿಐಎಸ್ ತಿಳಿಸಿದೆ.
ಇದನ್ನೂ ಓದಿ: ಹೊಸ ನಿಯಮಕ್ಕೆ ಬೆದರಿದ ಟ್ವಿಟ್ಟರ್.. ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೋ ಕಚೇರಿಗಳಿಗೆ ಬೀಗ!
ಎಫ್‌ವೈ 2022 ಗಾಗಿ ಆಯ್ದ ನೋಂದಣಿ ಹೊಂದಿರುವವರಿಗೆ ಆರಂಭಿಕ ಫೈಲಿಂಗ್ ಅವಧಿಯು ಏಪ್ರಿಲ್ 1, 2021 ರಿಂದ ಜೂನ್ 30, 2021 ರವರೆಗೆ ಇತ್ತು. ಯುಎಸ್‌ಸಿಐಎಸ್ ಹೆಚ್ -1 ಬಿ ಕ್ಯಾಪ್-ಸಬ್ಜೆಕ್ಟ್ ಅರ್ಜಿಯನ್ನು ಸರಿಯಾದ ಸೇವಾ ಕೇಂದ್ರದಲ್ಲಿ ಮತ್ತು ಫೈಲಿಂಗ್ ಅವಧಿಯಲ್ಲಿ ಸಲ್ಲಿಸಬೇಕೆಂದು ಸಂಬಂಧಿತ ನೋಂದಣಿ ಆಯ್ಕೆ ಪ್ರಕಟಣೆಯಲ್ಲಿ ಸೂಚಿಸಲಾಗಿದೆ. ಹೆಚ್ -1 ಬಿ ಅರ್ಜಿಗಳಿಗೆ ಆನ್‌ಲೈನ್ ಫೈಲಿಂಗ್ ಲಭ್ಯವಿಲ್ಲ. H-1B ಅರ್ಜಿಗಳನ್ನು ಸಲ್ಲಿಸುವವರು ಅದನ್ನು ಕೈ ಬರಹದ ಮೂಲಕ ಸಲ್ಲಿಸಬೇಕು.