ETV Bharat / international

ಸೆಪ್ಟೆಂಬರ್​ 30 ರಂದು ಅಮೆರಿಕ - ರಷ್ಯಾದ 2ನೇ ಸುತ್ತಿನ ಕಾರ್ಯತಂತ್ರದ ಸಭೆ

ಪರಮಾಣು ಶಸ್ತ್ರಾಸ್ತ್ರಗಳಿಂದ ಹಿಡಿದು ಸೈಬರ್ ಸ್ಪೇಸ್​ವರೆಗಿನ ಅಸಂಖ್ಯಾತ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಅಮೆರಿಕ - ಚೀನಾ ಸಭೆ ನಡೆಸಲಿವೆ

ಅಮೆರಿಕ - ರಷ್ಯಾ
ಅಮೆರಿಕ - ರಷ್ಯಾ
author img

By

Published : Sep 28, 2021, 6:54 AM IST

ವಾಷಿಂಗ್ಟನ್(ಅಮೆರಿಕ): ಅಮೆರಿಕ ಮತ್ತು ರಷ್ಯಾ ತಮ್ಮ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಈ ವಾರಾಂತ್ಯದಲ್ಲಿ ಮಾತುಕತೆ ನಡೆಸಲಿವೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ಪರಮಾಣು ಶಸ್ತ್ರಾಸ್ತ್ರಗಳಿಂದ ಹಿಡಿದು ಸೈಬರ್ ಸ್ಪೇಸ್​ವರೆಗಿನ ಅಸಂಖ್ಯಾತ ಭಿನ್ನಾಭಿಪ್ರಾಯಗಳನ್ನು ಕುರಿತು ಈ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎನ್ನಲಾಗಿದೆ.

ಗುರುವಾರ ಸ್ವಿಟ್ಜರ್ಲೆಂಡ್​​ ಜಿನೀವಾದಲ್ಲಿ ಅಮೆರಿಕದ ರಾಜತಾಂತ್ರಿಕ ನಿಯೋಗವು ರಷ್ಯಾದೊಂದಿಗೆ ಮಾತುಕತೆ ನಡೆಸಲಿದ್ದಾರೆ. ರಾಜ್ಯ ಉಪಕಾರ್ಯದರ್ಶಿ ವೆಂಡಿ ಶರ್ಮನ್​ ಈ ನಿಯೋಗದ ನೇತೃತ್ವ ವಹಿಸಲಿದ್ದಾರೆ.

ಜೂನ್​ನಲ್ಲಿ ನಡೆದ ಶೃಂಗಸಭೆಯಲ್ಲಿ ಅಧ್ಯಕ್ಷರಾದ ಬೈಡನ್ ಮತ್ತು ಪುಟಿನ್​ ಉಭಯ ರಾಷ್ಟ್ರಗಳ ನಡುವೆ ಇದ್ದ ಸಮಸ್ಯೆಗಳ ಕುರಿತು ಚರ್ಚಿಸಿದ್ದರು. ಬಳಿಕ ಜುಲೈನಲ್ಲಿ ಒಂದು ಸುತ್ತಿನ ಸಭೆ ನಡೆದಿದ್ದು ಮುಂದುವರಿದ ಭಾಗವಾಗಿ ಗುರುವಾರ(ಸೆಪ್ಟೆಂಬರ್-30) ಎರಡನೇ ಸುತ್ತಿನ ಸಭೆ ನಡೆಯಲಿದೆ.

ಈ ಸಭೆಯು ಶಸ್ತ್ರಾಸ್ತ್ರ ನಿಯಂತ್ರಣ ಮತ್ತು ಅಪಾಯ ಕಡಿಮೆ ಮಾಡುವ ಕ್ರಮಗಳಿಗೆ ಅಡಿಪಾಯ ಹಾಕಲು ಯತ್ನಿಸುತ್ತದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ತಿಳಿಸಿದೆ. ಶೆರ್ಮನ್​ ಜಿನೀವಾದಿಂದ ಬರ್ನ್​ಗೆ ಮತ್ತು ಅಲ್ಲಿಂದ ಉಜ್ಬೇಕಿಸ್ತಾನಕ್ಕೆ ಪ್ರಯಾಣ ಬೆಳೆಸುತ್ತಾರೆ. ಜತೆಗೆ ಅಕ್ಟೋಬರ್​ ಆರು ಮತ್ತು ಏಳರಂದು ಅವರು ಭಾರತದ ಪ್ರವಾಸ ಕೈಗೊಳ್ಳಲಿದ್ದಾರೆ.

ಜುಲೈನಲ್ಲಿ ಉಭಯ ರಾಷ್ಟ್ರಗಳ ನಡುವೆ ಮೊದಲ ಸುತ್ತಿನ ಸಭೆ ನಡೆದಿದ್ದು, ಅದರಲ್ಲಿ ಅರ್ಥಪೂರ್ಣ ಚರ್ಚೆ ನಡೆಸಲಾಗಿತ್ತು. ಬಳಿಕ ಭೇಟಿಯಾಗುವ ಕುರಿತು ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ ಎಂದು ಅಮೆರಿಕ ತಿಳಿಸಿದೆ.

ಅಲ್ಲದೇ, ಈ ಸಭೆಯಲ್ಲಿ ಭಾಗಿಯಾಗಿದ್ದ ವಿದೇಶಾಂಗ ಇಲಾಖೆಯ ಅಧಿಕಾರಿಯೊಬ್ಬರು, ರಷ್ಯಾದೊಂದಿಗಿನ ಮಾತುಕತೆಯಿಂದ ಸಂತೋಷವಾಗಿದೆ. ಇದು ಶಸ್ತ್ರಾಸ್ತ್ರ ನಿಯಂತ್ರಣ ಮತ್ತು ಇತರ ಕಾರ್ಯತಂತ್ರದ ಸಮಸ್ಯೆಗಳ ಬಗ್ಗೆ ನಿರಂತರವಾಗಿ ಮಾತುಕತೆಗೆ ಬುನಾದಿ ಎಂದಿದ್ದರು.

ಇದನ್ನೂ ಓದಿ: ದಿನಕ್ಕೊಂದು ರೂಲ್ಸ್.. ಇನ್ಮೇಲೆ ಅಫ್ಘಾನಿಸ್ತಾನದಲ್ಲಿ ಗಡ್ಡದ ಶೇವ್​, ಟ್ರಿಮ್​ ಮಾಡುವುದು ನಿಷಿದ್ಧ..

ಯುಎಸ್-ರಷ್ಯಾ ಸಭೆ ಕೇವಲ ಪರಮಾಣು ಶಸ್ತ್ರಾಸ್ತ್ರ ನಿಯಂತ್ರಣಕ್ಕೆ ಸೀಮಿತವಾಗಿಲ್ಲ. ಬಾಹ್ಯಾಕಾಶ, ಕೃತಕ ಬುದ್ಧಿಮತ್ತೆ, ಸೈಬರ್ ವಿಷಯಗಳ ಬಳಕೆ ಬಗ್ಗೆಯೂ ಚರ್ಚಿಸಲಾಗುತ್ತದೆ.

ಇನ್ನೂ ರಷ್ಯಾ ಅಧಿಕಾರಿಗಳು ಅಮೆರಿಕದ ಕ್ಷಿಪಣಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅಮೆರಿಕ ಕ್ಷಿಪಣಿಯು ರಷ್ಯಾವನ್ನು ಗುರಿಯಾಗಿಸಿಲ್ಲ. ಬದಲಿಗೆ ಇರಾನ್​ ಮತ್ತು ಉತ್ತರ ಕೊರಿಯಾ ಮೇಲೆ ದಾಳಿ ನಡೆಸುವ ಸಾಧ್ಯತೆಯಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.